ನವದೆಹಲಿ:ಔಷಧಿಯ ಉದ್ದೇಶಕ್ಕಾಗಿ ನವಿಲುಗಳನ್ನು ಅವ್ಯಾಹತವಾಗಿ ಹತ್ಯೆ ಮಾಡಲಾಗುತ್ತಿದೆ. ಇವುಗಳನ್ನು ಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದ್ದರೂ, ಪೊಲೀಸರ ಕಣ್ಣುತಪ್ಪಿಸಿ ಈ ದಂಧೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಲೇ ಇದೆ.
ಅದೇ ರೀತಿಯ ಒಂದು ಗ್ಯಾಂಗ್​ ಅನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಚೀನಾಗೆ ಅಕ್ರಮವಾಗಿ ಸುಮಾರು 21 ಲಕ್ಷ ನವಿಲು ಗರಿಗಳನ್ನು ಸಾಗಿಸುತ್ತಿದ್ದರು. ಇದೀಗ ಕಸ್ಟಮ್ಸ್ ಅಧಿಕಾರಿಗಳು ಇವುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಹು ಭಾರದ ಕಂಟೇನರ್​ ಅನ್ನು ಗ್ಯಾಂಗ್​ ಒಂದು ಒಯ್ಯುತ್ತಿತ್ತು. ಇದನ್ನು ನೋಡಿ ಕಸ್ಟಮ್ಸ್​ ಅಧಿಕಾರಿಗಳಿಗೆ ಸಂದೇಹ ಬಂದಿದೆ. ನಂತರ ಅವರನ್ನು ವಿಚಾರಿಸಿದಾಗ ಇದು ಪಿವಿಸಿ ಪೈಪ್​ ಎಂದು ಹೇಳಿದ್ದಾರೆ. ಪೊಲೀಸರು ಕಂಟೇನರ್​ ತೆರೆದಾಗ ಮೇಲ್ಭಾಗದಲ್ಲಿ ಪೈಪ್​ ಇತ್ತು.
ನಂತರ ಅದನ್ನು ಪರಿಶೀಲನೆ ಮಾಡಿದಾಗ ಕೆಳಭಾಗದಲ್ಲಿ ನವಿಲುಗರಿಗಳು ಇದ್ದವು. ಸುಮಾರು 2,565 ಕೆಜಿ ತೂಕದ ನವಿಲು ಗರಿ ಇದಾಗಿದ್ದವು. ಇವುಗಳನ್ನು ಆರೋಪಿಗಳು ಚೀನಾಗೆ ರಫ್ತು ಮಾಡುತ್ತಿದ್ದರು. ತನಿಖೆ ನಂತರ ಇದನ್ನು ಔಷಧಿ ಉದ್ದೇಶಕ್ಕಾಗಿ ಕಳ್ಳಸಾಗಣಿಕೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ವಶಪಡಿಸಿಕೊಂಡಿರುವ ನವಿಲು ಗರಿಗಳ ಒಟ್ಟು ಮೊತ್ತ 5.25 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತಿಯನ್ನು ಕೊಲ್ಲಲು ಸುಪಾರಿ ಕೊಟ್ಟ ಪತ್ನಿ- ₹6 ಲಕ್ಷ ಕೊಟ್ಟ ಪುತ್ರ- ಬೆಂಗಳೂರಲ್ಲಿ ಭಯಾನಕ ಘಟನೆ!

ಪತಿಯನ್ನು ಕೊಲ್ಲಲು ಸುಪಾರಿ ಕೊಟ್ಟ ಪತ್ನಿ- ₹6 ಲಕ್ಷ ಕೊಟ್ಟ ಪುತ್ರ- ಬೆಂಗಳೂರಲ್ಲಿ ಭಯಾನಕ ಘಟನೆ!

ಅಮ್ಮನಿಗಾಗಿ ಪ್ರೀತಿಯನ್ನೇ ತ್ಯಾಗ ಮಾಡಿದೆ… ಈಗ ನೋಡಿದ್ರೆ ಇವರಿಗೆ ಸೆಕ್ಸ್​ ಎಂದರೆ ಅಲರ್ಜಿ, ಏನು ಮಾಡಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
