ನವದೆಹಲಿ:ತಂತ್ರಜ್ಞಾನ ಮುಂದುವರೆದಂತೆಲ್ಲಾ ಹೆಚ್ಚು ಹೆಚ್ಚು ದೌರ್ಜನ್ಯ, ಮೋಸ ಪ್ರಕರಣಗಳು ಬೆಳೆಯುತ್ತಲೇ ಸಾಗಿದೆ. ಅದರಲ್ಲಿಯೂ ಸಾಮಾಜಿಕ ಜಾಲತಾಣ ಇಡೀ ಜಗತ್ತನ್ನು ಎಷ್ಟು ಹತ್ತಿರ ಮಾಡುತ್ತಿದೆಯೋ, ಅಷ್ಟೇ ಅಪಾಯಕಾರಿಯಾಗಿಯೂ ಗುರುತಿಸ್ಪಡುತ್ತಿದೆ, ಸೈಬರ್​ ಕ್ರೈಂಗಳ ಸಂಖ್ಯೆಯೂ ಹೆಚ್ಚುತ್ತಲೇ ಸಾಗಿದೆ.
ಅಂಥದ್ದೇ ಒಂದು ಆತಂಕದ ವಿಷಯವನ್ನು ವಿಶ್ವಸಂಸ್ಥೆ ಹಾಗೂ ಡಿಎನ್​ಎ ಆ್ಯನಲಿಸೀಸ್ ನಡೆಸಿರುವ ಸಮೀಕ್ಷೆಯಿಂದ ಹೊರಬಂದಿದೆ. ಇದಕ್ಕಾಗಿಯೇ ವಿವಿಧ ಹೆಸರುಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಚಾಲೆಂಜ್​ಗಳು, ಫೋಟೋ ಸ್ಪರ್ಧೆಗಳು ಇತ್ಯಾದಿಗಳಿಗೆ ಮಹಿಳೆಯರು ತನ್ನ ಫೋಟೋಗಳನ್ನು ಅಪ್​ಲೋಡ್​ ಮಾಡುವಾಗ 100 ಬಾರಿ ಯೋಚಿಸಿ ಎಂದು ಪದೇ ಪದೇ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ.
ತಮ್ಮ ತೀರಾ ವೈಯಕ್ತಿಯ ವಿವರಗಳನ್ನು ಫೀಲಿಂಗ್​ ಬ್ಯಾಡ್​, ಫೀಲಿಂಗ್​ ಲೋನ್ಲಿ… ಇತ್ಯಾದಿ ಮೂಲಕ ಸಾರ್ವಜನಿಕವಾಗಿ ವ್ಯಕ್ತಪಡಿಸುವುದನ್ನೂ ನಿಲ್ಲಿಸಬೇಕಿದೆ ಎಂದು ಎಚ್ಚರಿಕೆಯನ್ನೂ ಕೊಡಲಾಗಿದೆ. ಇಂಥ ಮಹಿಳೆಯರ ಮೇಲೆ ಕಣ್ಣಿಡುವ ಕೆಲವರು ಅವರ ಭಾವನೆಗಳನ್ನು ತಿಳಿದುಕೊಂಡು ದೌರ್ಜನ್ಯ ಎಸಗುತ್ತಿರುವ ಬಗ್ಗೆ ಇದಾಗಲೇ ಹಲವಾರು ಮಂದಿ ಎಚ್ಚರಿಕೆ ನೀಡಿದ್ದಾರೆ.
ವಿಶ್ವ ಸಂಸ್ಥೆಯು, ಭಾರತ ಸೇರಿದಂತೆ ವಿಶ್ವದ 22 ರಾಷ್ಟ್ರಗಳಲ್ಲಿ ಈ ಸಮೀಕ್ಷೆ ನಡೆಸಿತ್ತು. ಇದಕ್ಕಾಗಿ ಪ್ರತಿ ರಾಷ್ಟ್ರದಿಂದ 15 ರಿಂದ 25 ವರ್ಷದೊಳಗಿನ 14 ಸಾವಿರಕ್ಕಿಂತ ಹೆಚ್ಚು ಮಹಿಳೆಯರನ್ನೂ ಆಯ್ಕೆ ಮಾಡಲಾಗಿತ್ತು.
ಇದು ನೀಡಿರುವ ವರದಿಯ ಪ್ರಕಾರ ಜಾಗತಿಕವಾಗಿ ಶೇ. 35ರಷ್ಟು ಮಹಿಳೆಯರು ವಿವಿಧ ತೆರೆನಾದ ಸೈಬರ್ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇವರ ಪೈಕಿ ಶೇ.60ರಷ್ಟು ಮಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕವೇ ಹಿಂಸೆ ನೀಡಲಾಗುತ್ತಿದೆ. ಈ ಕಾರಣದಿಂದ ಸುಮಾರು ಶೆ. 20ರಷ್ಟು ಮಹಿಳೆಯರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿಷ್ಕ್ರೀಯಗೊಳಿಸಿದ್ದಾರೆಂದು ತಿಳಿಸಿದೆ.
ಇದನ್ನೂ ಓದಿ:ಫೇಸ್​ಬುಕ್​ನಲ್ಲಿ ಕಪಲ್​ ಚಾಲೆಂಜ್…​ ಎಚ್ಚರ ಎಚ್ಚರ… ಪೊಲೀಸರು ಬಿಚ್ಚಿಟ್ಟಿದ್ದಾರೆ ಭಯಾನಕ ಮಾಹಿತಿ
ಭಾರತದಲ್ಲಿ ದೆಹಲಿ ಮತ್ತು ಇತರ ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಇದರಿಂದ ಇಂಟರ್ ನೆಟ್ ಮೂಲಕ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಶೇ.36ರಷ್ಟು ಹೆಚ್ಚಾಗುತ್ತಿದೆಯೆಂದು ತಿಳಿದುಬಂದಿದೆ. ಆದರೆ ವಿಷಾದದ ಸಂಗತಿ ಎಂದರೆ ಶೇ. 25ರಷ್ಟು ಮಂದಿ ಮಾತ್ರ ಶಿಕ್ಷೆಗೊಳಗಾಗುತ್ತಿದ್ದಾರೆ.
ಡಿಎನ್​ಎ ಆ್ಯನಲಿಸೀಸ್ ನಡೆಸಿರುವ ಸಂಶೋಧನೆಯ ಪ್ರಕಾರ ಕೂಡ ಜಗತ್ತಿನ ಶೇ. 35ರಷ್ಟು ಮಹಿಳೆಯರು ವಿವಿಧ ಮಾದರಿಯ ಸೈಬರ್ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರಂತೆ. ಅದರಲ್ಲಿಯೂ 25 ವರ್ಷದೊಳಗಿನ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಮೋಸ, ವಂಚನೆ, ದೌರ್ಜನ್ಯಕ್ಕೆ ಒಳಗಾಗುತ್ತಿರುವ ಅಂಶವನ್ನು ಈ ವರದಿ ಬಿಚ್ಚಿಟ್ಟಿದೆ.
ಇದು ನಡೆಸಿರುವ ಸಮೀಕ್ಷೆಯ ಪ್ರಕಾರ ಜಗತ್ತಿನಾದ್ಯಂತ 400 ದಶಲಕ್ಷಕ್ಕಿಂತಲೂ ಹೆಚ್ಚಿನ ಮಹಿಳೆಯರು ಸೈಬರ್ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.
ಹಿಂಸೆ ಹೇಗೆ?ಈ ಎಲ್ಲಾ ವರದಿಗಳು ಹೇಳಿರುವ ಪ್ರಕಾರ ಶೇ. 39ರಷ್ಟು ಮಹಿಳೆಯರಿಗೆ ಫೇಸ್​ಬುಕ್ ಮೂಲಕ ಬೇಡದ ಸಂದೇಶಗಳು, ಕರೆಗಳು ಬರುತ್ತಿವೆ, ಶೇ.29ರಷ್ಟು ಮಂದಿಗೆ ಇನ್​ಸ್ಟಾಗ್ರಾಂ ಮೂಲಕ ಅನವಶ್ಯಕ ಹಿಂಸೆ ನೀಡಲಾಗುತ್ತಿದ್ದರೆ, ಮೆಸೇಜಿಂಗ್ ಆ್ಯಪ್, ವಾಟ್ಸ್​ಆ್ಯಪ್​ ಮೂಲಕ ಶೇ. 14ರಷ್ಟು ಮಹಿಳೆಯರು ಸೈಬಲ್​ ಹಿಂಸೆಗೆ ಒಳಗಾಗುತ್ತಿದೆ. ಇನ್ನೂ ಶೇ. 10 ಸ್ನ್ಯಾಪ್ ಚಾಟ್, ಶೇ. 9 ಟ್ವಿಟ್ಟರ್, ಶೇ. 6 ಟಿಕ್​ಟಾಕ್ ನಲ್ಲಿ ಮಹಿಳೆಯರು ಹಿಂಸೆಗೊಳಗಾಗುತ್ತಿದ್ದಾರೆ.
ಶರಣಾಗಲು ಹೇಳಿದರೆ ಉಗ್ರರಿಂದ ಗುಂಡಿನ ದಾಳಿ: ಇಬ್ಬರನ್ನು ಹೊಡೆದುರುಳಿಸಿದ ಯೋಧರು

ಕಲಬುರಗಿಯಲ್ಲಿ ಗುಂಡಿನ ಸದ್ದು: ಕೊಲೆ ಮಾಡಿ ಪರಾರಿಯಾಗುತ್ತಿದ್ದನ ಗುಂಡುಹಾರಿಸಿ ಬಂಧನ

ಗಂಡ ಕರೊನಾದಿಂದ ಮೃತಪಟ್ಟದ್ದಕ್ಕೆ ಹೆಂಡ್ತಿ ವಿರುದ್ಧ ದಾಖಲಾಯ್ತು ಎಫ್​ಐಆರ್!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − fourteen =
Remember me
