ಮುಂಬೈ:ಆನ್​ಲೈನ್​ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅಂಥದ್ದೇ ಒಂದು ಘಟನೆ ಮುಂಬೈನಲ್ಲಿ ನಡೆದಿದೆ. 550 ರೂಪಾಯಿಗಳ ವಿಸ್ಕಿಯನ್ನು ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ ಮಹಿಳೆ, ಐದೂವರೆ ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ! ಈಗ ಹಣ ವಾಪಸು ಕೊಡಿಸಿ ಎಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದಾಳೆ.
ಆಗಿದ್ದೇನೆಂದರೆ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆಗೆ ವಿಸ್ಕಿ ಕುಡಿಯಬೇಕು ಎನ್ನಿಸಿದೆ. ರಾತ್ರಿ ಸುಮಾರು ಒಂಬತ್ತು ಗಂಟೆಯಾಗಿದ್ದರಿಂದ ವೈನ್​ಶಾಪ್​ಗೆ ಹೋಗಿ ಅದನ್ನು ಖರೀದಿ ಮಾಡುವುದು ಆಕೆಗೆ ಸರಿ ಎನಿಸಲಿಲ್ಲ. ಆದ್ದರಿಂದ ಆನ್​ಲೈನ್​ನಲ್ಲಿ ಹುಡುಕಾಟ ನಡೆಸಿದ್ದಾಳೆ. ಮನೆ ಬಾಗಿಲಿಗೆ ವಿಸ್ಕಿಯನ್ನು ತಂದುಕೊಡುವವರು (ಹೋಂ ಡೆಲಿವರಿ) ಯಾರಾದರೂ ಇದ್ದಾರೆಯೇ ಎಂದು ಜಾಲಾಡಿದ್ದಾಳೆ.
ಕೊನೆಗೂ ಆಕೆಯ ಆಸೆ ಈಡೇರಿದೆ. ಒಂದು ನಂಬರ್​ ಆನ್​ಲೈನ್​ನಲ್ಲಿ ಈಕೆಗೆ ಸಿಕ್ಕಿದೆ. ಅದಕ್ಕೆ ಕರೆ ಮಾಡಿದಾಗ ಅವರು ಮೇಡಂ, ನಾನು ಅಂಗಡಿಯ ಮಾಲೀಕ. ಸದ್ಯ ಅಂಗಡಿಯ ಬಾಗಿಲು ಮುಚ್ಚಿದೆ. ನೀವೇನೂ ಚಿಂತೆ ಮಾಡಬೇಡಿ. ನಿಮಗೆ ಯಾವ ಬ್ರ್ಯಾಂಡ್​ ಬೇಕು ಎಂದು ಹೇಳಿ, ನಾವು ಮನೆಗೇ ತಂದುಕೊಡುತ್ತೇವೆ ಎಂದಿದ್ದಾರೆ. ಅದನ್ನು ನಂಬಿದ ಮಹಿಳೆ ಮನೆಯ ಬಾಗಿಲಿಗೆ ವಿಸ್ಕಿ ಬರುತ್ತದೆ ಎಂದು ಕನಸು ಕಂಡಿದ್ದಾಳೆ.
ಅದಕ್ಕೆ ಮೊದಲಿಗೆ ಕರೆ ಮಾಡಿದವ, ಕ್ಯೂಆರ್ ಕೋಡ್ ಮೂಲಕ 550 ರೂಪಾಯಿ ಪಾವತಿಸುವಂತೆ ಕೇಳಿದ್ದಾರೆ. ಮಹಿಳೆ ಸೂಚನೆಯಂತೆ ಕ್ಯೂಆರ್ ಕೋಡ್ ಮೂಲಕ 550 ರೂಪಾಯಿ ಕಳುಹಿಸಿದ್ದಾರೆ. ಆಗ ಆತ ಮೇಡಂ. ನಿಮಗೆ ಡೆಲಿವರಿ ಎಕ್ಸಿಕ್ಯೂಟಿವ್ ಶೀಘ್ರದಲ್ಲೇ ಕರೆ ಮಾಡುತ್ತಾರೆ ಎಂದಿದ್ದಾನೆ. ಆತನಿಗಾಗಿ ಮಹಿಳೆ ಕಾದು ಕುಳಿದಿದ್ದಾರೆ.
ನಂತರ ಇನ್ನೊಬ್ಬನ ಕರೆ ಬಂದಿದೆ. ನಾನು ಸೇಲ್ಸ್ ಎಕ್ಸಿಕ್ಯೂಟಿವ್ ಎಂದು ಹೇಳಿದ ಆತ, ಮದ್ಯವನ್ನು ಮನೆಗೆ ತಲುಪಿಸಲು ನೋಂದಣಿ ಕಡ್ಡಾಯವಾಗಿದೆ. ಅಂಗಡಿಯ ವ್ಯಕ್ತಿ ಅದಕ್ಕೆ ಸಹಾಯ ಮಾಡುತ್ತಾರೆ ಎಂದಿದ್ದಾನೆ. ನಂತರ ಇನ್ನೊಬ್ಬ ಕರೆ ಮಾಡಿ ನೋಂದಣಿಗಾಗಿ ಆನ್‌ಲೈನ್‌ನಲ್ಲಿ ಹಣ ಪಾವತಿಸುವಂತೆ ಹೇಳಿದ್ದಾನೆ. ಮಹಿಳೆ ಎಲ್ಲವನ್ನೂ ನಂಬಿಬಿಟ್ಟಿದ್ದಾರೆ. ಅವರು ಕೇಳಿದ ಕೆಲವೊಂದು ದಾಖಲೆ ನೀಡಿದ್ದಾಳೆ ಮಹಿಳೆ. ಮೊದಲಿಗೆ ಆಕೆಯ ಖಾತೆಯಿಂದ 19,051 ರೂ. ವರ್ಗಾವಣೆಯಾದ ಮೆಸೇಜ್​ ಬಂದಿದೆ. ಇದನ್ನು ನೋಡಿ ಮಹಿಳೆ ಶಾಕ್​ ಆಗಿದ್ದಾಳೆ.
ನಂತರ ಅತ್ತ ಕಡೆಯಿಂದ ಕರೆ ಬಂದು, ಕ್ಷಮಿಸಿ ಟೆಕ್ನಿಕಲ್​ ಸಮಸ್ಯೆಯಿಂದ ಹೀಗೆ ಆಗಿದೆ. ಹಣವನ್ನು ನಿಮ್ಮ ಖಾತೆಗೆ ವಾಪಸ್​ ಹಾಕುತ್ತೇವೆ. ಅದಕ್ಕಾಗಿ ಒಂದು ಓಟಿಪಿ ಬರುತ್ತದೆ, ಹೇಳಿ ಎಂದಿದ್ದಾನೆ. ನಂತರ ಮಹಿಳೆಯ ಡೆಬಿಟ್​ ಕಾರ್ಡ್​ ನಂಬರ್​, ಸಿವಿವಿ ಸಂಖ್ಯೆ ಎಲ್ಲಾ ಪಡೆದುಕೊಂಡಿದ್ದಾನೆ. ಮಹಿಳೆ ಎಲ್ಲರನ್ನೂ ನೀಡಿದ್ದಾಳೆ. ಅಷ್ಟೇ…
ಮಹಿಳೆಯ ಖಾತೆಯಿಂದ ಹಂತ ಹಂತವಾಗಿ 5.35 ಲಕ್ಷ ರೂಪಾಯಿ ಗಾಯಬ್​ ಆಗಿದ್ದು, ಈಗ ಮಹಿಳೆಗೆ ಮೋಸ ಹೋದದ್ದು ತಿಳಿದು ಪೊಲೀಸರಿಗೆ ದೂರು ದಾಖಲು ಮಾಡಿದ್ದಾಳೆ!(ಏಜೆನ್ಸೀಸ್​)
ಬಾಹುಬಲಿ ನಟ ದುಗ್ಗುಬಾಟಿ ವೈವಾಹಿಕ ಜೀವನದಲ್ಲಿ ಬಿರುಗಾಳಿ? ಎಲ್ಲಾ ಫೋಟೋ ಡಿಲೀಟ್​- ಪತ್ನಿ ಹೇಳಿದ್ದೇನು?

ದೈಹಿಕ ಸಂಪರ್ಕ ಬೆಳೆಸಿ, ಧರ್ಮ ಬೇರೆ-ಮದ್ವೆ ಬೇಡ ಎಂದ ಯುವಕ ಪೀಸ್​ ಪೀಸ್​: ಮೃತದೇಹ ಸೂಟ್​ಕೇಸ್​ನಲ್ಲಿ!

ಶಿಕ್ಷಕಿಯ ನೋಡಬಾರದ ಫೋಟೋ ನೋಡಿದ ವಿದ್ಯಾರ್ಥಿಗಳು: ಟೀಚರ್ ಕೆಲಸದಿಂದ ವಜಾ​, 99 ಕೋಟಿ ರೂ. ದಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
