ನವದೆಹಲಿ:ಇದಾಗಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ. ಕಳೆದ ಜುಲೈ 1ರಂದು ದೇಶೀಯ ಎಲ್‌ಪಿಜಿ ಸಿಲೆಂಡರ್ ಬೆಲೆ 25 ರೂಪಾಯಿ 50 ಪೈಸೆ ಹೆಚ್ಚಳವಾಗಿತ್ತು. ಆದರೆ ಈಗ ಮತ್ತೊಮ್ಮೆ ಬೆಲೆ 25 ರೂಪಾಯಿ ಹೆಚ್ಚು ಮಾಡಲಾಗಿದೆ. ನಿನ್ನೆಯಿಂದ ಅಂದರೆ ಆ.17ರಿಂದ ಹೊಸ ಬೆಲೆ ಜಾರಿಗೆ ಬಂದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಎಲ್ ಪಿಜಿ ಸಿಲೆಂಡರ್ ಬೆಲೆ ಈಗ 859 ರೂಪಾಯಿ 5 ಪೈಸೆಯಾಗಿದೆ. ಇದು ಎರಡು ದಿನಗಳ ಹಿಂದೆ 834 ರೂಪಾಯಿ 50 ಪೈಸೆಯಾಗಿತ್ತು. ಮುಂಬೈನಲ್ಲಿ 834.50 ರೂದಿಂದ 859.5 ರೂಪಾಯಿಗೆ, ಕೋಲ್ಕತಾದಲ್ಲಿ 861 ರಿಂದ ರೂ 886 ರೂಗೆ, ಚೆನ್ನೈನಲ್ಲಿ 850.50 ರೂಪಾಯಿಯಿಂದ 875.50 ರೂಪಾಯಿಗೆ ಏರಿಕೆಯಾಗಿದೆ.
14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ಗೆ ಬೆಂಗಳೂರಿನಲ್ಲಿ ಹಾಲಿ ಬೆಲೆ 862 ರೂಪಾಯಿ 50 ಪೈಸೆಯಾಗಿದೆ. ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ 897.5 ರೂ, ಗುಜರಾತ್‌ ರಾಜಧಾನಿ ಅಹಮದಾಬಾದ್‌ನಲ್ಲಿ 866.50 ರೂಪಾಯಿ ಬೆಲೆ ಇದೆ.
ಈವರ್ಷ ಸಿಲಿಂಡರ್‌ ಬೆಲೆ ನಡೆದುಬಂದ ಹಾದಿ ಹೀಗಿದೆ:ಪ್ರತಿಸಲವೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ಗ್ಯಾಸ್ ಸಿಲಿಂಡರ್‌ಗಳ (ಎಲ್‌ಪಿಜಿ ಬೆಲೆ) ಬೆಲೆಯನ್ನು ಬದಲಾಯಿಸುತ್ತವೆ. 2021 ವರ್ಷದ ಆರಂಭದಲ್ಲಿ ಜನವರಿಯಲ್ಲಿ, ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 694 ಇತ್ತು. ಇದನ್ನು ಫೆಬ್ರವರಿಯಲ್ಲಿ ರೂ 719 ಕ್ಕೆ ಏರಿಸಲಾಯಿತು. ಫೆಬ್ರವರಿ 15 ರಂದು ಅದರ ಬೆಲೆಯನ್ನು 769 ರೂ.ಗೆ ಹೆಚ್ಚಿಸಲಾಯಿತು.
ಫೆಬ್ರವರಿ 25 ರಂದು ಸಿಲಿಂಡರ್ ಬೆಲೆಯನ್ನು 794 ರೂ.ಗೆ ಏರಿಸಿದ್ದರೆ, ಕಳೆದ ಮಾರ್ಚ್ ತಿಂಗಳಲ್ಲಿ ಇದರ ಬೆಲೆ 819 ರೂ. ಆಯಿತು. ಏಪ್ರಿಲ್ ಆರಂಭದಲ್ಲಿ 10 ರೂಪಾಯಿ ಹೆಚ್ಚಳವಾಗಿತ್ತು. ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಪ್ರತಿ ಸಿಲಿಂಡರ್‌ಗೆ 819 ರೂಪಾಯಿಯಿಂದ 809 ರೂಪಾಯಿಗೆ ಇಳಿಸಲಾಯಿತು.
ಮೈ ಮುಟ್ಬೇಡಿ, ಫುಲ್‌ ಟೈಟ್‌ ಆಗಿವ್ನಿ…ಲಸಿಕೆಯಿಂದ ತಪ್ಪಿಸಿಕೊಳ್ಳಲು ಬೆಳ್ಳಂಬೆಳಗ್ಗೆ ಗ್ರಾಮಸ್ಥರ ಎಣ್ಣೆ ಸೇವನೆ!

ಗರ್ಲ್‌ಫ್ರೆಂಡ್‌ಗೆ ಸಹಾಯ ಮಾಡಲು ಹುಡುಗಿ ವೇಷ ಧರಿಸಿ ಒಳಹೋದ- ಮುಂದಾದದ್ದೆಲ್ಲಾ ಅನಾಹುತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 13 =
Remember me
