ನವದೆಹಲಿ:ಚಿತ್ರರಂಗ ಪ್ರತಿಷ್ಠಿತ ದಾದಾಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ’ ಪ್ರಕಟವಾಗಿದೆ. ಭಾರಿ ಪ್ರಚಾರ ಗಿಟ್ಟಿಸಿದ್ದ, ಬಾಕ್ಸ್​ ಆಫೀಸ್​ನಲ್ಲಿ 350 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಗಳಿಸಿ ಧೂಳೆಬ್ಬಿಸಿದ್ದ ನಟ ಅಲ್ಲು ಅರ್ಜುನ್​ ಅಭಿನಯದ ತೆಲುಗು ಚಿತ್ರ ‘ಪುಷ್ಪ’ ಸಿನಿಮಾ ವರ್ಷದ ಸಿನಿಮಾ ನಿರೀಕ್ಷೆಯಂತೆಯೇ ‘ವರ್ಷದ ಚಿತ್ರ’ ಎಂಬ ಬಿರುದು ಪಡೆದಿದೆ.
ಶೇರ್​ಷಾ(ಉತ್ತಮ ಸಿನಿಮಾ), ರಣವೀರ್ ಸಿಂಗ್​(ಉತ್ತಮ ನಾಯಕ), ಕೃತಿ ಸನೋನ್​ ಉತ್ತಮ ನಾಯಕಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ವಿಕ್ಕಿ ಕೌಶಲ್​ ಅಭಿನಯದ ‘ಸರ್ದಾರ್​ ಉದ್ಧಮ್​’ ಸೇರಿದಂತೆ ಹಲವು ಸಿನಿಮಾಗಳು, ಹಲವಾರು ವೆಬ್​ ಸಿರೀಸ್​ ಮತ್ತು ಧಾರಾವಾಹಿಗಳೂ ಈ ಪ್ರಶಸ್ತಿಗೆ ಭಾಜನವಾಗಿವೆ. ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಹಿನ್ನೆಲೆಯಲ್ಲಿ ಬಾಲಿವುಡ್‌ನ ಹಿರಿಯ ನಟಿ ಆಶಾ ಪರೇಖ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ​
ರಣವೀರ್​ ಸಿಂಗ್​ ನಟಿಸಿದ್ದ ‘83’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಅಂದುಕೊಂಡ ಮಟ್ಟಕ್ಕೆ ಈ ಚಿತ್ರ ಗಳಿಕೆ ಮಾಡಲಿಲ್ಲ. ಆದರೆ ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ಮಾಡಿರುವ ಅಭಿನಯಕ್ಕೆ ಮನ್ನಣೆ ಸಿಕ್ಕಿದ್ದು, ಅವರು ಉತ್ತಮ ನಾಯಕನಾಗಿ ಹೊರಹೊಮ್ಮಿದ್ದಾರೆ. 1983ರಲ್ಲಿ ಕ್ರಿಕೆಟ್​ ವಿಶ್ವಕಪ್​ ಗೆದ್ದ ಭಾರತ ತಂಡವನ್ನು ಆಧರಿಸಿದ ಕಬೀರ್​ ಖಾನ್​ ನಿರ್ದೇಶನದಲ್ಲಿ ಈ ಚಿತ್ರ ತಯಾರು ಮಾಡಲಾಗಿದೆ.
ಉಳಿದಂತೆ ಯಾರ ಮಡಿಲಿಗೆ ಪ್ರಶಸ್ತಿ ಬಂದಿದೆ, ಇಲ್ಲಿದೆ ನೋಡಿ ಸಂಪೂರ್ಣ ಲಿಸ್ಟ್‌ಅತ್ಯುತ್ತಮ ಸಿನಿಮಾ: ಶೇರ್​ಷಾ
ಅತ್ಯುತ್ತಮ ನಟ: ರಣವೀರ್​ ಸಿಂಗ್​
ಅತ್ಯುತ್ತಮ ನಟಿ: ಕೃತಿ ಸನೋನ್​
ಅತ್ಯುತ್ತಮ ನಿರ್ದೇಶಕ: ಕೆನ್​ ಘೋಷ್​
ಚಿತ್ರರಂಗಕ್ಕೆ ಅಪಾರ ಕೊಡುಗೆ: ಆಶಾ ಪರೇಖ್​
ಅತ್ಯುತ್ತಮ ಪೋಷಕ ನಟ: ಸತೀಶ್​ ಕೌಶಿಕ್​
ಅತ್ಯುತ್ತಮ ಫೋಷಕ ನಟಿ: ಲಾರಾ ದತ್ತಾ
ಅತ್ಯುತ್ತಮ ಖಳ ನಟ: ಆಯುಷ್​ ಶರ್ಮಾ
ವಿಮರ್ಶಕರ ಆಯ್ಕೆಯ ಅತ್ಯುತ್ತಮ ಚಿತ್ರ: ಸರ್ದಾರ್​ ಉದ್ಧಮ್​
ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟ: ಸಿದ್ದಾರ್ಥ್​ ಮಲ್ಹೋತ್ರ
ವಿಮರ್ಶಕರ ಆಯ್ಕೆಯ ಅತ್ಯುತ್ತಮ ನಟಿ ಕಿಯಾರಾ ಅಡ್ವಾಣಿ
ಜನರ ಆಯ್ಕೆಯ ಅತ್ಯುತ್ತಮ ನಟ: ಅಭಿಮನ್ಯು ದಾಸಾನಿ
ಜನರ ಆಯ್ಕೆಯ ಅತ್ಯುತ್ತಮ ನಟಿ: ರಾಧಿಕಾ ಮದನ್​
ಅತ್ಯುತ್ತಮ ಹೊಸ ನಟ: ಅಹಾನ್​ ಶೆಟ್ಟಿ
ಅತ್ಯುತ್ತಮ ವಿದೇಶಿ ಸಿನಿಮಾ: ಅನದರ್​ ರೌಂಡ್​
ಅತ್ಯುತ್ತಮ ವೆಬ್​ ಸಿರೀಸ್​: ಕ್ಯಾಂಡಿ
ವೆಬ್​ ಸಿರೀಸ್​ನಲ್ಲಿ ಅತ್ಯುತ್ತಮ ನಟ: ಮನೋಜ್​ ಭಾಜಪೇಯಿ​
ವೆಬ್​ ಸಿರೀಸ್​ನಲ್ಲಿ ಅತ್ಯುತ್ತಮ ನಟಿ: ರವೀನಾ ಟಂಡನ್​
ವರ್ಷದ ಅತ್ಯುತ್ತಮ ಟಿವಿ ಧಾರಾವಾಹಿ: ಅನುಪಮಾ
ಕಿರುತೆರೆಯ ಅತ್ಯುತ್ತಮ ನಟ: ಶಾಹೀರ್​ ಶೇಖ್​
ಕಿರುತೆರೆಯ ಅತ್ಯುತ್ತಮ ನಟಿ: ಶ್ರದ್ಧಾ ಆರ್ಯ
ಕಿರುತೆರೆಯ ಭರವಸೆಯ ನಟ: ಧೀರಜ್​ ಧೂಪರ್​
ಕಿರುತೆರೆಯ ಭರವಸೆಯ ನಟಿ: ರೂಪಾಲಿ ಗಂಗೂಲಿ
ಅತ್ಯುತ್ತಮ ಕಿರುಚಿತ್ರ: ಪೌಲಿ
ಅತ್ಯುತ್ತಮ ಹಿನ್ನೆಲೆ ಗಾಯಕ: ವಿಶಾಲ್​ ಮಿಶ್ರಾ
ಅತ್ಯುತ್ತಮ ಹಿನ್ನೆಲೆ ಗಾಯಕಿ: ಕನಿಕಾ ಕಪೂರ್​
ಅತ್ಯುತ್ತಮ ಛಾಯಾಗ್ರಹಣ: ಜಯಕೃಷ್ಣ ಗುಮ್ಮಡಿ
ಬೆಂಗಳೂರಿನ ಜೈಲಿನಲ್ಲಿದ್ದಾಕೆಗೆ ಸಿಗ್ತು ಪಾಕಿಸ್ತಾನದ ಪೌರತ್ವ: ಜೈಲಲ್ಲೇ ಮಗುಹೆತ್ತ ಈಕೆಯ ಕಥೆಯೇ ಇಂಟರೆಸ್ಟಿಂಗ್‌!

ತುಂಡು ತುಂಡು ಕತ್ತರಿಸೋದಾಗಿ ಹೇಳಿ ಎಸ್ಕೇಪ್‌ ಆದ ಕೈ ಮುಖಂಡ! ಮೂರು ದಿನವಾದ್ರೂ ಪೊಲೀಸರು ಗಪ್‌ಚುಪ್‌?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
