ಲಂಡನ್:ದಿನಕ್ಕೊಂದು ಮೊಟ್ಟೆ- ತುಂಬುವುದು ಹೊಟ್ಟೆ ಎಂಬ ನಾಣ್ಣುಡಿಯನ್ನು ಹಲವಾರು ದಶಕಗಳಿಂದ ಕೇಳುತ್ತಲೇ ಬಂದಿದ್ದೇವೆ. ಆದರೆ ಇದೀಗ ಇದರ ವ್ಯಾಖ್ಯಾನ ಬದಲಾಗಿದೆ. ಈಗ ದಿನವೂ ಮೊಟ್ಟೆ ತಿಂದರೆ ಮಧುಮೇಹ ರೋಗ ಬರುವುದು ಖಂಡಿತ ಎಂದೇ ಹೇಳಲಾಗುತ್ತಿದೆ.ಇದಕ್ಕೆ ಕಾರಣ, ಹಿಂದಿನಂತೆ ಈಗ ಅಸಲಿ ಮೊಟ್ಟೆಯ ಬದಲು ಕಲಬೆರಕೆಯ, ವಿಷಪೂರಿತ, ರಾಸಾಯನಿಕ ಅಂಶಗಳು ಇರುವ ಮೊಟ್ಟೆಗಳೇ ಸಿಗುತ್ತಿರುವುದು!
ಇಂಥದ್ದೊಂದು ಆತಂಕದ ವರದಿಯನ್ನು ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರೀಷನ್ ವರದಿ ಪ್ರಕಟಿಸಿದೆ. ಚೀನಾದ ವೈದ್ಯಕೀಯ ವಿಶ್ವವಿದ್ಯಾಲಯ ಹಾಗೂ ಕತಾರ್ ನ ಲಾಂಗಿಟ್ಯೂಡಿನಲ್ ಅಧ್ಯಯನದಿಂದ ತಿಳಿದುಬಂದಿದೆ.
ಮೊಟ್ಟೆಯಿಂದ ತಯಾರಿಸಲಾಗುವ ಉಪಹಾರಗಳು ಜಾಗತಿಕ ಮಟ್ಟದಲ್ಲಿ ಅತ್ಯಂತ ಜನಪ್ರಿಯ. ಆದರೆ ದಿನವೊಂದಕ್ಕೆ ಒಂದು ಮೊಟ್ಟೆಯನ್ನು ತಿನ್ನುವುದರಿಂದ ಮಧುಮೇಹಕ್ಕೂ ಆಹ್ವಾನ ನೀಡಿದಂತಾಗಲಿದೆ. ದಿನವೊಂದಕ್ಕೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮೊಟ್ಟೆ ಸೇವಿಸುವವರಿಗೆ ಮಧುಮೇಹ ಎದುರಾಗುವ ಸಾಧ್ಯತೆ ಶೇ.60 ರಷ್ಟು ಹೆಚ್ಚಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಸಂಶೋಧಕರು. ಸಮೀಕ್ಷೆಯಲ್ಲಿ 8,545 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.
ಇದನ್ನೂ ಓದಿ:ಲವ್​ ಜಿಹಾದಿಗಳಿಗೆ ನಡುಕ- ಈ ರಾಜ್ಯದಲ್ಲಿ ಬರಲಿದೆ ಕಠಿಣ ಕಾನೂನು
1991-2009ರ ವರೆಗೆ ನಡೆದಿರುವ ಸುದೀರ್ಘ ಅಧ್ಯಯನದಿಂದ ಈ ವಿಷಯ ತಿಳಿದುಬಂದಿದೆ. ಈ ವರದಿಯ ಅನ್ವಯ ಪುರುಷರಿಗಿಂತ ಅಧಿಕವಾಗಿ ಮಹಿಳೆಯರಲ್ಲಿ ಮಧುಮೇಹದ ಪ್ರಮಾಣ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಸಾರ್ವಜನಿಕ ಆರೋಗ್ಯ ತಜ್ಞ ಮಿಂಗ್ ಲಿ ಮಾಹಿತಿ ನೀಡಿದ್ದಾರೆ.
ಚೀನಾದಲ್ಲಿ 1991 ರಿಂದ 2009 ವರೆಗೆ ಮೊಟ್ಟೆ ಸೇವನೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಈ ಅವಧಿಯಲ್ಲಿ ಮೊಟ್ಟೆ ಸೇವನೆ ಮಾಡುವವರ ಸಂಖ್ಯೆ ದ್ವಿಗುಣಗೊಂಡಿದೆ. ಈ ಸಂದರ್ಭದಲ್ಲಿ ಸಕ್ಕರೆ ಕಾಯಿಲೆಯವರ ಪ್ರಮಾಣದಲ್ಲಿಯೂ ಏರಿಕೆ ಆಗಿದೆ. ಡಯೆಟ್ ಎನ್ನುವುದು ಟೈಪ್2 ಮಧುಮೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕಾರಣವಾಗಲಿದೆ, ಡಯೆಟ್​ನ ಅಂಶಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಪ್ರಸ್ತುತ ಮಧುಮೇಹದ ಬೆಳವಣಿಗೆಯ ಬಗ್ಗೆ ಅರಿವುದು ಅತ್ಯಂತ ಮುಖ್ಯ ಎಂದು ಮಿಂಗ್ ಲಿ ಹೇಳಿದ್ದಾರೆ.
ಅಪಘಾತದಲ್ಲಿ ಮಗ ಸತ್ತಿದ್ದಾನೆ ಎಂದು ಪಾಲಕರಿಗೆ ಗೊತ್ತಾದದ್ದು 27 ವರ್ಷಗಳ ಬಳಿಕ!

ಮರಾಠಾ ಆಯ್ತು, ಈಗ ವೀರಶೈವ ನಿಗಮ-ಮುಖ್ಯಮಂತ್ರಿ ಹೊರಡಿಸಿದ್ರು ಆದೇಶ

ಗಲಭೆ ಆರೋಪಿ ಸಂಪತ್​ರಾಜ್​ ಬಗ್ಗೆ ಡಿಕೆಶಿಗೆ ಮೊದಲೇ ಗೊತ್ತಿತ್ತಾ? ಏನು ಹೇಳಿದ್ದಾರೆ ಕೇಳಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 − 1 =
Remember me
