ಚಂಡೀಗಢ:ಪಂಜಾಬ್​ನ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ಅವರ ಮಗಳ ವಿವಾಹ ಕಾರ್ಯಕ್ರಮ ಭರ್ಜರಿಯಾಗಿ ನಿನ್ನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದದ್ದು ಅಮರಿಂದರ್​ ಸಿಂಗ್​ ಅವರ ನೃತ್ಯ.
ಸಿಂಗ್​ ಅವರು, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್​ ಅಬ್ದುಲ್ಲಾ ಅವರ ಜತೆ ಹೆಜ್ಜೆ ಹಾಕಿದ್ದು, ಇದೀಗ ಸಾಮಾಜಿಕ ಜಾಲತಾನದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇವರಿಬ್ಬರ ನೃತ್ಯದ ಮೋಡಿಗೆ ಎಲ್ಲರೂ ಒಳಗಾಗಿದ್ದು, ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಮತ್ತು ಹಾಲಿ ಸಿಎಂಗಳ ನೃತ್ಯದ ವಿಡಿಯೋ ವೈರಲ್ ಆಗುತ್ತಲೇ ಸಾಗಿದೆ.
83 ವರ್ಷದ ಫಾರೂಕ್​ ಅಬ್ದುಲ್ಲಾ ನೃತ್ಯ ಮಾಡುತ್ತಾ ಮನರಂಜಿಸಿದ್ದಾರೆ. ಅಬ್ದುಲ್ಲಾ ಅವರು ಮೊದಲು ತಾವು ನೃತ್ಯ ಮಾಡುತ್ತಾ ನಂತರ ಅಮರಿಂದರ್​ ಸಿಂಗ್​ ಬಳಿ ಹೋಗಿ ಅವರನ್ನ ಎಳೆದು ತಂದಿದ್ದಾರೆ. ಫಾರೂಕ್​ ಅವರ ನೃತ್ಯದಿಂದ ಉತ್ತೇಜಿತರಾದ ಅಮರಿಂದರ್​ ಸಿಂಗ್​ ಅವರು ಹೆಜ್ಜೆ ಹಾಕಿದ್ದಾರೆ.
ಅಷ್ಟಕ್ಕೂ ಇವರಿಬ್ಬರು ನೃತ್ಯ ಮಾಡಿದ ಹಾಡು ಶಮ್ಮಿಕಪೂರ್​ ನಟಿಸಿರುವ ಚಿತ್ರ ಬ್ರಹ್ಮಚಾರಿಯ ‘ಆಜ್​ ಕಲ್​ ತೆರೆ ಮೆರೆ ಪ್ಯಾರ್​ ಕೆ ಚರ್ಚೆ’ (ನನ್ನ, ನಿನ್ನ ಪ್ರೇಮದ ಚರ್ಚೆ ಎಲ್ಲೆಡೆ…. ) ಹಾಗೂ ‘ ಗುಲಾಬಿ ಆಂಖೆ ಜೋ ತೇರಿ ದೇಖಿ’ .
ಈ ನೃತ್ಯವನ್ನು ನೀವೂ ನೋಡಿ…
Punjab CM@capt_amarinderdancing with MP Farooq Abdullah at Gandaughter's wedding. "Ajjkal Tere Mere Pyaar kei Charche hai":)@OmarAbdullah@RT_MediaAdvPbCM @rohanduaTOI@FromGursimran@ghazalimohammad@tehseenp@nagma_morarji@sushant_says@MattLaemon@HasibaAmin@SaralPatelpic.twitter.com/JmAjY36wA9
— Nasir Khuehami (ناصر کہویہامی) (@NasirKhuehami)March 4, 2021

ಪತಿ, ಪ್ರೇಮಿ ಹಾಗೂ ಪಾಲಕರ ಚಾಯ್ಸ್​… ಆಯ್ಕೆ ಮಾಡಲಾಗದೇ ಕುಗ್ಗಿಹೋಗಿದ್ದೇನೆ… ಏನು ಮಾಡಲಿ?

ರಾಷ್ಟ್ರೀಯ ಮುಕ್ತ ಶಾಲೆಯಲ್ಲಿದೆ ಹಲವಾರು ಹುದ್ದೆ- ನೇರ ಸಂದರ್ಶನದಿಂದ ಪಡೆಯಿರಿ ಉದ್ಯೋಗ

ದೀದಿಯಿಂದ ‘ಮಾ’ಗೆ ಬಡ್ತಿ ಪಡೆದ ಮಮತಾ: ಪಶ್ಚಿಮ ಬಂಗಾಳದ ತುಂಬಾ ಸಾಂಬಾರ್​, ಮೊಟ್ಟೆ ಕರಿ ಘಮಲು…

ಆರು ಗಂಟೆಯಲ್ಲಿ ಮೂರು ಬಾರಿ ಕಂಪಿಸಿದ ಭೂಮಿ: ಸುನಾಮಿ ಎಚ್ಚರಿಕೆ- ಎತ್ತರ ಪ್ರದೇಶಕ್ಕೆ ಸ್ಥಳಾಂತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
