ಬುಲಂದ್‌ಶಹರ್‌ (ರಾಜಸ್ಥಾನ):ಸುರಸುಂದರನನ್ನು ಬಲೆಗೆ ಬೀಳಿಸಿ ಲಕ್ಷ ಲಕ್ಷ ರೂಪಾಯಿ ಕಿತ್ತುಕೊಂಡ ಸುಂದರಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಕಲಂದಗರ್ಹಿ ಖುರ್ಜಾ ನಿವಾಸಿ, ನೃತ್ಯಗಾತಿ ರಾಧಾ ಎಂಬಾಕೆ ‘ಮಿಸ್ಟರ್​​ ರಾಜಸ್ಥಾನ್’​ ಅನೀಶ್​ ಎಂಬುವವರ ಹನಿಟ್ರ್ಯಾಪ್​ ಮಾಡಿ ಈಗ ಸಿಕ್ಕಿಬಿದ್ದಿದ್ದಾಳೆ.
ಆಕೆಯಿಂದ ₹ 19.50 ಲಕ್ಷ ಮೌಲ್ಯದ ಚೆಕ್‌ಗಳು ಮತ್ತು 50 ಸಾವಿರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಏನಿದು ಘಟನೆ?ಹಸನ್‌ಪುರದ ನಿವಾಸಿ ಮತ್ತು 2021ರಲ್ಲಿ ಬಾಡಿಬಿಲ್ಡರ್ ಚಾಂಪಿಯನ್‌ಶಿಪ್ ಗೆದ್ದ ನಂತರ ಮಿಸ್ಟರ್​ ರಾಜಸ್ಥಾನ ಪ್ರಶಸ್ತಿ ಪಡೆದಿರುವ ಅನೀಶ್​ ಹನಿಟ್ರ್ಯಾಪ್​ಗೆ ಒಳಗಾದವರು. 2016ರಲ್ಲಿ ಅನೀಶ್​ಗೆ ರಾಧಾಳ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರೂ ಪ್ರೀತಿಸುತ್ತಿದ್ದರು. ಇವರಿಬ್ಬರ ಸಂಬಂಧ ಒಂದು ಹಂತವನ್ನೂ ಮೀರಿ ಹೋಗಿತ್ತು.

ಇಷ್ಟೆಲ್ಲಾ ಆದ ಮೇಲೆ ರಾಧಾ, ಅನೀಶ್​​ನನ್ನು ಬಿಟ್ಟು ಬೇರೊಬ್ಬನ ಹಿಂದೆ ಹೋದಳು. ಕಳೆದ ಅಕ್ಟೋಬರ್​ನಲ್ಲಿ ಅನೀಶ್​ ಬೇರೊಂದು ಮದುವೆಯಾದರು. ಅಸ್ಸಾಂಗೆ ಹೋಗಿದ್ದ ರಾಧಾ ವಾಪಸ್​ ಆದಾಗ ಆಕೆಗೆ ಅನೀಶ್​ಗೆ ಮದುವೆಯಾಗಿದೆ ಎಂದು ಗೊತ್ತಾಯಿತು.
ಇದಾದ ಬಳಿಕ ಹಳೆಯ ಅಶ್ಲೀಲ ಫೋಟೋಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾಳೆ. ಹೀಗೆ ಬ್ಲ್ಯಾಕ್​ಮೇಲ್​ ಮಾಡುತ್ತಾ ಸುಮಾರು 5 ಲಕ್ಷ ರೂ. ಪಡೆದುಕೊಂಡಿದ್ದಾಳೆ. ನಂತರ 20 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹೇರಿದ್ದಾಳೆ. ಹಣ ಕೊಡದಿದ್ದರೆ ಫೋಟೋಗಳನ್ನು ಲೀಕ್​ ಮಾಡುವುದಾಗಿ ಹೇಳಿದ್ದಾಳೆ.
ಕೊನೆಗೆ ಬೇಸತ್ತ ಅನೀಶ್​ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ರಾಧಾಳನ್ನು ಪೊಲೀಸರು ಬಂಧಿಸಿ ಆಕೆಯ ಬಳಿ ಇದ್ದ ಹಣವನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಬಲವಂತವಾಗಿ ಹಿಜಾಬ್​ ತೆಗೆಸಿದ ಕಂಡಕ್ಟರ್​! ಹಿಡಿಶಾಪ ಹಾಕಿದ ಪ್ರಯಾಣಿಕರೂ ಸತ್ಯ ತಿಳಿದು ಶಾಕ್​

ಕೈಲಾಸದಲ್ಲಿಯೂ ನಿತ್ಯಾನಂದ ಲೈಂಗಿಕ ದೌರ್ಜನ್ಯ? ವಿದೇಶಿ ಶಿಷ್ಯೆಯಿಂದ ಮೇಲ್​ ಮೂಲಕ ದೂರು ದಾಖಲು!

ಹಿಂದೂಗಳಿಂದ ಮೀನು ಖರೀದಿಸಬೇಡಿ ಎಂದಾಗ ಎಲ್ಲಿ ಹೋಗಿತ್ತು ಈ ಸಾಮರಸ್ಯ? ಗರಂ ಆಗಿದೆ ಜಾಲತಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
