ಕಿಶನ್‌ಗಢ್ (ರಾಜಸ್ಥಾನ):ಮಗನ ಮದುವೆ ಖುಷಿಯಲ್ಲಿ ತಾಯಿಯೊಬ್ಬಳು ಡಾನ್ಸ್‌ ಮಾಡುತ್ತಿರುವಾಗಲೇ ದುರಂತವೊಂದು ಸಂಭವಿಸಿದೆ. ಇದ್ದಕ್ಕಿದ್ದಂತೆಯೇ ಕುಸಿದುಬಿದ್ದ ತಾಯಿ ಮದುಮಗನಾಗಿರುವ ಮಗನ ಮಡಿಲಲ್ಲಿಯೇ ಪ್ರಾಣ ತೊರೆದಿದ್ದಾಳೆ!
ಇಂಥದ್ದೊಂದು ದುರ್ಘಟನೆ ರಾಜಸ್ಥಾನದ ಕಿಶನ್‌ಗಢದಲ್ಲಿ ನಡೆದಿದೆ. 55 ವರ್ಷದ ನೀಲಂ ಮೃತ ತಾಯಿ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಮಗ ನೀರಜ್ ಮದುವೆಯಲ್ಲಿ ಡಿಜೆ ಹಾಡು ಹಾಡುತ್ತಿದ್ದರು. ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಅಲ್ಲಿಯೇ ಇದ್ದ ಮಗ ತಾಯಿಯನ್ನು ಹಿಡಿದುಕೊಂಡಿದ್ದಾನೆ. ಮಗನ ತೋಳುಗಳ ಮೇಲೆ ಕುಸಿದು ತಾಯಿ ಅಲ್ಲಿಯೇ ಮೃತಪಟ್ಟಿದ್ದಾರೆ.
ಕುಸಿದುಬಿದ್ದ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ವೈದ್ಯರು ನೀಲಂ ಮೃತಪಟ್ಟಿರುವುದಾಗಿ ಘೋಷಿಸಿದರು.
ಹೃದಯಾಘಾತವಾಗುವ ಮೊದಲು ನೀಲಂ ತನ್ನ ಮಗನ ಕೈ ಹಿಡಿದು ಕೇವಲ 20 ಸೆಕೆಂಡುಗಳ ಕಾಲ ನೃತ್ಯ ಮಾಡಿದ್ದಾರೆ ಎಂದು ಕುಟುಂಬದವರ ಹೇಳಿದ್ದಾರೆ. ನೀಲಂ ಅವರಿಗೆ ಮೊದಲೇ ಹೃದಯ ಸಂಬಂಧಿ ಸಮಸ್ಯೆಗಳಿದ್ದು, ಅದಕ್ಕಾಗಿ ಔಷಧೋಪಚಾರ ಮಾಡುತ್ತಿದ್ದರು ಎನ್ನಲಾಗಿದೆ.
ಇಲ್ಲಿದೆ ನೋಡಿ ವಿಡಿಯೋ:
https://www.youtube.com/watch?v=ipVS4et_sNU
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 1 =
Remember me
