ಲಖನೌ:ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುವುದು ತಲೆತಲಾಂತರಗಳಿಂದ ಬಂದಿರುವ ಗಾದೆ. ಆದರೆ ತನ್ನ ಕರುಳಕುಡಿಯನ್ನೇ ತಾಯಿಯಾದವಳು ಜೀವಂತ ಸುಡಲು ಸಾಧ್ಯವೆ?
ಈ ರೀತಿ ಮಾಡಲು ಸಾಧ್ಯವೇ ಇಲ್ಲ ಎನ್ನಬಹುದು ಹಲವರು. ಆದರೆ ಲಖನೌನ ಬಾಂಡಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಇಂಥದ್ದೊಂದು ಹೃದಯವಿದ್ರಾವಕ ಘಟನೆ ನಡೆದಿದೆ.
ಮಗಳು ಯುವಕನೊಬ್ಬನ ಪ್ರೇಮಜಾಲಕ್ಕೆ ಬಿದ್ದ ಹಿನ್ನೆಲೆಯಲ್ಲಿ ಇಬ್ಬರನ್ನೂ ಗುಡಿಸಿಲಿನ ಒಳಗೆ ಹಾಕಿ ಬೆಂಕಿ ಹಚ್ಚಿ ಜೀವಂತ ಸುಟ್ಟಿದ್ದಾಳೆ ತಾಯಿ. ಈ ಕೃತ್ಯಕ್ಕೆ ತಂದೆಯೂ ಕೈಜೋಡಿಸಿದ್ದಾನೆ!ಮಗಳು ಅನ್ಯಕೋಮಿನ ಹುಡುಗನನ್ನು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ಇಂಥ ಕೃತ್ಯ ಎಸಗಲಾಗಿದೆ. ಇದು ಮರ್ಯಾದಾಗೇಡು ಹತ್ಯೆ ಎಂದು ಹೇಳಲಾಗುತ್ತಿದ್ದರೂ ಈ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ.
19 ವರ್ಷದ ಪ್ರಿಯಾಂಕಾ ಮತ್ತು 23 ವರ್ಷದ ಭೋಲಾ ಈ ದುರ್ದೈವಿಗಳು. ಮಾತೌಂಡ್ ಪ್ರದೇಶದ ಕಾರ್ಚಾ ಗ್ರಾಮದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ.
ಇದನ್ನೂ ಓದಿ:ಯುವಕನ ಬಲಿ ಪಡೆಯಿತು ಫೇಸ್‌ಬುಕ್‌ ಕಮೆಂಟ್‌- ಮಾಜಿ ಸೈನಿಕನಿಂದ ಕೃತ್ಯ!
ಪ್ರಿಯಾಂಕಾ ತನ್ನ ಪ್ರಿಯಕರ ಭೋಲಾ ಜೊತೆ ಇದ್ದಾಗ ಯುವತಿಯ ಕುಟುಂಬದ ಸದಸ್ಯರು ಒಟ್ಟಿಗೆ ಇದ್ದುದ್ದನ್ನು ನೋಡಿದ್ದಾರೆ. ನಂತರ ಅವರು ಗುಡಿಸಲಿಗೆ ಬೀಗ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಇಬ್ಬರು ಕಿರುಚಾಟ ಕೇಳಿ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮೊದಲು ಚಿಕಿತ್ಸೆ ಫಲಕಾರಿಯಾಗದೆ ಭೋಲಾ ಮೃತಪಟ್ಟದರೆ, ಶೇ.80 ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ಪ್ರಿಯಾಂಕಾಳನ್ನು ಕಾನ್ಪುರದ ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಕೆ ಮಾರ್ಗಮಧ್ಯೆದಲ್ಲಿಯೇ ಮೃತಪಟ್ಟಿದ್ದಾಳೆ.
ಯುವತಿಯ ಕುಟುಂಬದ ಒಂಬತ್ತು ಸದಸ್ಯರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದ್ದು, ಅವರಲ್ಲಿ ಮೂವರನ್ನು ಬಂಧಿಸಲಾಗಿದೆ. ಇತರ ಆರೋಪಿಗಳು ತಪ್ಪಿಸಿಕೊಂಡು ಅವರನ್ನು ಹುಡುಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ರಾಮಮಂದಿರ ನೆಲಸಮ ಮಾಡಿ ಮಸೀದಿ ಕಟ್ಟುವೆವು- ಮುಸ್ಲಿಂ ಸಂಘದ ಟ್ವೀಟ್‌

ಚೀನಾದಿಂದ ಇನ್ನೊಂದು ಭೀಕರ ವೈರಸ್‌: ಏಳು ಸಾವು- 60ಕ್ಕೂ ಅಧಿಕ ಮಂದಿಗೆ ಸೋಂಕು!

ಕಿರುತೆರೆಯ ಮತ್ತೊಬ್ಬ ಪ್ರಖ್ಯಾತ ನಟ ಆತ್ಮಹತ್ಯೆ- ಕೊಳೆತ ಸ್ಥಿತಿಯಲ್ಲಿ ಶವ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × two =
Remember me
