ಭೋಪಾಲ್:ಚಿಕ್ಕಪುಟ್ಟ ಕಾರಣಗಳಿಗೂ ಕೆಲವರು ಕೋರ್ಟ್​ ಮೆಟ್ಟಿಲೇರೋದನ್ನು ನೋಡಿದ್ದೇವೆ. ಇದು ಹೆಚ್ಚಾಗಿ ದಂಪತಿ ನಡುವಿನ ಜಗಳ ಇಲ್ಲವೇ ಭೂವ್ಯಾಜ್ಯಗಳಲ್ಲಿ ಇಂಥ ಘಟನೆಗಳು ನಡೆಯುತ್ತಿರುತ್ತವೆ.
ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ 24 ವರ್ಷದ ಮಗಳು ತಂದೆಯ ವಿರುದ್ಧ ಕೋರ್ಟ್​ಗೆ ಹೋಗಿದ್ದಾಳೆ. ಅಪ್ಪನ ವಿರುದ್ಧ ಕೋರ್ಟ್​ ಮೆಟ್ಟಿಲೇರಿರುವುದು ದೊಡ್ಡ ವಿಷಯವಲ್ಲ, ಬದಲಿಗೆ ಅದಕ್ಕೆ ಕಾರಣ ಮಾತ್ರ ಬಲು ವಿಚಿತ್ರ.
ಅದೇನೆಂದರೆ, ಲುಡೋ ಆಟ ಆಡುವಾಗ ತಂದೆ ಮೋಸ ಮಾಡಿದ್ದಾನೆ ಎನ್ನುವುದು ಈ ಯುವತಿಯ ಅಳಲು! ಲುಡೊ ಗೇಮ್ ಆಡುವಾಗ ತಂದೆ ತನಗೆ ಮೋಸ ಮಾಡಿದ್ದು, ಇದರಿಂದ ಅವರು ಗೆದ್ದಿದ್ದಾರೆ. ಈ ನಿಟ್ಟಿನಲ್ಲಿ ತಂದೆಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಯುವತಿ ಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾಳೆ.
ಇನ್ನೂ ವಿಚಿತ್ರ ಎಂದರೆ, ತಂದೆ ಆಟದಲ್ಲಿ ಮಗಳಿಗೆ ಮೋಸ ಮಾಡಿಯೇ ಇಲ್ಲ. ಆದರೆ ತನ್ನ ಸಂತೋಷಕ್ಕಾಗಿ ತಂದೆ ತನ್ನನ್ನು ಗೆಲ್ಲಿಸಿ, ತಾನು ಸೋಲಬೇಕಿತ್ತು ಎನ್ನುವುದು ಈ ಯುವತಿಯ ಹೇಳಿಕೆ!
ಇದನ್ನೂ ಓದಿ:ಗಾಂಧೀಜಿಯ ಆದರ್ಶ ಪಾಲಿಸಿದ್ದರೆ ಆತ್ಮನಿರ್ಭರ್​ ಭಾರತ್​ ಬೇಕಿರಲಿಲ್ಲ: ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಮಾತು
ಈ ಅರ್ಜಿಯನ್ನು ಪರಿಶೀಲಿಸಿರುವ ಕೋರ್ಟ್​, ತಂದೆ-ಮಗಳು ಇಬ್ಬರನ್ನೂ ಕೌನ್ಸೆಲಿಂಗ್​ಗೆ ಕಳುಹಿಸಿದೆ. ಈ ಕುರಿತು ಮಾಹಿತಿ ನೀಡಿರುವ ಭೂಪಾಲ್ ಕೌಟುಂಬಿಕ ನ್ಯಾಯಾಲಯದ ಕೌನ್ಸೆಲರ್ ಸರಿತಾ, ತಂದೆಯೊಂದಿಗೆ ಯುವತಿ ಲುಡೋ ಆಡುವಾಗ ತಂದೆ ಆಕೆಯ ಒಂದು ಕಾಯಿಯನ್ನು ಹೊಡೆದಿದ್ದಾರಂತೆ. ಇದರಿಂದಾಗಿ ತಂದೆ ತನಗೆ ಮೋಸ ಮಾಡಿದ್ದಾರೆ ಎನ್ನುವುದು ಯುವತಿಯ ದೂರು ಎಂದಿದ್ದಾರೆ.
ಜೀವನದಲ್ಲಿ ಎಲ್ಲ ರೀತಿಯ ಸಂತಸವನ್ನು ನೀಡಿದ್ದ ತಂದೆಯೇ ಈ ರೀತಿ ಮಾಡುತ್ತಾನೆ ಎಂದು ಯುವತಿ ನಂಬಿರಲಿಲ್ಲವಂತೆ. ಆದ್ದರಿಂದ ಈ ಘಟನೆಯ ನಂತರ ತನ್ನ ಮತ್ತು ತಂದೆಯ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಅವಳು ಹೇಳಲು ಆರಂಭಿಸಿದ್ದಾಳೆ. ಅಷ್ಟೇ ಅಲ್ಲದೇ, ತಂದೆಯ ಮೇಲಿದ್ದ ಗೌರವವನ್ನು ಕಳೆದುಕೊಂಡಿರುವ ಈಕೆ, ದ್ವೇಷ ಮಾಡಲು ಪ್ರಾರಂಭಿಸಿದ್ದಾಳೆ. ಆನಂತರ ತಂದೆಯನ್ನು ಡ್ಯಾಡಿ ಎಂದು ಕರೆಯುವುದನ್ನೇ ಬಿಟ್ಟಿದ್ದಾಳೆ ಎಂದು ಸರಿತಾ ಮಾಹಿತಿ ನೀಡಿದ್ದಾರೆ.
ಸದ್ಯ ನಾಲ್ಕು ಬಾರಿ ಕೌನ್ಸೆಲಿಂಗ್​ ಮಾಡಿ ಆಕೆಯ ಮನವೊಲಿಸಲು ಪ್ರಯತ್ನಿಸಲಾಗಿದೆ. ಆದರೆ ಆಕೆಗೆ ತನ್ನ ತಂದೆಯ ಕೃತ್ಯದಿಂದ ಎಷ್ಟು ಆಘಾತವಾಗಿದೆ ಎಂದರೆ ಇನ್ನೂ ತಂದೆಯನ್ನು ತಂದೆ ಎಂದು ಒಪ್ಪಿಕೊಳ್ಳಲು ಅವಳು ತಯಾರಿಲ್ಲ. ತನ್ನ ಸಂತೋಷಕ್ಕಾದರೂ ತಂದೆ ಸೋಲಬೇಕಿತ್ತು ಎಂದೇ ಪಟ್ಟುಹಿಡಿದು ಕುಳಿತಿದ್ದಾಳೆ. ಅದ್ಯ ಆಕೆಯ ಮನವೊಲಿಕೆಯ ಯತ್ನ ನಡೆದಿದೆ ಎಂದು ಕೌನ್ಸೆಲಿರ್​ ಹೇಳಿದ್ದಾರೆ.
ಫೇಸ್​ಬುಕ್​ನಲ್ಲಿ ಕಪಲ್​ ಚಾಲೆಂಜ್…​ ಎಚ್ಚರ ಎಚ್ಚರ… ಪೊಲೀಸರು ಬಿಚ್ಚಿಟ್ಟಿದ್ದಾರೆ ಭಯಾನಕ ಮಾಹಿತಿ

ಏಳನೇ ಕ್ಲಾಸ್​ ಫೇಲಾದವ ತಯಾರಿಸಿದ ಕೋವಿಡ್​ಗೆ ಔಷಧ! ಮುಂದೇನಾಯ್ತು ನೋಡಿ…

ಉಮಾ ಭಾರತಿಗೆ ಕರೊನಾ ಪಾಸಿಟಿವ್: ಟ್ವೀಟರ್​ನಲ್ಲಿ ಮಾಹಿತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × two =
Remember me
