ನವದೆಹಲಿ:ಈಚೆಗಷ್ಟೇ ಎರಡನೆಯ ಪತ್ನಿಯ ಮೂಲಕ ತಮ್ಮ ಎರಡನೆಯ ಮಗುವನ್ನು ಪಡೆದಿರುವ ಭೋಜ್‌ಪುರಿ ಗಾಯಕ-ನಟ- ಬಿಜೆಪಿ ಸಂಸದ ಮನೋಜ್ ತಿವಾರಿ ತಮ್ಮ ಸಂಸಾರದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದು ಎರಡನೆಯ ಪತ್ನಿಯಿಂದ ಪಡೆದ ಮಗು ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ, ಅವರ ಕುಟುಂಬದ ಬಗ್ಗೆ ಅನೇಕ ಸಂದೇಹಗಳು ಎದ್ದಿದ್ದವು. ಈ ಹಿನ್ನೆಲೆಯಲ್ಲಿ, ಯಾವುದೇ ಗಾಳಿಸುದ್ದಿ ಹರಿದಾಡದಿರಲು ತಾವೇ ಕುಟುಂಬದ ಬಗ್ಗೆ ಎಲ್ಲರಲ್ಲಿಯೂ ಬಹಿರಂಗಪಡಿಸಿದ್ದಾರೆ.
ಮೊದಲ ಪತ್ನಿ ರಾಣಿಯಿಂದ ವಿಚ್ಛೇದನ ಪಡೆದಿರುವ ಮನೋಜ್ ತಿವಾರಿಯವರು ಗಾಯಕಿ ಸುರಭಿ ಅವರನ್ನು ವಿವಾಹವಾಗಿದ್ದಾರೆ. ರಾಣಿಯವರಿಂದ ಇದಾಗಲೇ ಇವರಿಗೆ ಒಬ್ಬಳು ಮಗಳಿದ್ದಾಳೆ.
ಈ ಕುರಿತು ಮಾತನಾಡಿರುವ ತಿವಾರಿ, ನಾನು ಮತ್ತು ನನ್ನ ಮೊದಲ ಪತ್ನಿ ರಾಣಿಯ ನಡುವೆ ಏನೂ ಭಿನ್ನಾಭಿಪ್ರಾಯವಿಲ್ಲ. ಈಗಲೂ ಆಕೆಯ ಜತೆ ಸಂಪರ್ಕದಲ್ಲಿ ಇದ್ದೇನೆ. ಇಬ್ಬರೂ ಚೆನ್ನಾಗಿಯೇ ಇದ್ದೇವೆ. ಆದರೆ 10 ವರ್ಷಗಳಿಂದ ಅನಿವಾರ್ಯವಾಗಿ ನಾವಿಬ್ಬರೂ ಬೇರೆ ಬೇರೆಯಾಗಬೇಕಾಗಿ ಬಂದಿದೆಯಷ್ಟೇ ಎಂದರು.
ನಂತರ ತಮ್ಮ ಎರಡನೆಯ ಸಂಬಂಧದ ಕುರಿತು ಮಾತನಾಡಿದ ಅವರು, ಮೊದಲ ಪತ್ನಿಯಿಂದ ಬೇರೆಯಾದ ನಂತರ ಒಂಟಿಯಾಗಿದ್ದೆ. ಈ ಸಮಯದಲ್ಲಿ ಗಾಯಕಿಯಾಗಿರುವ ಸುರಭಿಯ ಪರಿಚಯವಾಗಿತ್ತು. ಸುರಭಿ ನನ್ನ ಮೊದಲ ಮಗಳು ಜಿಯಾಳ ಜತೆ ಕ್ಲೋಸ್​ ಇದ್ದಾಳೆ. ಆದ್ದರಿಂದ ಜಿಯಾಳೇ ಸುರಭಿಯನ್ನು ವಿವಾಹವಾಗುವಂತೆ ನನಗೆ ಹೇಳಿದ್ದಳು. ಅವಳು ಹೇಳಿದ ನಂತರವಷ್ಟೇ ನಾನು ಲಾಕ್​ಡೌನ್​ ಸಮಯದಲ್ಲಿ ಈಕೆಯನ್ನು ವಿವಾಹವಾದದ್ದು ಎಂದಿದ್ದಾರೆ.
ಸುರಭಿ ನನ್ನ ಆಡಳಿತಾತ್ಮಕ ಕೆಲಸಗಳನ್ನು ಆಡಳಿತಾತ್ಮಕ ಕೆಲಸವನ್ನು ನೋಡಿಕೊಳ್ಳುತ್ತಿದ್ದಳು. ಆಕೆ ಗಾಯಕಿಯೂ ಹೌದು. ನನ್ನ ಸಂಗೀತ ವೀಡಿಯೊವೊಂದರಲ್ಲಿ ಹಾಡು ಹಾಡಿದ್ದಾಳೆ. ಆಕೆಯ ಬಗ್ಗೆ ನನ್ನ ಮೊದಲ ಮಗಳಿಗೂ ತುಂಬಾ ಅಭಿಮಾನವಿದ್ದು, ಮದುವೆಗೆ ಒತ್ತಾಯಿಸಿದ್ದಳು ಎಂದಿದ್ದಾರೆ ಸಂಸದ ತಿವಾರಿ.
ನಾನು ಮೊದಲ ಪತ್ನಿ ರಾಣಿಯಿಂದ ಬೇರ್ಪಟ್ಟಾಗ ನನ್ನ ಜೀವನ ತೀರಾ ವಿಚಿತ್ರವಾಗಿ ಹೋಯಿತು. ಏನು ಮಾಡಬೇಕು ಎಂದು ತಿಳಿದಿರಲಿಲ್ಲ. ಈಗ ಎಲ್ಲವೂ ಬದಲಾಗಿದೆ ಎಂದಿದ್ದಾರೆ.
ಪದವಿ ಮುಗಿಸಿದವರಿಗೆ ಗುಡ್​ ನ್ಯೂಸ್​: ಸ್ಟಾಫ್​ ಸೆಲೆಕ್ಷನ್​ ಕಮಿಷನ್​ನಿಂದ 6,506 ಹುದ್ದೆಗಳ ಭರ್ತಿ

ವಿಶ್ವಸಂಸ್ಥೆಗೂ ಕಾಲಿಟ್ಟ ಮತಾಂತರ! ಪಾಕ್​ ಅಧಿಕಾರಿಯಿಂದಲೇ ನಡೆಯುತ್ತಿದೆ ಈ ಕೃತ್ಯ…

ಪತ್ನಿಗೆ ಸುಖನೀಡಲು ಆಗುತ್ತಿಲ್ಲ- ಆಕೆಗೆ ನನ್ನ ಮೇಲೆ ಜುಗುಪ್ಸೆ ಬಂದುಬಿಟ್ಟಿದೆ; ಪರಿಹಾರ ಹೇಳಿ ಪ್ಲೀಸ್​..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 6 =
Remember me
