ಕರಾಚಿ:ಖ್ಯಾತ ಬಾಲಿವುಡ್‌ ತಾರೆ ಶ್ರೀದೇವಿ ಅವರ ನಿಗೂಢ ಸಾವಿನ ಬಳಿಕ, ಇದು ಕೊಲೆ ಎಂಬ ಬಗ್ಗೆ ಗುಮಾನಿ ಶುರುವಾಗುತ್ತಿದ್ದಂತೆಯೇ ಇದರ ಹಿಂದೆ ಭೂಗತಪಾತಕಿ ದಾವೂದ್‌ ಇಬ್ರಾಹಿಂ ಹೆಸರೂ ಕೇಳಿಬಂದಿತ್ತು. ಶ್ರೀದೇವಿಯವರ ಹತ್ಯೆಯಾಗಿದ್ದು, ಇದರ ಹಿಂದೆ ದಾವೂದ್‌ ಕೈವಾಡ ಇದೆ ಎಂದೇ ಬಿಂಬಿತವಾಗಿತ್ತು, ಈಗಲೂ ಅದೇ ಸುದ್ದಿ ಇದೆ.
ಬಾಲಿವುಡ್ ಸೇರಿದಂತೆ ಇಡೀ ಚಿತ್ರರಂಗವನ್ನೇ ದಾವೂದ್‌ ಇಬ್ರಾಹಿಂ ಆಳುತ್ತಿದುದು ಹೊಸ ಮಾತೇನಲ್ಲ. ಈ ಹಿಂದೆ ಈತ ಮುಂಬೈನಲ್ಲಿನಲ್ಲಿದ್ದಾಗ, ಬಾಲಿವುಡ್ ನಟ ಅದರಲ್ಲಿಯೂ ನಟಿಯರಿಗೆ ಭಾರಿ ಬಂಡವಾಳ ಹೂಡುತ್ತಿದ್ದ. ಅಷ್ಟೇ ಅಲ್ಲದೇ, ಹಲವಾರು ನಟ-ನಟಿಯರು ಈತನ ಜತೆ ನಿಕಟ ಸಂಬಂಧ ಹೊಂದಿದ್ದರು. ಹಲವರು ಮಂದಿ ದಾವೂದ್ ಮನೆಯಲ್ಲಿ ನಡೆಯುತ್ತಿದ್ದ ಔತಣ ಕೂಟಗಳಿಗೆ ಹಾಜರಾಗುತ್ತಿದ್ದರು ಎನ್ನಲಾಗಿದೆ.
1993ರಲ್ಲಿ ಮುಂಬೈ ಸರಣಿ ಬಾಂಬ್‌ ಸ್ಫೋಟ ಸೇರಿದಂತೆ ಹಲವಾರು ಉಗ್ರ ಚಟುವಟಿಕೆ ನಡೆಸಿ ದಶಕಗಳ ಹಿಂದೆ ಮುಂಬೈನಿಂದ ಪಾಕ್‌ಗೆ ಹಾರಿರುವ ದಾವೂದ್‌ ಕುರಿತು ಇದೀಗ ಸ್ಫೋಟಕ ಮಾಹಿತಿಯೊಂದು ಬಯಲುಗೊಂಡಿದ್ದು, ಪಾಕಿಸ್ತಾನದ ಚಿತ್ರತಾರೆಯರಿಗೂ, ದಾವೂದ್‌ಗೂ ಇರುವ ಸಂಬಂಧಗಳ ಕುರಿತು ಮಾಹಿತಿಗಳು ಹೊರಬೀಳುತ್ತಿವೆ.
ಇದನ್ನೂ ಓದಿ:ಪುಲ್ವಾಮಾ ದಾಳಿ: ಪಾಕ್‌ನ ಉಗ್ರ ಮುಖ ಬಯಲು- 5 ಸಾವಿರ ಪುಟಗಳಲ್ಲಿದೆ ಮಾಹಿತಿ
ಪಾಕಿಸ್ತಾನದ ಚಿತ್ರರಂಗದಲ್ಲಿ ನಟಿಯರು ಮುಂದುವರೆಯಬೇಕು ಎಂದರೆ, ಅದರ ಹಿಂದೆ ದಾವೂದ್‌ ಇಬ್ರಾಹಿಂ ಇರಬೇಕು ಎನ್ನುವ ಪರಿಸ್ಥಿತಿ ಇದೆ ಎಂದು ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಇದೀಗ ಪಾಕಿಸ್ತಾನ ಚಿತ್ರರಂಗದ ನಟಿ ಮೆಹ್ವೀಶ್ ಹಯಾತ್ ಎಂಬಾಕೆಗೂ ದಾವೂದ್‌ಗೂ ಭಾರಿ ಸಂಬಂಧ ಇದೆ ಎನ್ನಲಾಗಿದೆ.
ಇದರಲ್ಲೀಗ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಮೆಹ್ವಿಶ್‌ ಹಯಾತ್‌. 37 ವರ್ಷದ ನಟಿ ಮೆಹ್ವಿಶ್ ಹಯಾತ್ ಜತೆ ದಾವೂದ್ ಸಂಬಂಧ ಜಗ‌ಜ್ಜಾಹೀರವಾಗತೊಡಗಿದೆ. ದಾವೂದ್ ಆಕೆಯೊಂದಿಗೆ ನಿಯಮಿತ ಸಂಪರ್ಕದಲ್ಲಿರುತ್ತಾನೆ ಎಂಬುದನ್ನು ಪತ್ತೆಹಚ್ಚಲಾಗಿದೆ.
ಕಳೆದ ವರ್ಷದವರೆಗೂ ಮೆಹ್ವಿಶ್‌ ಯಾರೆಂದೇ ಯಾರಿಗೂ ತಿಳಿದಿರಲಿಲ್ಲ. ಕೆಲವೊಂದು ಚಿತ್ರಗಳಲ್ಲಿ ನಟಿಸಿದ್ದರೂ ಈಕೆ ಪ್ರಸಿದ್ಧಿ ಪಡೆದಿರಲಿಲ್ಲ. ಆದರೆ ಕಳೆದ ವರ್ಷ ಪಾಕಿಸ್ತಾನದ ಪ್ರತಿಷ್ಠಿತ ನಾಗರಿಕ ಪುರಸ್ಕಾರ ’ತಮ್ಗಾ ಇಂತಿಯಾಜ್’ ಈಕೆಯ ಪಾಲಿಗೆ ಬಂದಾಗ ಇಡೀ ಚಿತ್ರರಂಗವೇ ಮೂಕವಿಸ್ಮಯವಾಯಿತು. ಆಗ ಇದರ ಹಿಂದಿನ ರಹಸ್ಯ ಕೆದಕುತ್ತಾ ಹೋದಾಗ ಕಂಡುಬಂದದ್ದೇ ದಾವೂದ್‌ ಹೆಸರು. ಇದರ ಬೆನ್ನಟ್ಟಿ ಹೋದಾಗ ಮೆಹ್ವಿಶ್, ದಾವೂದ್ ಜತೆ ಹೊಂದಿರುವ ಒಡನಾಟ ಹೊಂದಿರುವುದು ತಿಳಿದಿದೆ.
ಇದರ ಬೆನ್ನಲ್ಲೇ ಈತ ಯಾರ್‍ಯಾರ ಜತೆ ಸಂಪರ್ಕ ಹೊಂದಿದ್ದಾನೆ ಎಂಬುದನ್ನು ಕಂಡುಹಿಡಿಯಲಾಗುತ್ತಿದೆ.
ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!

ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ

ಎಟಿಎಂ ಹಣ ಎಗರಿಸಿದ ಖದೀಮರು: ನಡೆದಾಡೋ ಸ್ಟೈಲ್‌ನಲ್ಲಿ ಸಿಕ್ಕಿಬಿದ್ದದ್ದೇ ರೋಚಕ…

ಹೋಟೆಲ್‌ನಲ್ಲಿ ರಾತ್ರಿ ಕಳೆದ ಪ್ರೇಮಿಗಳು ಮಾರನೆಯ ದಿನ ಶವವಾದರು!

ಅತ್ಯಂತ ಕ್ರೂರವಾಗಿ ಲಾಕಪ್‌ ಡೆತ್‌ ಮಾಡಿದ್ದ ಆರೋಪಿ ಪೊಲೀಸ್‌ ಕರೊನಾಕ್ಕೆ ಬಲಿ

ಭಾರತದಲ್ಲಿ 20 ಸಾವಿರಕ್ಕೂ ಅಧಿಕ ಜನರ ಜೀವ ಉಳಿಸಿದ ಕರೊನಾ!

ಕರೊನಾ ಲಸಿಕೆ ಉತ್ಪಾದನೆಗೆ ಭಾರತದ ಮೇಲೆ ರಷ್ಯಾ ಒಲವು: ಮೋದಿ ಜತೆ ಮಾತುಕತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + nine =
Remember me
