ಮೊರಾದಾಬಾದ್‌ (ಉತ್ತರ ಪ್ರದೇಶ):ಕೆಲವೊಮ್ಮೆ ವೈದ್ಯಲೋಕಕ್ಕೇ ಸವಾಲು ಆಗುವಂಥ ಘಟನೆಗಳು ನಡೆಯುತ್ತವೆ. ವ್ಯಕ್ತಿ ಮೃತಪಟ್ಟ ಎಂದು ವೈದ್ಯರು ಘೋಷಿಸಿದ ಬಳಿಕ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲು ಸಿದ್ಧತೆ ಮಾಡಿಕೊಂಡ ಸಂದರ್ಭದಲ್ಲಿ ಆ ವ್ಯಕ್ತಿ ಕೈಕಾಲು ಆಡಿಸುವುದು, ಉಸಿರಾಡುವುದು ಇತ್ಯಾದಿ ಸುದ್ದಿಗಳು ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಅಪರೂಪ ಹಾಗೂ ವೈದ್ಯರನ್ನೇ ಬೆಚ್ಚಿಬೀಳಿಸಿದ ಘಟನೆಯೊಂದು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ.
ಇದರ ವಿಡಿಯೋ ಇದೀಗ ವೈರಲ್‌ ಆಗಿದೆ. ಮೊರಾದಾಬಾದ್‌ನ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಂತಹ ಶ್ರೀಕೇಶ್ ಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪರೀಕ್ಷೆ ಮಾಡಿದದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಹೇಳಿದರು. ನಂತರ ಮುಂದಿನ ಪ್ರಕ್ರಿಯೆ ನಡೆಸುವ ಮುನ್ನ ಶವಾಗಾರದ ಫ್ರೀಜರ್‌ನಲ್ಲಿ ಇಡಲಾಗಿತ್ತು.
ಏಳು ಗಂಟೆಯ ಬಳಿಕ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಬೇಕಿತ್ತು. ಆಗ ಸ್ಥಳಕ್ಕೆ ಅವರ ಕುಟುಂಬದರು ಮತ್ತು ಪೊಲೀಸರು ಬಂದಿದ್ದಾರೆ. ಮೃತದೇಹವನ್ನು ನೀಡುವ ಸಮಯದಲ್ಲಿ ಶ್ರೀಕೇಶ್ ಕುಮಾರ್ ಅವರ ಅತ್ತಿಗೆ ಮಧುಬಾಲಾ ಅವರ ದೇಹ ಚಲಿಸುತ್ತಿರುವುದನ್ನು ಗಮನಿಸಿ ಕುಟುಂಬಸ್ಥರಿಗೆ ಹೇಳಿದ್ದಾರೆ. ನಂತರ ವೈದ್ಯರಿಗೂ ತಿಳಿಸಿದ್ದಾರೆ.
ವೈದ್ಯರು ಇದನ್ನು ನಂಬಲೇ ಇಲ್ಲ. ನಂತರ ವೈದ್ಯರ ತಂಡ ಅಲ್ಲಿಗೆ ಬಂದು ಪರೀಕ್ಷೆ ಮಾಡಿದಾಗ ಅವರು ಉಸಿರಾಡುತ್ತಿರುವುದು ಕಂಡಿದೆ. ಈ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ನಾವು, ’ಅವನು ಸತ್ತಿಲ್ಲ. ಅವನು ಏನನ್ನೋ ಹೇಳಲು ಬಯಸುತ್ತಿದ್ದಾನೆ, ಅವನು ಇನ್ನೂ ಉಸಿರಾಡುತ್ತಿದ್ದಾನೆ” ಎಂದು ಹೇಳುವುದನ್ನು ಕೇಳಬಹುದಾಗಿದೆ. ನಂತರ ಉಸಿರಾಡುತ್ತಿರುವುದನ್ನು ಕಂಡ ವೈದ್ಯರು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದಾರೆ. ಚಿಕಿತ್ಸೆ ನಡೆಯುತ್ತಿದ್ದು, ಅವರು ಚೇತರಿಸಿಕೊಳ್ಳುತ್ತಿರುವುದಾಗಿ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಶಿವ್‌ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ಶಿವಸಿಂಗ್‌ ’ರೋಗಿಯನ್ನು ಬೆಳಗ್ಗೆ 3 ಗಂಟೆಗೆ ನೋಡಿದ್ದಾಗ ಹೃದಯ ಬಡಿತವಿರಲಿಲ್ಲ, ಹಾಗಾಗಿ ಆ ವ್ಯಕ್ತಿಯನ್ನು ಅನೇಕ ಬಾರಿ ಪರೀಕ್ಷಿಸಿ, ತದನಂತರ ಸತ್ತಿರುವುದಾಗಿ ಘೋಷಿಸಲಾಗಿತ್ತು. ನಂತರ ಬದುಕಿರುವುದು ತಿಳಿದೂ ನಮಗೂ ಅಚ್ಚರಿಯಾಗಿದೆ. ನನ್ನ ವೈದ್ಯಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಥ ಘಟನೆ ಸಂಭವಿಸಿರುವುದು’ ಎಂದಿದ್ದಾರೆ.ಈ ಮಧ್ಯೆ, ವೈದ್ಯರ ನಿರ್ಲಕ್ಷ್ಯದಿಂದಾಗಿ ಹೀಗಾಗಿದೆ ಎಂದಿರುವ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.
ಮೃತವ್ಯಕ್ತಿ ಉಸಿರಾಟ ಮಾಡುತ್ತಿರುವ ವಿಡಿಯೋ ಇಲ್ಲಿದೆ ನೋಡಿ:
https://twitter.com/GSTA_DSWESTA/status/1462359762746499073
ಕೊನೆಗೂ ಬದುಕಲಿಲ್ಲ ಕಿಡ್ನಾಪ್‌ ಆದ ಮೈಸೂರಿನ ಬಾಲಕ: ಶೋಕಿಗಾಗಿ ಬಲಿ ಪಡೆದ ಕೊಲೆಗಾರ?

ಮದ್ಯಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್‌ ಕೊಟ್ಟ ‘ಮಹಾ’ ಸರ್ಕಾರ: ಸ್ಕಾಚ್‌, ವಿಸ್ಕಿ ಬೆಲೆ ಅರ್ಧಕ್ಕರ್ಧ ಕಮ್ಮಿ!

ಮೂರನೆಯ ಮದುವೆಗೆ ಆಮೀರ್‌ ರೆಡಿ- ಅಧಿಕೃತ ಘೋಷಣೆಯೊಂದೇ ಬಾಕಿ? ಮಗಳ ವಯಸ್ಸಿನವಳಾ?

Sign in to your account
Please enter an answer in digits:one × four =
Remember me
