ನವದೆಹಲಿ:ಕೆಲವೊಮ್ಮೆ ವೈದ್ಯಕೀಯ, ವಿಜ್ಞಾನ ಲೋಕಕ್ಕೇ ಸವಾಲು ಎನಿಸುವ ಘಟನೆಗಳು ನಡೆಯುತ್ತವೆ. ರೋಗಿಯೊಬ್ಬ ಸತ್ತುಹೋಗಿರುವುದಾಗಿ  ವೈದ್ಯರು ಸರ್ಟಿಫಿಕೇಟ್‌ ಕೊಟ್ಟ ನಂತರ ಅವರು ಬದುಕಿಬಂದಿರುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತವೆ.
ಅಂಥದ್ದೇ ಒಂದು ಕುತೂಹಲದ ಘಟನೆ ದೆಹಲಿಯಲ್ಲಿ ನಡೆದಿದೆ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಸತೀಶ್ ಭಾರದ್ವಾಜ್ (62) ಎಂಬುವವರ ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆ ಅವರ ಬಾಯಿಗೆ ಗಂಗಾಜಲ ಹಾಕುತ್ತಿದ್ದಾಗ ಕಣ್ಣುತೆರೆದು ಮಾತನಾಡಿದ ಅಚ್ಚರಿ ಘಟನೆ ಇದಾಗಿದ್ದು, ಕುಟುಂಬಸ್ಥರು ಹೌಹಾರಿ ಹೋಗಿದ್ದಾರೆ.
ಸತೀಶ್ ಭಾರದ್ವಾಜ್ ಅವರನ್ನು ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇವರು ಮೃತಪಟ್ಟಿರುವುದಾಗಿ ಭಾನುವಾರ (ಡಿ.26) 11 ಮಂದಿ ತಜ್ಞ ವೈದ್ಯರು ಸರ್ಟಿಫಿಕೇಟ್‌ ಕೊಟ್ಟರು. ಇವರನ್ನು ಕಳೆದುಕೊಂಡ ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದರು.
ನಂತರ ಮಧ್ಯಾಹ್ನ 3 ಗಂಟೆ ಸುಮಾರು ಅಂತ್ಯಕ್ರಿಯೆ ಮಾಡಲು ಟಿಕ್ರಿ ಖುರ್ದ್‌ ಪ್ರದೇಶದಲ್ಲಿರುವ ಸ್ಮಶಾನಕ್ಕೆ ಕರೆದುಕೊಂಡು ಹೋಗಿದ್ದಾರೆ. ಕೊನೆಯ ವಿಧಿವಿಧಾನದಂತೆ ಅವರ ಬಾಯಿಗೆ ಗಂಗಾಜಲ ಹಾಕಲಾಗಿದೆ. ಗಂಗಾಜಲ ಬಾಯಿಗೆ ಹೋಗುತ್ತಿದ್ದಂತೆಯೇ ವೃದ್ಧ ಕಣ್ತೆರೆದು ಮಾತನಾಡಲು ಶುರು ಮಾಡಿದ್ದಾರೆ. ಇದನ್ನು ನೋಡಿ ಕುಟುಂಬಸ್ಥರು ಶಾಕ್‌ ಆಗಿ ಕೂಡಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಆ್ಯಂಬುಲೆನ್ಸ್​ನಲ್ಲಿ ಭಾರಧ್ವಾಜ್‌ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆ ವೇಳೆ ಪರೀಕ್ಷೆ ಮಾಡಿದ ವೈದ್ಯರು ಭಾರದ್ವಾಜ್ ಅವರ ಬಿಪಿ, ಹೃದಯ ಬಡಿತ, ನಾಡಿ ಮಿಡಿತದ ವರದಿ ನಾರ್ಮಲ್ ಇದೆ, ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ!
ಮಂಗಳೂರಿನಲ್ಲಿ ಭಾರಿ ಡ್ರಗ್ಸ್‌ ಜಾಲ: ಯುವತಿಯ ಮೇಲೆ ನಿರಂತರ ಅತ್ಯಾಚಾರ- ರಕ್ಷಣೆ ಕೋರಿ ಅಮ್ಮನಿಂದ ದೂರು
ಎರಡು ಬಸ್ಸುಗಳ ನಡುವೆ ಭೀಕರ ಅಪಘಾತ: ಐವರ ಸಾವು- ಹಲವರ ಸ್ಥಿತಿ ಚಿಂತಾಜನಕ
‘ಉಫ್‌… ನಾನಂತೂ ಮುಸ್ಲಿಂ ಹುಡುಗನನ್ನ ಮದ್ವೆಯಾಗಲ್ಲ’ ಎಂದ ನಟಿ ಉರ್ಫಿ ಜಾವೇದ್‌ ಕೊಟ್ಟಳು ಈ ಕಾರಣ…


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
