ಮುಂಬೈ:ಮಗನ ಉನ್ನತ ವಿದ್ಯಾಭ್ಯಾಸಕ್ಕೆ ಹಣ ಕೊಡಲಿಲ್ಲ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರಿ ನೌಕರನಾಗಿರುವ ಪತಿಯನ್ನು ಪತ್ನಿಯೇ ಕೊಲೆ ಮಾಡಿದ್ದರೆ, ತಂದೆಯನ್ನು ಮಗನೇ 7ನೇ ಮಹಡಿಯಿಂದ ಕೆಳಕ್ಕೆ ನೂಕಿರುವ ಭಯಾನಕ ಘಟನೆ ಮುಂಬೈನ ಅಂಬೋಲಿಯಲ್ಲಿ ನಡೆದಿದೆ.
ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಹಾಯಕ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಸಂತಾನ ಕೃಷ್ಣನ್ ಶೇಷಾದ್ರಿ (53 ) ಪತ್ನಿ ಮತ್ತು ಮಗನ ಈ ಕುಕೃತ್ಯಕ್ಕೆ ಜೀವ ಕಳೆದುಕೊಂಡಿದ್ದಾರೆ. ಸಂತಾನ ಕೃಷ್ಣನ್ ಅವರನ್ನು ಕೊಲೆ ಮಾಡಿದ ನಂತರ ತಾಯಿ-ಮಗ ಇಬ್ಬರೂ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರಲ್ಲಿ ಹೇಳಿಕೆ ಕೊಟ್ಟಿದ್ದರು.
ತನಿಖೆ ನಡೆಸಿರುವ ಪೊಲೀಸರಿಗೆ ಇದು ಆತ್ಮಹತ್ಯೆಯಲ್ಲ, ಬದಲಿಗೆ ಇವರಿಬ್ಬರ ಕೃತ್ಯ ಎಂದು ತಿಳಿದುಬಂದಿದೆ. ಇವರ ಮಗ ಅರವಿಂದ್ ಉನ್ನತ ವ್ಯಾಸಂಗಕ್ಕೆ ಹಣ ಕೇಳಿದ್ದ. ಎರಡು ವರ್ಷಗಳ ಹಿಂದೆ ಇಂಜಿನಿಯರಿಂಗ್ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಕೆನಡಾಕ್ಕೆ ಹೋಗಲು ಇಚ್ಛಿಸಿದ್ದ. ಆದರೆ ತಂದೆಗೆ ಮಗನನ್ನು ಅಲ್ಲಿಗೆ ಕಳುಹಿಸಲು ಇಷ್ಟವಿಲ್ಲದ ಹಿನ್ನೆಲೆಯಲ್ಲಿ ಹಣ ನೀಡಿರಲಿಲ್ಲ. ಇದೇ ವಿಷಯವಾಗಿ ಮನೆಯಲ್ಲಿ ಬಹುದೊಡ್ಡ ಗಲಾಟೆಯಾಗಿತ್ತು. ಪತ್ನಿ ಕೂಡ ಮಗನ ಪರವಾಗಿ ಇದ್ದರು ಎಂದು ತಿಳಿದುಬಂದಿದೆ.
ನಸುಕಿನ ಸುಮಾರು 4 ಗಂಟೆಗೆ ಶೇಷಾದ್ರಿ ಅವರು ಮಲಗಿದ್ದಾರೆ ತಾಯಿ ಮತ್ತು ಮಗ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ತಲೆಯನ್ನು ಮಂಚದ ಮರದ ಅಂಚಿಗೆ ಜಜ್ಜಿದ್ದಾರೆ. ಕೈಯ ರಕ್ತನಾಳವನ್ನು ಕತ್ತರಿಸಿದ್ದಾರೆ. ನಂತರ ಅವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಲು ಹೊರಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆದರೆ ತಲೆ ಜಜ್ಜಿದ್ದರಿಂದ ತಲೆಗೆ ಗಾಯವಾಗಿದ್ದರಿಂದ ತಮ್ಮ ಮೇಲೆ ಸಂದೇಹ ಬರಬಹುದು ಎಂದುಕೊಂಡ ಅಮ್ಮ-ಮಗ ಶೇಷಾದ್ರಿ ಅವರನ್ನು 7ನೇ ಮಹಡಿಯಿಂದ ನೂಕಿದ್ದಾರೆ. ಹೀಗೆ ಮಾಡಿದರೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸುಲಭದಲ್ಲಿ ಹೇಳಬಹುದು ಎಂಬ ಲೆಕ್ಕಾಚಾರ ಹಾಕಿದ್ದಾರೆ. ನಂತರ ಮನೆಯಲ್ಲಿ ಚೆಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ ಪೊಲೀಸರಿಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸುದ್ದಿ ಮುಟ್ಟಿಸಿದ್ದಾರೆ.
ಆದರೆ ಮರಣೋತ್ತರ ಪರೀಕ್ಷೆ ಹಾಗೂ ಇತರ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರಿಗೆ ಸಂದೇಹ ಬಂದು ಬಾಯಿ ಬಿಡಿಸಿದಾಗ ಇಬ್ಬರೂ ಸತ್ಯ ಒಪ್ಪಿಕೊಂಡಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.
VIDEO: ‘ಏಯ್‌… ವಿಡಿಯೋ ಮತ್ ಕರ್…’ ತಲೆಗೆ ಕೇಸರಿ ಶಾಲು ಧರಿಸಿದವರಾರು? ಕಿಚ್ಚು ಹೊತ್ತಿಸಿದ ವೈರಲ್‌ ವಿಡಿಯೋ

ಸಂಸ್ಕೃತದಲ್ಲಿ ಐದು ಚಿನ್ನ ಗೆದ್ದ ಮುಸ್ಲಿಂ ಯುವತಿ: ಶ್ಲೋಕ, ಸರಸ್ವತಿ- ಗಾಯತ್ರಿ ಮಂತ್ರಗಳಲ್ಲಿ ನಿಪುಣೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 2 =
Remember me
