ನೋಯ್ಡಾ (ಉತ್ತರ ಪ್ರದೇಶ):ಪ್ರೀತಿಸಿ ಮದುವೆಯಾದ ಜೋಡಿಯೊಂದು ದಾರುಣವಾಗಿ ಅಂತ್ಯ ಕಂಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್​​ 22 ಪ್ರದೇಶದಲ್ಲಿ ನಡೆದಿದೆ. ಮೂರು ವರ್ಷಗಳ ಹಿಂದೆ ಮದುವೆಯಾಗಿರುವ ಶಶಿಕಲಾ ಮತ್ತು ಅರುಣ್​ ದಂಪತಿ ಡೆತ್​ನೋಟ್​ ಬರೆದಿಟ್ಟು ಸಾವಿನ ಹಾದಿ ಹಿಡಿದಿದ್ದಾರೆ.
ಖಾಸಗಿ ಕಂಪನಿವೊಂದರಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ಅರುಣ್​ ಅವರಿಗೆ ಕ್ಯಾನ್ಸರ್​ ಕಾಣಿಸಿಕೊಂಡಿದ್ದೇ ಈ ಅಂತ್ಯಕ್ಕೆ ಕಾರಣವಾಗಿದೆ. ಅರುಣ್​ ಅವರಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಡಾಕ್ಟರ್​ ಬಳಿ ತೋರಿಸಿದ್ದಾರೆ. ಅದಾಗಲೇ ಕ್ಯಾನ್ಸರ್​ ಕೊನೆಯ ಸ್ಟೇಜ್​ನಲ್ಲಿ ಇರುವುದು ತಿಳಿದಿದೆ.
ಡಾಕ್ಟರ್​ ಕೊಟ್ಟ ರಿಪೋರ್ಟ್​ ನೋಡಿ ದಂಪತಿ ಕಂಗಾಲಾಗಿ ಹೋಗಿದ್ದಾರೆ. ಇನ್ನು ಅರುಣ್​ ಬದುಕುವುದು ಕಷ್ಟ ಎಂದು ಇಬ್ಬರಿಗೂ ತಿಳಿದಿದೆ. ಪತಿ ಸತ್ತುಹೋದರೆ ತಮ್ಮ ಭವಿಷ್ಯ ಏನು ಎಂಬ ಚಿಂತೆ ಶಶಿಕಲಾ ಅವರಿಗೆ ಕಾಡಿದೆ. ಇದರಿಂದ ದಂಪತಿ ಅನೇಕ ದಿನಗಳಿಂದ ಮಾನಸಿಕವಾಗಿ ಒತ್ತಡಕ್ಕೊಳಗಾಗಿದ್ದರು. ಇದರಿಂದ ಇಬ್ಬರೂ ಸಾಯುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಬಗ್ಗೆ ಡೆತ್​ನೋಟ್​ ಬರೆದಿಟ್ಟಿರುವ ಶಶಿಕಲಾ, ತಮ್ಮ ಸಾವಿಗೆ ತಾವೇ ಕಾರಣ ಎಂದು ಹೇಳಿದ್ದಾರೆ. ಅರುಣ್​ಗೆ ಕ್ಯಾನ್ಸರ್​ ಇರುವುದು ತಿಳಿದಿದೆ. ಅವರು ಬದುಕುವುದು ಕಷ್ಟ. ಆದ್ದರಿಂದ ನಾನೂ ಅವರ ಜತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಡಾಕ್ಟರ್​ ರಿಪೋರ್ಟ್​ ಟೇಬಲ್​ ಮೇಲೆ ಇಟ್ಟಿದ್ದೇವೆ. ಈ ವರದಿ ನೋಡಿದರೆ ನಾವು ಸಾಯುವುಕ್ಕೆ ಏನು ಕಾರಣ ಎಂದು ತಿಳಿಯುತ್ತದೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್​ನೋಟ್​ನಲ್ಲಿ ಬರೆಯಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೈಸೂರು-ಧಾರವಾಡ ರೈಲಿನಲ್ಲಿ ಮಧ್ಯರಾತ್ರಿ ಬೆಂಕಿ: ಜೀವ ಕೈಯಲ್ಲಿ ಹಿಡಿದುಕೊಂಡ ಪ್ರಯಾಣಿಕರು!

ಮಗುವಿನ ಜತೆ ಬಾವಿಗೆ ಹಾರಿದರೂ ಬದುಕಿದ ಅಮ್ಮ- ಕಂದನ ಶವ ಕಂಡು ಪುನಃ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − ten =
Remember me
