ಭೋಪಾಲ್:ಇಲ್ಲಿಯ ಬೊಹ್ರಾ ಸಮಾಜದ ಧರ್ಮಗುರುವಿನ ನಿಗೂಢ ಸಾವು ಸಂಭವಿಸಿದ್ದು, ಇದು ಕೊಲೆಯೋ, ಆಕಸ್ಮಿಕವೋ ಎಂಬ ಗೊಂದಲ ಶುರುವಾಗಿದೆ.
ಮಧ್ಯ ಪ್ರದೇಶದ ಉಜೈನ್ ನಗರದ ನಾಗಾದದ 22 ವರ್ಷ ವಯಸ್ಸಿನ ಮುರ್ತುಜ ಮೃತರಾದವರು. ಇವರ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಮುರ್ತುಜಾ ಮೂಲತಃ ಖಂಡ್ವಾ ನಿವಾಸಿಯಾಗಿದ್ದರು.
ಒಂದು ವರ್ಷದಿಂದ ನಾಗಾದದಲ್ಲಿ ವಾಸವಾಗಿದ್ದರು. ಮಿರ್ಚಿ ಬಜಾರ್​ನಲ್ಲಿಯ ಜಾಬೀರ್ ಎಂಬವರ ಮನೆ ಬಾಡಿಗೆ ಪಡೆದುಕೊಂಡಿದ್ದ ಇವರು ಒಂಟಿಯಾಗಿ ವಾಸವಾಗಿದ್ದರು. ತಮ್ಮ ಸಮಾಜದ ಮಕ್ಕಳಿಗೆ ಧರ್ಮದ ಕುರಿತು ಶಿಕ್ಷಣ ನೀಡುವ ಕೆಲಸ ಮಾಡಿಕೊಂಡಿದ್ದರು.ಇಂದು ಬೆಳಗ್ಗೆ ಮನೆ ಕೆಲಸದಾಕೆ ಬಂದಾಗ ಮೆಟ್ಟಿಲ ಬಳಿ ಧರ್ಮಗುರುವಿನ ಶವ ಕಂಡಿದೆ. ಕೂಡಲೇ ಆಕೆ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮುರ್ತುಜ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದು ಕೊಲೆಯಾಗಿರುವ ಸಾಧ್ಯತೆ ಕಡಿಮೆ ಎಂದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಮೆಟ್ಟಿಲಿನಿಂದ ಕೆಳಗೆ ಇಳಿಯುವಾಗ ಆಯಕತಪ್ಪಿ ಬಿದ್ದಿದ್ದರಿಂದ ತಲೆ ಭಾಗದಲ್ಲಿ ಪೆಟ್ಟು ಆಗಿರುವ ಸಾಧ್ಯತೆ ಹೆಚ್ಚಿದೆ. ತಲೆ ಭಾಗದಲ್ಲಾದ ಗಾಯದಿಂದ ತೀವ್ರ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಅವರು ಮೃತಪಟ್ಟಿರಬಹುದು ಎಂದಿರುವ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.
ಶಾರದಾ ಚಿಟ್​ಫಂಡ್ ಗೋಲ್​ಮಾಲ್​: ಪಿಎಂಗೆ ಆರೋಪಿಯಿಂದ ಪತ್ರ! ಯಾರ ಬುಡಕ್ಕೆ ಬರಲಿದೆ ಕೇಸ್​?

ಭಾರತದ ಗಡಿಯೊಳಕ್ಕೆ ಬಂದ ಪಾಕ್​ ಬಾಲಕಿಯರು- ವಶಕ್ಕೆ ಪಡೆದ ಸೇನೆ

ಮಾರ್ಚ್​ 31ರವರೆಗೂ 8ನೇ ತರಗತಿವರೆಗೆ ಶಾಲೆಯೂ ಇಲ್ಲ, ಪರೀಕ್ಷೆಯೂ ಇಲ್ಲ ಎಂದ ಸಿಎಂ ಚೌಹಾಣ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × one =
Remember me
