ಚೆನ್ನೈ:ಸಮುದ್ರದಲ್ಲಿ ದ್ರವ ತುಂಬಿದ ಕೆಲವು ಬಾಟಲಿಗಳು ತೇಲಿ ಬಂದಿದ್ದನ್ನು ನೋಡಿದ ಮೀನುಗಾರರು ಇವು ವಿದೇಶಿ ಮದ್ಯ ಎಂದು ಸೇವನೆ ಮಾಡಿರುವ ಘಟನೆ ತಮಿಳುನಾಡಿನ ರಾಮೇಶ್ವರದಲ್ಲಿ ನಡೆದಿದೆ.
ಆದರೆ ಇದು ಅವರ ಜೀವಕ್ಕೆ ಮುಳುವಾಗಿದೆ. ಅದರಲ್ಲಿ ಇದ್ದುದು ಮದ್ಯವಾಗಿರದೇ ಯಾವುದೇ ವಿಷಪೂರಿತ ದ್ರವವಾಗಿತ್ತು. ಅದನ್ನು ಕುಡಿಯುತ್ತಿದ್ದಂತೆಯೇ ಮೂವರು ಮೀನುಗಾರರು ಮೃತಪಟ್ಟಿದ್ದಾರೆ.
ಮೃತರನ್ನು ರಾಮೇಶ್ವರಂ ಬಳಿಯ ತಂಗಾಚಿಮಡಂನ ಅಂಥೋನಿಸ್ವಾಮಿ (38) ಅರೋಕಿಯಾ ಪ್ರೋಹಿತ್ (50) ಹಾಗೂ ವಿನೋದ್ ಕುಮಾರ್ (26) ಎಂದು ಗುರುತಿಸಲಾಗಿದೆ. ಈ ಮೂವರು ಸಮುದ್ರದಲ್ಲಿ ತೇಲಿ ಬರುತ್ತಿರುವ ಬಾಟಲ್ ನೋಡಿ ವಿದೇಶಿ ಮದ್ಯ ಎಂದು ಕುಡಿದು ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಮೂವರು ಮೀನು ಹಿಡಿಯಲು ಬೋಟ್‍ನಲ್ಲಿ ಸಮುದ್ರಕ್ಕೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಸಮುದ್ರಕ್ಕೆ ಇಳಿಯುತ್ತಿದ್ದಂತೆಯೇ ದೂರದಲ್ಲಿ ತುಂಬಿದ ಬಾಟಲಿಗಳು ತೇಲಿ ಬರುತ್ತಿರುವುದನ್ನು ಇವರು ನೋಡಿದ್ದಾರೆ. ಅವು ಮದ್ಯದ ಬಾಟಲಿಗಳಾಗಿದ್ದವು. ಅದನ್ನು ನೋಡಿದ ಮೀನುಗಾರರು ವಿದೇಶಿ ಮದ್ಯ ಎಂದು ತಿಳಿದುಕೊಂಡುಬಿಟ್ಟಿದ್ದಾರೆ.
ಅದರಲ್ಲಿ ಏನು ಇದೆ ಎನ್ನುವುದನ್ನು ತಿಳಿದುಕೊಳ್ಳುವ ಗೋಜಿಗೂ ಹೋಗದೇ ಅದರಲ್ಲಿದ್ದ ದ್ರವವನ್ನು ಕುಡಿದಿದ್ದಾರೆ. ಕುಡಿದ ತಕ್ಷಣ ಮೂವರು ಅಸ್ವಸ್ಥಗೊಂಡಿದ್ದಾರೆ. ಉಳಿದ ಮೀನುಗಾರರು ಅವರನ್ನು ದಡಕ್ಕೆ ತಂದು ವಿಷಯ ತಿಳಿಸುವ ಹೊತ್ತಿಗೆ ಇಬ್ಬರು ಮೃತಪಟ್ಟಿದ್ದರೆ, ಓರ್ವ ಆಸ್ಪತ್ರೆಯಲ್ಲಿ ಅಸು ನೀಗಿದ್ದಾನೆ.
ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಕರಾವಳಿ ಭದ್ರತಾ ಪಡೆ ಪೊಲೀಸರು ಮತ್ತು ಇತರ ಅಧಿಕಾರಿಗಳು ಈ ಪ್ರಕರಣ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.
ಮಗನಿಗೆ ಯಾವುದಕ್ಕೂ ಕಮ್ಮಿ ಮಾಡಿರಲಿಲ್ಲ… ಆತ್ಮಹತ್ಯೆ ಮಾಡಿಕೊಂಡುಬಿಟ್ಟಾ… ಹುಚ್ಚಿಯಾಗ್ತಿದ್ದೀನಿ, ಏನು ಮಾಡಲಿ ಮೇಡಂ?

VIDEO: ನನ್ನನ್ನು ಕೊಂದುಬಿಡಿ… ಪ್ಲೀಸ್​ ಮಕ್ಕಳನ್ನು ಬಿಟ್ಟುಬಿಡಿ- ಮಂಡಿಯೂರಿ ಕುಳಿತ ಸಿಸ್ಟರ್​!

ಟೈಪಿಂಗ್​, ಷಾರ್ಟ್​ಹ್ಯಾಂಡ್​ ಕಲಿತಿರುವಿರಾ? ಕೋರ್ಟ್​ನಲ್ಲಿವೆ 18 ಹುದ್ದೆಗಳು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − 15 =
Remember me
