ಹಾಂಗ್​ ಕಾಂಗ್ (ಚೀನಾ)​:ಸಾಮಾನ್ಯವಾಗಿ ಪಾಂಡಾಗಳ ವಯಸ್ಸು 30-32. ಆದರೆ 35 ವರ್ಷ ಬದುಕಿದ್ದ ವಿಶ್ವದ ಅತ್ಯಂತ ಹಿರಿಯ ಗಂಡು ಪಾಂಡಾವೊಂದು ಕೊನೆಯುಸಿರೆಳೆದಿದೆ. ಇದಕ್ಕೆ ದಯಾಮರಣ ನೀಡುವ ಮೂಲಕ ಭಾರಿ ಸುದ್ದಿಯಾಗಿದೆ. ಪಾಂಡಾಗಳಿಗೆ 35 ವರ್ಷ ವಯಸ್ಸು ಎಂದರೆ ಅದನ್ನು ಮನುಷ್ಯದ 105 ವರ್ಷಕ್ಕೆ ಸಮ ಎನ್ನಲಾಗಿದೆ.
ಚೀನಾದ ಓಷನ್ ಪಾರ್ಕ್​ನಲ್ಲಿ ಈ ಪಾಂಡಾ ವಾಸವಾಗಿತ್ತು. ಇದರ ಹೆಸರು ಆ್ಯನ್​ ಆ್ಯನ್​. ವಯೋಸಹಜವೆಂಬಂತೆ ಇದು ಘನ ಆಹಾರವನ್ನು ತಿನ್ನುವುದನ್ನು ನಿಲ್ಲಿಸಿತು. ದೀರ್ಘಕಾಲದವರೆಗೆ ನೀರು ಅಥವಾ ದ್ರವಗಳನ್ನು ಮಾತ್ರ ಸೇವಿಸುತ್ತಿತ್ತು. ನಂತರ ಓಡಾಡಲು ಇದಕ್ಕೆ ಕಷ್ಟವಾಗಿತ್ತು. ದಿನದಿಂದ ದಿನಕ್ಕೆ ಆರೋಗ್ಯ ಸ್ಥಿತಿ ಹದಗೆಡುತ್ತಿರುವುದು ಹಾಗೂ ಇದರ ನೋವು ನೋಡಲಾಗದೇ ಇದಕ್ಕೆ ದಯಾಮರಣ ಕೊಡಲು ಉದ್ಯಾನದ ಅಧಿಕಾರಿಗಳು ನಿರ್ಧರಿಸಿದರು.
'RIP An An': Love pours in from world over after oldest male giant panda dies
Read@ANIStory |https://t.co/XnX4iFkzpv#anan表紙#Panda#HongKongpic.twitter.com/mdCNY3nPJx
— ANI Digital (@ani_digital)July 22, 2022

ಓಷನ್ ಪಾರ್ಕ್ ಹಾಗೂ ಕೃಷಿ, ಮೀನುಗಾರಿಕೆ ಮತ್ತು ಸಂರಕ್ಷಣಾ ಇಲಾಖೆಯ ಪಶು ವೈದ್ಯರು ಚೀನಾ ಸಂರಕ್ಷಣೆ ಮತ್ತು ಸಂಶೋಧನಾ ಕೇಂದ್ರದೊಂದಿಗೆ ಸಮಾಲೋಚಿಸಿದ ನಂತರ ಈ ದೈತ್ಯ ಪಾಂಡಾಕ್ಕೆ ದಯಾಮರಣಗೊಳಿಸುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಪಾಂಡವಿದ್ದ ಆವರಣದಲ್ಲೇ ದಯಾಮರಣ ಪ್ರಕ್ರಿಯೆ ನೆರವೇರಿಸಲಾಗಿದೆ.
ಓಷನ್ ಪಾರ್ಕ್ ಕಾರ್ಪೊರೇಷನ್ ಅಧ್ಯಕ್ಷ ಪಾಲೊ ಪಾಂಗ್ ಮಾತನಾಡಿ, ಈ ಪಾಂಡಾ ನಮ್ಮ ಕುಟುಂಬದ ಪ್ರಮುಖ ಸದಸ್ಯರಾಗಿದ್ದ. ಅನೇಕ ಹೃದಯ ಸ್ಪರ್ಶಿಸುವ ಸ್ಮರಣೀಯ ಕ್ಷಣಗಳನ್ನು ಆತ ನೀಡಿದ್ದಾನೆ. ಆದರೆ ಆತನಿಗೆ ದಯಾಮರಣ ಕಲ್ಪಿಸದೇ ಬೇರೆ ದಾರಿ ಇರಲಿಲ್ಲ. ಅದರ ನೋವು ನೋಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಅಲ್ಲಿನ ಸಿಬ್ಬಂದಿ ಪಾಂಡಾ ಚಿತ್ರದೊಂದಿಗೆ ಬಿಳಿ ಹೂವು ಇರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ‘ಧನ್ಯವಾದಗಳು 1986-2022’ ಎಂದು ಬರೆಯಲಾಗಿದೆ. (ಏಜೆನ್ಸೀಸ್​)
ಗರ್ಭಪಾತದ ಕುರಿತು ಸುಪ್ರೀಂ ಮಹತ್ವದ ತೀರ್ಪು: ಕಾಯ್ದೆ ವ್ಯಾಪ್ತಿ ವಿಸ್ತರಣೆ- ಅವಿವಾಹಿತೆಗೆ ಅಸ್ತು

ಇಂದು ಅನಂತ್​ ಕುಮಾರ್​ ಹುಟ್ಟುಹಬ್ಬ: ಮಾಜಿ ಸಚಿವರ ಸ್ಮರಣಾರ್ಥ ಸರ್ಕಾರದಿಂದ ಜಮೀನು ಗಿಫ್ಟ್​

ಫ್ಲಿಪ್​ಕಾರ್ಟ್​ನಲ್ಲಿ ಬೌನ್ಸ್​ ಇಲೆಕ್ಟ್ರಿಕ್ ಸ್ಕೂಟರ್​ ಬಿಗ್​ ಆಫರ್​: 15 ದಿನಗಳಲ್ಲಿಯೇ ಮನೆ ಬಾಗಿಲಿಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
