ಮಹಾರಾಜ್​ಗಂಜ್​ (ಉತ್ತರ ಪ್ರದೇಶ):ಉತ್ತರಪ್ರದೇಶದಲ್ಲಿ ಅರ್ಚಕರ ಕೊಲೆಯ ಘಟನೆಗಳು ಮತ್ತೆ ಮುಂದುವರೆದಿದೆ. ಮಹದಿಯಾ ಎಂಬ ಗ್ರಾಮದ ದೇವಸ್ಥಾನದಲ್ಲಿ ವಾಸಿಸುತ್ತಿದ್ದ ಅರ್ಚಕ ಹಾಗೂ ಸಾಧ್ವಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ದೇವಾಲಯದ ಒಳಗಿದ್ದ ದೇವರ ಮೂರ್ತಿಯಿಂದಲೇ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ.
ರಾಮ್​ ರತನ್​ ಮಿಶ್ರಾ (73) ಮತ್ತು ಕಲಾವತಿ (68) ಕೊಲೆಯಾದವರು.
ಈ ಘಟನೆ ಕಳೆದ ಗುರುವಾರ ರಾತ್ರಿ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಶುಕ್ರವಾರ ಬೆಳಗ್ಗೆ ಭಕ್ತರು ದೇವಸ್ಥಾನಕ್ಕೆ ಹೋದಾಗ ರಕ್ತದ ಮಡುವಿನಲ್ಲಿ ಬಿದ್ದ ಶವಗಳನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ದೇವರ ವಿಗ್ರಹದಿಂದಲೇ ಅವರ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಇದೇ ಗ್ರಾಮದ ನಿವಾಸಿಯಾಗಿದ್ದ ರಾಮ್​ ರತನ್​ ಮಿಶ್ರಾ ಅವರು ಸ್ವಂತ ಖರ್ಚಿನಲ್ಲೇ ಗ್ರಾಮದಲ್ಲಿ ದೇವಿಯ ದೇವಸ್ಥಾನ ನಿರ್ಮಿಸಿ ವಾಸಿಸುತ್ತಿದ್ದರು. ಕಳೆದ ಎರಡೂವರೆ ದಶಕಗಳಿಂದ ನೇಪಾಳದ ಕಲಾವತಿ
ಇಲ್ಲಿಗೆ ಬಂದು ಸೇರಿಕೊಂಡಿದ್ದರು. ದೇವಿಯ ಪೂಜೆ ಮಾಡುತ್ತಿದ್ದ ಕಾರಣ ಜನರು ಅವರನ್ನು ಸಾಧ್ವಿ ಎಂದು ಕರೆಯುತ್ತಿದ್ದರು. ಇಬ್ಬರ ಕೊಲೆ ಏಕೆ ಮಾಡಲಾಗಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
VIDEO: ಹಾಡಿಗೆ ಮನಸೋತು ಗಾಯಕಿ ಮುಚ್ಚಿಹೋಗುವಷ್ಟು ಹಣ ಸುರಿದ ಅಭಿಮಾನಿ! ವಿಡಿಯೋ ವೈರಲ್‌

VIDEO: ಪತ್ನಿಯ ಅವಮಾನ ಸಹಿಸಲ್ಲ- ಸಿಎಂ ಆಗುವವರೆಗೂ ವಿಧಾನಸಭೆಗೆ ಕಾಲಿಡಲ್ಲ ಎಂದು ಕಣ್ಣೀರು ಹಾಕಿದ ಚಂದ್ರಬಾಬು ನಾಯ್ಡು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
