ತಿರುವನಂತಪುರ (ಕೇರಳ):ಕಲೆಯನ್ನು ಆರಾಧಿಸುವ ಕಲಾವಿದರು ಅದೇ ಕಲೆಯ ಪ್ರದರ್ಶನ ನೀಡುತ್ತಿರುವಾಗಲೇ ಮೃತಪಟ್ಟಿರುವ ಘಟನೆಗಳನ್ನು ಆಗಾಗ್ಗೆ ಕೇಳುತ್ತಲೇ ಇರುತ್ತವೆ. ಕಲೆಯನ್ನೇ ಉಸಿರಾಗಿಸಿಕೊಂಡವರು ಅಥವಾ ತಮ್ಮ ಕೆಲಸವನ್ನು ತುಂಬಾ ಪ್ರೀತಿಯಿಂದ ನಿರ್ವಹಿಸುವವರು ಕರ್ತವ್ಯದಲ್ಲಿ ಇರುವಾಗಿ ಏಕಾಏಕಿ ಮೃತಪಡುವ ಘಟನೆಗಳು ನಡೆಯುತ್ತಲೇ ಇರುತ್ತವೆ.
ಅಂಥದ್ದೇ ಒಂದು ಸಾವು ಖ್ಯಾತ ಗಾಯಕ ಎಡವ ಬಶೀರ್ ಅವರದ್ದು. ಮಲಯಾಳ ಚಿತ್ರದ ಹಿನ್ನೆಲೆ ಗಾಯಕರಾಗಿ ಬಹಳ ಪ್ರಸಿದ್ಧಿ ಪಡೆದಿರುವ ಬಶೀರ್​ ಅವರು, ಕೇರಳದ ಅಲಪ್ಪುಳದಲ್ಲಿ ನಡೆದ ‘ಬ್ಲೂ ಡೈಮಂಡ್ ಆರ್ಕೆಸ್ಟ್ರಾ’ದ ಸುವರ್ಣ ಮಹೋತ್ಸವದಲ್ಲಿ ಹಾಡುತ್ತಿದ್ದಾಗಲೇ ಕುಸಿದು ಮೃತಪಟ್ಟಿದ್ದಾರೆ. ಎದೆನೋವು ಕಾಣಿಸಿ ಕುಸಿದುಬಿದ್ದ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿದ್ದರು.
ಯೇಸುದಾಸ್ ಮತ್ತು ಮುಹಮ್ಮದ್ ರಫಿ ಅವರ ಹಾಡುಗಳಿಂದ ಬಶೀರ್ ಜನರ ಹೃದಯ ಗೆದ್ದಿದ್ದರು. ಸಂಗೀತ ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಇಲ್ಲಿದೆ ನೋಡಿ ವಿಡಿಯೋ:
Warning: Disturbing ContentSinger dies during live performance.Malayalam singer#EdavaBasheerdied after collapsing on the stage while singing.The 78-year-old was performing at the Golden jubilee of Blue Diamonds orchestra.pic.twitter.com/k6CCfhafjO
— Bobins Abraham Vayalil (@BobinsAbraham)May 29, 2022

VIDEO: ದೀಪಿಕಾ… ನಿನ್ನೀ ಬಳ್ಳಿಯ ದೇಹಕ್ಕೆ ಇದೆಲ್ಲಾ ಬೇಕಿತ್ತಾ? ಭಾರಿ ಡ್ರೆಸ್​ ಹಾಕಿ ಸುಸ್ತಾದ ನಟಿ!

VIDEO: ಸಾಕು… ಸಾಕು… ನನ್ನ ಮುಟ್ಬೇಡ… ನೀನು ಅಸ್ಪೃಶ್ಯ: ಧಾರ್ಮಿಕ ಬೋಧಕನ ವೈರಲ್‌ ವಿಡಿಯೋಗೆ ಭಾರಿ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − two =
Remember me
