ಗುಂಟೂರು: ಒಂದೇ ಕುಟುಂಬದ ಆರು ಮಂದಿ ನಿಗೂಢವಾಗಿ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ತಾಲೂಕಿನ ಲಂಕವಾನಿದಿಬ್ಬ ಗ್ರಾಮದಲ್ಲಿ ನಡೆದಿದೆ.ಮೃತಪಟ್ಟವರನ್ನು ರಾಮಮೂರ್ತಿ, ಕಿರಣ್​, ಮನೋಜ್​, ವಂಡಬೋ, ಮಹೇಂದ್ರ, ಒಡಿಶಾ ನಿವಾಸಿ ನವೀನ್​ ಎಂದು ಗುರುತಿಸಲಾಗಿದೆ.
ರಾತ್ರಿ ಮಲಗಿದ್ದ ವೇಳೆ ಕರೆಂಟ್ ತಂತಿ ಶೆಡ್​ ಮೇಲೆ ಬಿದ್ದ ಪರಿಣಾಮ ಈ ಸಾವು ಸಂಭವಿಸಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಆದರೆ ಶಾರ್ಟ್​ ಸರ್ಕ್ಯೂಟ್​ ಆದ ಬಗ್ಗೆ ಯಾವುದೇ ಕುರುಹು ಇಲ್ಲ. ಆದ್ದರಿಂದ ಇದು ಕರೆಂಟ್​ ತಂತಿ ಬಿದ್ದಿರುವುದು ಕಾರಣವಲ್ಲ ಎಂದಿದ್ದಾರೆ ವಿದ್ಯುತ್​ ಸರಬರಾಜು ನಿಗಮದ ಅಧಿಕಾರಿಗಳು. ಆದರೆ ಬೆಂಕಿ ತಗುಲಿರುವುದಂತೂ ಗ್ಯಾರೆಂಟಿ. ಆದರೆ ಆ ಬೆಂಕಿ ಬಂದದ್ದು ಹೇಗೆ ಎಂಬ ಬಗ್ಗೆ ಇದುವರೆಗೂ ನಿಗೂಢವಾಗಿಯೇ ಉಳಿದಿದೆ. ಶೆಡ್​ನಲ್ಲಿ ಬಹುಶಃ ರಸಾಯನಿಕ ಇದ್ದರಿಬಹುದು. ಅದಕ್ಕೆ ಬೆಂಕಿ ತಗುಲಿ ಘಟನೆ ಸಂಭವಿಸಿರಬಹುದು ಎನ್ನಲಾಗುತ್ತಿದೆಯಾದರೂ ಸಾವಿನ ಕಾರಣ ಮಾತ್ರ ಇದುವರೆಗೆ ಸ್ಪಷ್ಟವಾಗಿಲ್ಲ.
ಎಲ್ಲರೂ ಅನ್ಯೋನ್ಯವಾಗಿದ್ದ ಹಿನ್ನೆಲೆಯಲ್ಲಿ ಹಾಗೂ ಯಾವುದೇ ಸಮಸ್ಯೆ ಈ ಕುಟುಂಬಕ್ಕೆ ಇರದ ಕಾರಣ ಇದು ಆತ್ಮಹತ್ಯೆಯೂ ಅಲ್ಲ, ಮತ್ತೆ ಕೊಲೆ ಮಾಡುವಂಥ ಉದ್ದೇಶವೂ ಯಾರಿಗೂ ಇದ್ದಂತಿರಲಿಲ್ಲ ಎನ್ನಲಾಗಿದ್ದು, ಸಾವಿನ ಕಾರಣವನ್ನು ಪತ್ತೆ ಹಚ್ಚುವಲ್ಲಿ ತನಿಖಾಧಿಕಾರಿಗಳು ತೊಡಗಿಕೊಂಡಿದ್ದಾರೆ.
ತಾಲಿಬಾನಿಗಳ ಪರವಾಗಿ ನಿಂತ ಪಾಕ್‌ ಪ್ರಧಾನಿ! ಇವರು ಹೋರಾಟಗಾರರು, ಉಗ್ರರಲ್ಲ ಎಂದ ಇಮ್ರಾನ್‌

ಶಿಲ್ಪಾ ಜತೆ ಸಂಬಂಧ ಚೆನ್ನಾಗಿಲ್ಲ ಎಂದು ನನಗೆ ಏನೇನೋ ಮಾಡಿದರು: ಕುಂದ್ರಾ ವಿರುದ್ಧ ನಟಿಯಿಂದ ಕೇಸ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 3 =
Remember me
