ಸೀತಾಪುರ (ಉತ್ತರ ಪ್ರದೇಶ):ಶಾಲಾ-ಕಾಲೇಜಿನ ಪರೀಕ್ಷೆಗಳೇ ಸರ್ವಸ್ವ ಅಲ್ಲ, ಇಲ್ಲಿ ಗಳಿಸುವ ಅಂಕಗಳು ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂಬ ಬಗ್ಗೆ ಎಷ್ಟೇ ಹೇಳುತ್ತಿದ್ದರೂ ಪರೀಕ್ಷೆ ಫಲಿತಾಂಶ ಬರುತ್ತಿದ್ದಂತೆಯೇ ಆತ್ಮಹತ್ಯೆಯ ಹಾದಿ ತುಳಿಯುವ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಲೇ ಇದೆ. ಸ್ನೇಹಿತರು, ಶಿಕ್ಷಕರು ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಪಾಲಕರ ಆಕ್ರೋಶ, ಅಸಮಾಧಾನ, ನಿಂದನೆಗಳಿಂದ ಮಕ್ಕಳು ಆತ್ಮಹತ್ಯೆಯ ಹಾದಿ ತುಳಿಯುತ್ತಿರುವುದಾಗಿ ವರದಿಗಳು ಹೇಳುತ್ತಿವೆ.
ಅನುತ್ತೀರ್ಣಗೊಂಡಿರುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಒಂದೆಡೆಯಾದರೆ ಉತ್ತರ ಪ್ರದೇಶದ ಸೀತಾಪುರದ ವಿದ್ಯಾರ್ಥಿನಿಯೊಬ್ಬಳು ತಾನು ಬಯಸಿದ್ದಷ್ಟು ಅಂಕ ಬರಲಿಲ್ಲ, ರಾಜ್ಯಕ್ಕೆ ಟಾಪರ್​ ಆಗಲಿಲ್ಲ, ರ್‍ಯಾಂಕ್​ ಬಂದಿಲ್ಲವೆಂದು ನೊಂದು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸೀತಾಪುರದ ಮಹಮೂದಾಬಾದ್‌ ತಹಶೀಲ್‌ನಲ್ಲಿರುವ ಸೀತಾ ಇಂಟರ್‌ ಕಾಲೇಜಿನ ಇಂಟರ್‌ಮೀಡಿಯೇಟ್‌ ವಿದ್ಯಾರ್ಥಿನಿ ಗರಿಮಾ ವರ್ಮಾ ಶೇ. 81 ಅಂಕ ಪಡೆದಿದ್ದಾಳೆ. ಆದರೆ ರ್‍ಯಾಂಕ್​ ಬಂದಿಲ್ಲವೆಂದು ಈಕೆ ತುಂಬಾ ನೊಂದುಕೊಂಡು ಖಿನ್ನತೆಗೆ ಜಾರಿದ್ದಳು. ಕೋಚಿಂಗ್‌ ಸೆಂಟರ್​ಗೆ ಹೋಗಿದ್ದ ಈಕೆ ವಾಪಸ್​ ಬರುವಾಗ ಕಾಲುವೆಗೆ ಹಾರಿದ್ದಾಳೆ. ಅದೇ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ದಾರಿಹೋಕರೊಬ್ಬರು ರಸ್ತೆಬದಿ ಬಿದ್ದಿದ್ದ ಸೈಕಲ್ ಹಾಗೂ ಬ್ಯಾಗ್ ನೋಡಿ ಅದನ್ನು ಪರಿಶೀಲಿಸಿ ಅದರಲ್ಲಿ ಬರೆದಿದ್ದ ಮೊಬೈಲ್ ನಂಬರ್ ಸಹಾಯದಿಂದ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ.
ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಡೆತ್​ನೋಟ್​ ಪತ್ತೆಯಾಗಿದೆ. ಅದರಲ್ಲಿ ‘ಸಾರಿ ಮಮ್ಮಿ-ಸಾರಿ ಪಪ್ಪಾ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಈ ಫಲಿತಾಂಶ ನನಗೆ ತೃಪ್ತಿ ತರಲಿಲ್ಲ. ರ್ಯಾಂಕ್​ ಬರದೇ ನನಗೆ ಬದುಕಲು ಆಗುವುದಿಲ್ಲ. ದಿನವೂ, ಪ್ರತಿಕ್ಷಣ ಈ ಫಲಿತಾಂಶದೊಂದಿಗೆ ನಾನು ಬದುಕಲಾರೆ, ಇದು ನನ್ನನ್ನು ಚುಚ್ಚುತ್ತಲೇ ಇರುತ್ತದೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ವಿದ್ಯಾರ್ಥಿನಿ ಬರೆದಿದ್ದಾಳೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 2 =
Remember me
