ನವದೆಹಲಿ:ಕ್ಲಾಸ್ ಆಫ್ 2020, ಸೆಥ್ ಜೀ, ‘ಸೇಠ್ ಜೀ, ಆಪ್ ಕೇ ಆ ಜಾನೇ ಸೇ, ಮೇರಿ ಹಾನಿಕಾಕರ್ ಬೀವೀ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಡೆಸಿರುವ ಕಿರುತೆರೆ ನಟಿ ಲೀನಾ ಆಚಾರ್ಯ ಮೂತ್ರಪಿಂಡದ ವೈಫಲ್ಯದಿಂದಾಗಿ ಮೃತಪಟ್ಟಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಲೀನಾ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಕೆಲ ತಿಂಗಳ ಹಿಂದೆ ಅವರ ತಾಯಿ ಮೂತ್ರಪಿಂಡವನ್ನು ನೀಡಿದ್ದರು. ಆದರೂ ಚಿಕಿತ್ಸೆ ಫಲಿಸದೇ ನಟಿ ಮೃತಪಟ್ಟಿದ್ದಾರೆ. ಈ ಮೊದಲು ಕರೊನಾದಿಂದಾಗಿ ಇವರು ಮೃತಪಟ್ಟಿರುವುದಾಗಿ ಸುದ್ದಿಯಾಗಿತ್ತು. ಅದರೆ ವೈದ್ಯರು ಮೂತ್ರಪಿಂಡದ ವೈಫಲ್ಯದಿಂದ ನಿಧನರಾಗಿರುವುದಾಗಿ ದೃಢಪಡಿಸಿದ್ದಾರೆ.
ಇದನ್ನೂ ಓದಿ:‘ಐದು ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್​ ಮಾಡಿದ್ದೇನೆ- ಬೇಕೆಂದಾಗ ಮಗು ಪಡೆಯುವೆ’
‘2015ರಲ್ಲಿ ಲೀನಾ ಆಚಾರ್ಯ ಆರೋಗ್ಯ ಚೆನ್ನಾಗಿಲ್ಲ ಎಂದು ತಿಳಿಯಿತು. ಒಂದು ಕಿಡ್ನಿ ಮೇಲೆ ಆಗ ಅವರು ಬದುಕುಳಿದಿದ್ದರು. ಕೆಲ ತಿಂಗಳುಗಳಿಂದ ಅವರ ಆರೋಗ್ಯದಲ್ಲಿ ಬದಲಾವಣೆ ಆಗುತ್ತಲಿತ್ತು. ಅವರು ಇಂದು ದೈಹಿಕವಾಗಿ ಇರದಿದ್ದರೂ ಕೂಡ ನಾನು ಮಾತ್ರ ಎಂದಿಗೂ ಅವರನ್ನು ನೆನಪಿಟ್ಟುಕೊಳ್ಳುತ್ತೇನೆ’ ಎಂದು ಕಿರುತೆರೆ ನಟ ವರ್ಷಿಪ್​ ಖನ್ನಾ ಹೇಳಿದ್ದಾರೆ.
ಅವರ ಪ್ರಸಿದ್ಧ ಧಾರಾವಾಹಿ ಕ್ಲಾಸ್ ಆಫ್ 2020ಯಲ್ಲಿ ಅವರ ಜತೆ ನಟಿಸಿದ್ದ ನಟ ರೋಹನ್​, ಲೀನಾ ಜತೆಗಿನ ತಮ್ಮ ಅನುಭವವನ್ನು ಹಂಚಿಕೊಂಡು ದುಃಖಿತರಾಗಿದ್ದಾರೆ.
ನನ್ನ ಉತ್ತಮ ಸ್ನೇಹಿತೆ ಹಾಗೆಯೇ ಶ್ರೇಷ್ಠ ಕಲಾವಿದೆ ಕೂಡ ಹೌದು. ಲೀನಾ ಆಚಾರ್ಯ ಅವರು ಯಾವಾಗಲೂ ಇತರರ ಪರ ನಿಲ್ಲುತ್ತಾರೆ. ಸದ್ಯ ಅವರು ಈ ಜಗತ್ತಿಗೆ ವಿದಾಯ ಹೇಳಿದ್ದಾರೆ. ಈ ಮೂಲಕ ನಾನು ನನ್ನ ಒಳ್ಳೆಯ ಸ್ನೇಹಿತೆಯೊಬ್ಬಳನ್ನು ಕಳೆದುಕೊಂಡಿದ್ದೇನೆ ಎಂದು ಚಿತ್ರಕಥೆಗಾರ, ನಟ ಅಭಿಷೇಕ್ ಗೌತಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ಪಕ್ಕಾ ಕಳ್ಳಿಯಾದ ‘ಮಿಸ್​ ದೆಹಲಿ’- ಬಾಯ್​ಫ್ರೆಂಡ್​ ಜತೆ ಮಜಾ ಮಾಡಹೋಗಿ ಸಿಕ್ಕಿಬಿದ್ಳು ಸುಂದರಿ!

ಕಮಲದತ್ತ ಮುಖ ಮಾಡಿದ ಕಾಂಗ್ರೆಸ್​ ಸ್ಟಾರ್​ ಪ್ರಚಾರಕಿ ನಟಿ- ನಾಳೆ ಮುಹೂರ್ತ ಫಿಕ್ಸ್​?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − 5 =
Remember me
