ವಿಶಾಖಪಟ್ಟಣ:ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಹುತೇಕ ರಾಜ್ಯಗಳು ಎಲ್ಲಾ ಮಳಿಗೆಗಳಿಗೂ ಟೈಂ ಫಿಕ್ಸ್‌ ಮಾಡಿದೆ. ಬೆಳಗ್ಗೆ 4 ಅಥವಾ 6 ಗಂಟೆ ಅಂಗಡಿಗಳು ಓಪನ್‌ ಇಡಲು ಒಂದೊಂದು ರಾಜ್ಯಗಳು ಒಂದೊಂದು ಸಮಯ ನಿಗದಿ ಮಾಡಿದೆ. ಅದೇ ರೀತಿ ಮದ್ಯದ ಅಂಗಡಿಗಳಿಗೂ ಸಮಯ ನಿಗದಿ ಮಾಡಲಾಗಿದೆ.
ಆಂಧ್ರಪ್ರದೇಶದಲ್ಲಿ ಮಾತ್ರ ಎಣ್ಣೆಪ್ರಿಯರು ಮದ್ಯದಂಗಡಿಗೆ ಹೋಗಿ ಖರೀದಿ ಮಾಡುವುದು ತುಂಬಾ ಕಮ್ಮಿಯಾಗಿದೆಯಂತೆ! ಇಲ್ಲಿ ಕೂಡ ಬೆಳಗಿನ ಅವಧಿಯಲ್ಲಿ ಮದ್ಯಮಾರಾಟಕ್ಕೆ ಅವಕಾಶ ನೀಡಲಾಗಿದೆ. ಬೆಳಗಿನ ಅವಧಿಯಲ್ಲಿ ಅಂಗಡಿಗೆ ಹೋಗಿ ಮದ್ಯಖರೀದಿ ಮಾಡಲು ಮುಜುಗುರ ಪಟ್ಟುಕೊಳ್ಳುತ್ತಿರುವುದು ಇದಕ್ಕೆ ಕಾರಣ ಎಂದು ಸಾಮಾನ್ಯವಾಗಿ ಅಂದುಕೊಳ್ಳಬಹುದು.
ಆದರೆ ವಿಚಿತ್ರ ಎಂದರೆ ಮಧ್ಯಪ್ರದೇಶದಲ್ಲಿ ಮೇ ತಿಂಗಳಿನಲ್ಲಿ ಎರಡು ಗಂಟೆ ಹೆಚ್ಚಿನ ಅವಧಿಯನ್ನು ಮದ್ಯ ಖರೀದಿಗೆ ನೀಡಲಾಗಿದ್ದರೂ, ಏಪ್ರಿಲ್‌ಗಿಂತಲೂ ಅತ್ಯಂತ ಕಡಿಮೆ ಮದ್ಯ ಮಾರಾಟವಾಗಿದ್ದು, ಇದು ಬಾರ್‌ ಮಾಲೀಕರನ್ನು ಚಿಂತೆಗೀಡುಮಾಡಿದೆ. ಜತೆಗೆ ಸರ್ಕಾರದ ಬೊಕ್ಕಸಕ್ಕೆ ಬಹುದೊಡ್ಡ ಆದಾಯ ಇದರಿಂದಲೇ ಬರುವ ಕಾರಣ ಸರ್ಕಾರ ಕೂಡ ಚಿಂತೆಗೀಡಾದರೆ ಅಚ್ಚರಿಯಿಲ್ಲ.
ಏಪ್ರಿಲ್​ಗೆ ಹೋಲಿಕೆ ಮಾಡಿದ್ರೆ ಮೇ ತಿಂಗಳಲ್ಲಿ ಮದ್ಯ ಮಾರಾಟದಲ್ಲಿ 9.74 ಪ್ರತಿಶತ ಕುಸಿತ ಕಂಡು ಬಂದಿದೆ. ಏಪ್ರಿಲ್​ ಆರಂಭದಲ್ಲಿ ನಾಲ್ಕು ಗಂಟೆ ಇದ್ದ ಸಮಯವನ್ನು ನಂತರ ಆರು ಗಂಟೆಗೆ ಏರಿಸಿದ್ದರೂ ಕಡಿಮೆ ಮಾರಾಟವಾಗಿದೆ. ಏಪ್ರಿಲ್​ ತಿಂಗಳಲ್ಲಿ ಆಂಧ್ರಪ್ರದೇಶದಲ್ಲಿ 1863.35 ಕೋಟಿ ರೂ. ಮದ್ಯ ಮಾರಾಟವಾಗಿದ್ದರೆ ಮೇ ತಿಂಗಳಲ್ಲಿ 1686.32 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಅಂದರೆ ಸುಮಾರು ಎರಡು ಸಾವಿರ ಕೋಟಿ ರೂಪಾಯಿಯಷ್ಟು ಕುಸಿತ ಕಂಡಿದೆ.
ಪ್ರಧಾನಿಜೀ… ಪರೀಕ್ಷೆ ಕ್ಯಾನ್ಸಲ್‌ ಆದ್ರೂ ಅಡ್ಡಿಲ್ಲ, ನೇಹಾಳನ್ನು ಸೀರೆಯಲ್ಲಿ ನೋಡೋ ಆಸೆ ಈಡೇರಿಸಿ ಪ್ಲೀಸ್‌. ಪ್ಲೀಸ್‌…

VIDEO: ತಪಾಸಣೆ ಮಾಡಲು ಬಂದ ಪೊಲೀಸರ ಮೇಲೆ ಆಂಧ್ರದ ಪುಂಡರ ಹಲ್ಲೆ!

https://www.vijayavani.net/s-kissing-laws-in-dubai/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − 13 =
Remember me
