ಮುಂಬೈ:ಚಿತ್ರ ತಾರೆಯರು ಏನು ಮಾಡಿದರೂ ಅದು ಸುದ್ದಿಯಾಗುತ್ತಲೇ ಇರುತ್ತದೆ. ಅದರಲ್ಲಿಯೂ ಅವರು ಮದುವೆಯಾದ ಮೇಲೆ ಅವರ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿರುತ್ತದೆ. ಇಬ್ಬರೂ ತಾರಾ ದಂಪತಿಯಾದರಂತೂ ಮುಗಿದೇ ಹೋಯ್ತು.
ಅಂಥದ್ದೇ ಒಂದು ಬಹು ಕುತೂಹಲ ಎನಿಸುವ ಜೋಡಿ ರಣ್‍ವೀರ್ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ. 2018ರ ನವೆಂಬರ್​ 14ರಂದು ಮದುವೆಯಾಗಿರುವ ಈ ಜೋಡಿ ಕುರಿತು ಸಾಕಷ್ಟು ಕುತೂಹಲ ಕಾಡುತ್ತಿದೆ ಅಭಿಮಾನಿಗಳಲ್ಲಿ. ನಿನ್ನೆ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಇಬ್ಬರು ಮುಂಬೈನ ಹಿಂದುಜಾ ಆಸ್ಪತ್ರೆಗೆ ಗುಟ್ಟಾಗಿ ಭೇಟಿ ನೀಡಿದ್ದಾರೆ. ಈ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದಿರುವ ದೀಪಿಕಾ ಹಾಗೂ ರಣ್‍ವೀರ್ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ ಅಷ್ಟೇ.

ಇದರ ಫೋಟೋ ಭಾರಿ ವೈರಲ್​ ಆಗಿದೆ. ಇದಕ್ಕೆ ಕಾರಣ, ಇವರಿಬ್ಬರೂ ಏಕೆ ಈ ಆಸ್ಪತ್ರೆಗೆ ಹೋದರು ಎಂಬುದೇ ಚರ್ಚೆ. ಅಭಿಮಾನಿಗಳಿಗೆ ಇದು ಆಹಾರದ ವಸ್ತುವಾಗಿದ್ದು, ದೀಪಿಕಾ ಗರ್ಭಿಣಿಯಾಗಿದ್ದಾರೆ ಎಂದು ಚರ್ಚೆ ಶುರುವಾಗಿದೆ! ಈ ವೈರಲ್​ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುವ ಅಭಿಮಾನಿಗಳು ಇದರ ಬಗ್ಗೆ ಗುಸುಗುಸು ಶುರು ಮಾಡಿದ್ದು, ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಸುದ್ದಿ ಮಾಡಿದ್ದಾರೆ.
ದೀಪಿಕಾ ಹಾಗೂ ರಣ್‍ವೀರ್ ಒಟ್ಟಿಗೆ ಅಭಿನಯಿಸಿದ್ದ ರಾಮಲೀಲಾ ಸಿನಿಮಾ ಇಬ್ಬರಿಗೂ ಭಾರಿ ಹೆಸರು ತಂದುಕೊಟ್ಟಿತ್ತು. ನಂತರ ಬಾಜೀರಾವ್ ಮಸ್ತಾನಿ ಹಾಗೂ ಪದ್ಮಾವತ್ ಸಿನಿಮಾ ಕೂಡ ಸೂಪರ್​ಹೊಟ್​ ಆಗಿದ್ದು, ಇದೀಗ ಈ ಜೋಡಿಯ ಬಗ್ಗೆ ಅಭಿಮಾನಿಗಳ ಕಣ್ಣು ನೆಟ್ಟಿದೆ.
ಯುವಕರೇ ಹುಷಾರ್​! ಫಸ್ಟ್​ ನೈಟೇ ಶಾಕ್ ಕೊಟ್ಟ ಸುಂದರಿ​- ಟೆರೇಸ್​ ಹಾರಿ ಎಸ್ಕೇಪ್​!

ಅಳ್ತಾರೆ, ಗಂಡನ ಜತೆ ಜಗಳವಾಡ್ತಾರೆ ಅನ್ನೋ ಸುದ್ದಿ ಮಾನಹಾನಿ ಆಗತ್ತೇನ್ರಿ? ಶಿಲ್ಪಾ ವಿರುದ್ಧ ಕೋರ್ಟ್​ ಗರಂ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + fifteen =
Remember me
