ಕೇನ್ಸ್​ (ಫ್ರಾನ್ಸ್​):ಫ್ರಾನ್ಸ್​ನ ಕೇನ್ಸ್​ನಲ್ಲಿ ಇಂದಿನಿಂದ (ಮೇ 17) ನಡೆಯುತ್ತಿರುವ ಕೇನ್ಸ್​ ಫೆಸ್ಟಿವಲ್​-2022ನಲ್ಲಿ ಬಾಲಿವುಡ್​ನ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಜಡ್ಜ್​ (ಜ್ಯೂರಿ) ಆಗಿ ಆಯ್ಕೆ ಆಗಿದ್ದಾರೆ. ಈ ಹಿಂದೆ ಅನೇಕ ಬಾರಿ ಅತಿಥಿಯಾಗಿ ಹೋಗುತ್ತಿದ್ದ ದೀಪಿಕಾ ಇದೇ ಮೊದಲ ಬಾರಿಗೆ ಜ್ಯೂರಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.
ಸಿನಿಮೋತ್ಸವಕ್ಕೂ ಮುನ್ನ ಜ್ಯೂರಿಗಳಿಗಾಗಿ ಏರ್ಪಡಿಸಿದ್ದ ಔತಣಕೂಟದಲ್ಲಿ ದೀಪಿಕಾ ಭಾಗಿಯಾಗಿದ್ದಾರೆ. ದೀಪಿಕಾ, ಕ್ಯಾನ್​ ಫಿಲ್ಮ್ ಫೆಸ್ಟಿವಲ್ ನಿರ್ದೇಶಕ ಥಿಯೆರಿ ಫ್ರೆಮಾಕ್ಸ್, ಅಮೆರಿಕ ಚಲನಚಿತ್ರ ನಿರ್ದೇಶಕ ಮತ್ತು ಅಧಿಕೃತ ಆಯ್ಕೆಯ ತೀರ್ಪುಗಾರ ಸದಸ್ಯರಾದ ಜೆಫ್ ನಿಕೋಲ್ಸ್, ಬ್ರಿಟಿಷ್ ನಟಿ ರೆಬೆಕಾ ಹಾಲ್ ಮತ್ತು ಇಟಾಲಿಯನ್ ನಟಿ ಜಾಸ್ಮಿನ್ ಟ್ರಿಂಕಾ ಜತೆ ಈ ಕೂಟದಲ್ಲಿ ಭಾಗವಹಿಸಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲಾತಾಣದಲ್ಲಿ ಟ್ರೆಂಡ್ ಆಗಿದೆ.
ಈ ಫೋಟೋದಲ್ಲಿ ಗಮನ ಸೆಳೆದಿರುವುದು ದೀಪಿಕಾ ಅವರ ಡ್ರೆಸ್​. ಲೂಯಿ ವಿಟಾನ್ ಅವರ ಫಾಲ್ 2021 ಸಂಗ್ರಹದಿಂದ ದೀಪಿಕಾ ಸೀಕ್ವಿನ್ಡ್ ಡ್ರೆಸ್ ಆಯ್ಕೆ ಮಾಡಿಕೊಂಡಿದ್ದು. ಅದಕ್ಕೆ ಸರಿ ಹೊಂದುವ ಕಂದು ಬಣ್ಣದ ಎತ್ತರದ ಬೂಟುಗಳನ್ನು ಧರಿಸಿ ಸುಂದರಿಯಾಗಿ ಕಾಣುತ್ತಿದ್ದು ಇದು ದೀಪಿಕಾ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.
ದೀಪಿಕಾ ಅವರೊಂದಿಗೆ ತೀರ್ಪುಗಾರರ ಪ್ಯಾನೆಲ್‌ನಲ್ಲಿ ನಟಿ-ನಿರ್ದೇಶಕಿ ರೆಬೆಕಾ ಹಾಲ್, ನೂಮಿ ರಾಪೇಸ್ ಮತ್ತು ಇಟಾಲಿಯನ್ ನಟಿ-ನಿರ್ದೇಶಕಿ ಜಾಸ್ಮಿನ್ ಟ್ರಿಂಕಾ, ನಿರ್ದೇಶಕರಾದ ಅಸ್ಗರ್ ಫರ್ಹಾದಿ, ಲಾಡ್ಜ್ ಲೈ, ಜೆಫ್ ನಿಕೋಲ್ಸ್ ಮತ್ತು ಜೋಕಿಮ್ ಟ್ರೈಯರ್ ಸಹ ಇದ್ದಾರೆ.
ಅಕ್ಷಯ್‌ ಕುಮಾರ್‌ಗೆ ಮತ್ತೆ ಕರೊನಾ ಸಂಕಟ: ’ಕೇನ್ಸ್‌’ ಕನಸು ಭಗ್ನ- ಟ್ವೀಟ್‌ ಮೂಲಕ ದುಃಖ ತೋಡಿಕೊಂಡ ನಟ

ಬಾಲ್ಯದಲ್ಲೇ ಮದ್ವೆ ಮಾಡಿದ್ರೆ ಈ ಸಮಸ್ಯೆನೇ ಬರ್ತಿರಲಿಲ್ಲ ಎಂದು ಅಜ್ಜಿಯನ್ನೇ ಕೊಂದುಹಾಕಿದ ಮೊಮ್ಮಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 2 =
Remember me
