ಮುಂಬೈ:2018ರ 14ರಂದು ಬಾಲಿವುಡ್‌ ತಾರೆಯರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ​ಕಳೆದ ವಾರ ತಮ್ಮ ಮೂರನೆಯ ವಿವಾಹ ವಾರ್ಷಿಕೋತ್ಸವವವನ್ನು ಭರ್ಜರಿಯಾಗಿ ಈ ಜೋಡಿ ಆಚರಿಸಿಕೊಂಡಿದೆ.
ಈ ಸಂದರ್ಭದಲ್ಲಿ ಇಲ್ಲಿಯವರೆಗೆ ಹೇಳದಿದ್ದ ಗುಟ್ಟೊಂದನ್ನು ದೀಪಿಕಾ ಹೇಳಿದ್ದಾರೆ. ಅದೇನೆಂದರೆ ತಾವು ಮದುವೆಗೂ ಮುನ್ನ ಬುರ್ಖಾ ಧರಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ‘ನನ್ನ ಮತ್ತು ರಣವೀರ್‌ ಮದುವೆ ಫಿಕ್ಸ್ ಆದಾಗಿನಿಂದಲೂ ನಾನು ಬುರ್ಖಾ ಧರಿಸುತ್ತಿದ್ದೆ. ನಿಮಗೆಲ್ಲಾ ಇದನ್ನು ಕೇಳಿ ಅಚ್ಚರಿಯಾಗಬಹುದು. ಆದರೆ ಅದು ನನಗೆ ಅನಿವಾರ್ಯವಾಗಿತ್ತು’ ಎಂದಿದ್ದಾರೆ ನಟಿ.
ಅಷ್ಟಕ್ಕೂ ಬುರ್ಖಾ ಧರಿಸಲು ಕಾರಣ ಏನೆಂದರೆ, ಇವರಿಬ್ಬರು ಮದುವೆ ಆಗುತ್ತಾರೆ ಎಂಬ ಸುದ್ದಿ ಬಹಳ ಮುಂಚೆಯೇ ಹರಡಿಬಿಟ್ಟಿತ್ತು. ಆದ್ದರಿಂದ ಈ ಜೋಡಿಯ ಮೇಲೆ ಮಾಧ್ಯಮಗಳ ಕಣ್ಣು ಸದಾ ನೆಟ್ಟಿರುತ್ತಿದ್ದವು. ಎಲ್ಲಿಗೆ ಹೋಗ್ತಾರೆ, ಏನು ಮಾಡ್ತಾರೆ ಎನ್ನುವ ಬಗ್ಗೆ ವರದಿ ಮಾಡಲು ಪತ್ರಕರ್ತರು ಕಾಯುತ್ತಿದ್ದರು. ಇದಕ್ಕಾಗಿಯೇ ಅನಿವಾರ್ಯವಾಗಿ ಹಲವು ತಿಂಗಳು ತಾವು ಬುರ್ಖಾ ಧರಿಸಿಕೊಂಡು ಓಡಾಡಬೇಕಾಯಿತು ಎಂದಿದ್ದಾರೆ ದೀಪಿಕಾ.
‘ಮದುವೆ ದಿನದ ಡ್ರೆಸ್​ ಹೇಗಿರಬೇಕು ಎಂಬುದಕ್ಕೆ ನಾನು ಮತ್ತು ರಣವೀರ್‌ ಬಹಳ ತಲೆ ಕೆಡಿಸಿಕೊಂಡಿದ್ದೆವು. ಅದಕ್ಕಾಗಿ ಹಲವಾರು ಅಂಗಡಿಗಳನ್ನು ಸುತ್ತಬೇಕಿತ್ತು. ಆದರೆ ಮದುವೆಯ ಬಗ್ಗೆ ಬಹಳ ಮುಂಚೆಯೇ ಬಹಿರಂಗವಾದ ಹಿನ್ನೆಲೆಯಲ್ಲಿ ಮಾಧ್ಯಮಗಳು ನಮ್ಮನ್ನು ಬಿಡುತ್ತಿರಲಿಲ್ಲ. ಈ ಸಂದರ್ಭದಲ್ಲಿ ನನ್ನ ವಸ್ತ್ರವಿನ್ಯಾಸಕ ಸಬ್ಯಸಾಚಿ ನನಗೊಂದು ಸಲಹೆ ಕೊಟ್ಟರು. ನೀವು ಬುರ್ಖಾ ಧರಿಸಿ ಹೋಗುವುದು ಅನಿವಾರ್ಯ. ಇಲ್ಲದಿದ್ದರೆ ನಿಮಗೆ ಕಷ್ಟವಾಗಬಹುದು ಎಂದರು. ಅದರ ಡಿಸೈನ್‌ ಕೂಡ ಅವರೇ ಮಾಡಿಕೊಟ್ಟರು. ಅವರ ಸಲಹೆಯಂತೆ ನಾನು ಬುರ್ಖಾ ಧರಿಸಿದೆ’ ಎಂದಿದ್ದಾರೆ ನಟಿ.
ಸದ್ಯ ರಣವೀರ್ ಸಿಂಗ್​ ಹಾಗೂ ದೀಪಿಕಾ ಜತೆಯಾಗಿ ನಟಿಸಿರುವ ‘83’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಕರೊನಾ ಕಾರಣದಿಂದ ಮುಂದೂಡತ್ತಲೇ ಇದೆ. 1983ರಲ್ಲಿ ಭಾರತ ಕ್ರಿಕೆಟ್​ ತಂಡ ವಿಶ್ವಕಪ್​ ಗೆದ್ದ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ನಟಿಸಿದ್ದಾರೆ. ಡಿ.24ರಂದು ಈ ಚಿತ್ರ ತೆರೆಕಾಣಲಿದೆ.
VIDEO: ಅಪ್ಪು ಎಲ್ಲಿದ್ದಾರೆ? ಆಸೆ ಏನಿತ್ತು? ಮತ್ತೆ ಹುಟ್ತಾರಾ…? ಜೀವಂತ ವ್ಯಕ್ತಿಯ ದೇಹದಲ್ಲಿ ಆತ್ಮ ಕರೆಸಿ ಮಾತನಾಡುವೆ ಎಂದ ಗುರೂಜಿ

ಕೃಷಿ ಕಾಯ್ದೆ ರದ್ದಾದರೂ ಹೋರಾಟ ನಿಲ್ಲಿಸಲ್ಲ: ಪ್ರಧಾನಿ ಮನವಿಗೆ ಸದ್ಯ ಸ್ಪಂದಿಸಲ್ಲ- ರಾಕೇಶ್‌ ಟಿಕಾಯತ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − one =
Remember me
