ನವದೆಹಲಿ:ಕರುನಾಡ ಕುವರಿ ದೀಪಿಕಾ ಪಡುಕೋಣೆ ಬಾಲಿವುಡ್​ ಅಷ್ಟೇ ಅಲ್ಲದೇ ಹಾಲಿವುಡ್​ನಲ್ಲಿಯೂ ಮಿಂಚಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರು. ಘಟಾನುಘಟಿ ನಾಯಕರ ಜತೆಗೆ ನಾಯಕಿಯಾಗಿ ನಟಿಸಿರುವ ಅವರು, ಸಲ್ಮಾನ್​ ಖಾನ್​ ಜತೆ ಇದುವರೆಗೂ ನಟಿಸಿಲ್ಲ.
ಆದರೆ ಈ ಬಗ್ಗೆ ಮಾಹಿತಿ ನೀಡದ ಅವರು, ಮೊದಲ ಬಾರಿಗೆ ಸಲ್ಮಾನ್​ ಖಾನ್​ ಆಫರ್​ ಕೊಟ್ಟಾಗ ತಾವು ಅದನ್ನು ನಿರಾಕರಿಸಿದ್ದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಬಾಲಿವುಡ್‌ನಲ್ಲಿ ನಟಿಸಲು ನನಗೆ ಮೊದಲ ಬಾರಿಗೆ ಆಫರ್‌ ಕೊಟ್ಟವರು ಸಲ್ಮಾನ್‌ ಖಾನ್‌. ಆದರೆ ನಾನು ನಟಿಸಲು ಒಪ್ಪಲಿಲ್ಲ ಎಂದಿರುವ ದೀಪಿಕಾ ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. ಅದೇನೆಂದರೆ, ಸಲ್ಮಾನ್​ ಖಾನ್​ ಆಫರ್​ ಕೊಟ್ಟ ಸಂದರ್ಭದಲ್ಲಿ ನಾನಿನ್ನೂ ಮಾಡೆಲ್​ ಆಗಿದ್ದೆ. ಆಗ ನಟಿಯಾಗಲು ನನಗೆ ಆಸಕ್ತಿಯೇ ಇರಲಿಲ್ಲ. ಅದಕ್ಕಾಗಿ ಒಪ್ಪಿರಲಿಲ್ಲ. ಅಂತಹ ಆಫರ್‌ ನಿರಾಕರಿಸಿದ್ದನ್ನು ನೆನೆಸಿಕೊಂಡರೆ ಈಗಲೂ ಅಚ್ಚರಿಯಾಗುತ್ತೆ. ನಾನು ಮಾಡೆಲಿಂಗ್‌ ಆಗಿ ಗುರುತಿಸಿಕೊಂಡಿದ್ದೆ. ಎರಡು ವರ್ಷಗಳ ನಂತರ ʼಓಂ ಶಾಂತಿ ಓಂʼ ಸಿನಿಮಾದಲ್ಲಿ ನಟಿಸಬೇಕಾಗಿ ಬಂತು ಎಂದು ನೆನಪಿಸಿಕೊಂಡಿದ್ದಾರೆ.
ಅಂದಹಾಗೆ, ಸಲ್ಮಾನ್ ಮತ್ತು ದೀಪಿಕಾ ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಿಲ್ಲ. ಆದರೆ ದೀಪಿಕಾ ತಮ್ಮ ಚಲನಚಿತ್ರಗಳನ್ನು ಪ್ರಚಾರ ಮಾಡಲು ಬಿಗ್ ಬಾಸ್ ಶೋನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ ಅಷ್ಟೇ.
‘ಹಿಜಾಬ್‌ ತೆಗೆಯಿರಿ, ಇಲ್ಲಾ ಟಿ.ಸಿ. ತಗೊಂಡು ಹೋಗಿ, ಮೂಲಭೂತಹಕ್ಕು ಸಿಗೋ ಶಾಲೆಗೇ ಸೇರ್ಕೊಳ್ಳಿ…’

ವಿಭಿನ್ನ ಪ್ರೇಮ್​ ಕಹಾನಿ! 80 ವರ್ಷದ ಅಜ್ಜ, 84ರ ಅಜ್ಜಿಯ ಜತೆ ಓಡಿಹೋಗಿ ಸಿಕ್ಕಬಿದ್ದ… ನಂತರ ಆದದ್ದು ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + two =
Remember me
