ಕಾನ್ಸ್​ (ಫ್ರಾನ್ಸ್​):ಬಾಲಿವುಡ್​, ಹಾಲಿವುಡ್​ ಸೇರಿದಂತೆ ಸ್ಯಾಂಡಲ್​ವುಡ್​ನಲ್ಲಿಯೂ ಮಿಂಚಿರುವ ಕನ್ನಡತಿ ದೀಪಿಕಾ ಪಡುಕೋಣೆಯವರ ಖ್ಯಾತಿ ಅಷ್ಟಿಷ್ಟಲ್ಲ. ಫ್ರಾನ್ಸ್​ನ ಕಾನ್​ನಲ್ಲಿ ನಡೆಯುತ್ತಿರುವ ಸಿನಿಮೋತ್ಸವಕ್ಕೆ ಇಷ್ಟು ವರ್ಷ ಅತಿಥಿಯಾಗಿ ಹೋಗುತ್ತಿದ್ದ ದೀಪಿಕಾ, ಇದೇ ಮೊದಲ ಬಾರಿಗೆ ಜಡ್ಜ್​ ಆಗಿ ಜ್ಯೂರಿ ಪ್ಯಾನೆಲ್​ ಸೇರಿಕೊಂಡಿದ್ದಾರೆ.
ಇಷ್ಟೊಂದು ಉನ್ನತ ಮಟ್ಟದ ಕಾರ್ಯಕ್ರಮಗಳಿಗೆ ಹೋದಾಗ ಅವರು ಹೋದಲ್ಲಿ, ಬಂದಲ್ಲಿ ಕ್ಯಾಮೆರಾ ಕಣ್ಣು ನೆಟ್ಟಿರುತ್ತದೆ. ಇದೇ ಕಾರಣಕ್ಕೆ ಬೇರೆಯವರಿಂದ ವಿಭಿನ್ನವಾಗಿ ಕಾಣಿಸಬೇಕು ಎಂಬ ಆಸೆಯಿಂದ ವಿಭಿನ್ನ (ಹಲವು ಬಾರಿ ವಿಚಿತ್ರ ಎನಿಸುವ) ಡ್ರೆಸ್​ಗಳನ್ನು ಇವರು ಹಾಕುವುದುಂಟು. ಇದೀಗ ಅಂಥದ್ದೇ ಡ್ರೆಸ್​ ಹಾಕಿ ಭಾರಿ ಟ್ರೋಲ್​ ಆಗುತ್ತಿದ್ದಾರೆ ಈ ನಟಿ.
ಡ್ರೆಸ್​ ಹಾಕಿದ ಮೇಲೆ ಅದನ್ನು ಹೇಗೆ ನಿಭಾಯಿಸಬೇಕು ಎನ್ನುವುದೂ ತಿಳಿದಿರಬೇಕು. ಆದರೆ ತಮ್ಮ ತಳುಕುಬಳುಕಿನ ದೇಹಕ್ಕೆ ಭಾರಿ ತೂಕದ ಡ್ರೆಸ್​ ಹಾಕಿರುವ ದೀಪಿಕಾ ಅದನ್ನು ನಿಭಾಯಿಸಲು ಆಗದೇ ಪೇಚಾಡುತ್ತಿರುವ ದೃಶ್ಯ ಜಾಲತಾಣದಲ್ಲಿ ವೈರಲ್​ ಆಗಿದೆ.

ದೀಪಿಕಾ ಮೊದಲ ದಿನ ರೆಟ್ರೋ ಸೀರೆ ಧರಿಸಿದ್ದರು. ಅದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಈಗ ಅವರು ಧರಿಸಿರುವ ಆರೆಂಜ್​ ಗೌನ್ ಮಾತ್ರ ಸರಿಯಾಗಿ ಟ್ರೋಲ್​ ಆಗುತ್ತಿದೆ. ಸ್ಟ್ರಗಲ್​ ಈಸ್​ ರಿಯಲ್​ (ಈ ರೀತಿ ಕಷ್ಟ ಪಡುತ್ತಿರುವ ದೃಶ್ಯ ನಿಜವಾದದ್ದು) ಎಂದು ಕಾಮಿಡಿ ಮಾಡಿ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಏಕೆಂದರೆ ಇವರು ಧರಿಸಿದ್ದ ಗೌನ್​ ಬಹಳ ದೊಡ್ಡದಿದ್ದು, ಬಟ್ಟೆಯನ್ನು ಸುತ್ತಿಕೊಂಡಂತೆ ಕಾಣುತ್ತಿದೆ. ಚಿಕ್ಕ ಶರೀರವನ್ನು ಈ ಡ್ರೆಸ್​ ಅದೆಷ್ಟು ಸುತ್ತಿಕೊಂಡಿದೆ ಎಂದು ಊಹಿಸುವುದೂ ಕಷ್ಟ ಎನ್ನುವಂತಿದೆ ಈ ಡ್ರೆಸ್​. ಇದನ್ನು ನಿಭಾಯಿಸಲು ಈ ನಟಿಗೆ ಸಾಧ್ಯವಾಗದೇ ಕಷ್ಟಪಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದಕ್ಕೆ ವಿಧವಿಧ ರೀತಿಯ ಕಮೆಂಟ್​ಗಳು ಬರುತ್ತಿದ್ದು, ನೀಟಾಗಿ ಡ್ರೆಸ್​ ಹಾಕುವ ಬದಲು ಇಂಥ ವಿಚಿತ್ರ ಡ್ರೆಸ್​ ಹಾಕಿ ಪರದಾಡುವುದು ಏಕೆ ಎಂದು ಹಲವಾರು ಮಂದಿ ಕಮೆಂಟ್​ ಮಾಡಿದ್ದಾರೆ. ನೀವು ಭಾರತವನ್ನು ಪ್ರತಿನಿಧಿಸುತ್ತಿದ್ದೀರಿ, ಹಾಗಾಗಿ ನೋಡುಗರಿಗೆ ಮಾದರಿಯಾಗುವಂತಹ ಬಟ್ಟೆಗಳನ್ನು ಧರಿಸಿ ಎಂದೂ ಬುದ್ಧಿ ಹೇಳಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:


A post shared by Brut India (@brut.india)

ದಿನದಿನಕ್ಕೂ ನಿಗೂಢವಾಗ್ತಿದೆ ಮಾಡೆಲಿಂಗ್​ ಜಗತ್ತು! ಖ್ಯಾತ ನಟಿ ಬಿದಿಶಾ ಶವವಾಗಿ ಪತ್ತೆ- ಗೊಂದಲದಲ್ಲಿ ಡೆತ್​ನೋಟ್​…

7 ಶತಕೋಟಿ ಒಡತಿ ನಟಿ ಐಶ್ವರ್ಯ ರೈ ಪಡೆದ ಮೊದಲ ಸಂಬಳ ಇಷ್ಟೇನಾ… ಮಾಡೆಲಿಂಗ್​ ಅಗ್ರಿಮೆಂಟ್​ ವೈರಲ್​

ಅವನು ನನ್ನವ, ಮದ್ವೆಯಾಗ್ದೇ ಇಲ್ಲಿಂದ ಕದಲಲ್ಲ: ಖ್ಯಾತ ನಟನ ಮನೆ ಮುಂದೆ ಮಧ್ಯರಾತ್ರಿ ನಟಿಯ ಧರಣಿ!

ಪ್ರಧಾನಿ ಮೋದಿಗೆ ಪತ್ರ ಬರೆದ ‘ಜೊತೆ ಜೊತೆಯಲಿ…’ ಧಾರಾವಾಹಿ ನಟ ಅನಿರುದ್ಧ್​ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 8 =
Remember me
