ಮುಂಬೈ:ಮಳೆಯಲ್ಲಿ ನೆನೆದು ಫೋಟೋಶೂಟ್‌ ಮಾಡಿಸಿಕೊಂಡ ನಟಿ ದೀಪಿಕಾ ಸಿಂಗ್‌ ಅದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡು ಇದೀಗ ಭಾರಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಿರುತೆರೆಯ ಜನಪ್ರಿಯ ನಟಿಯಾಗಿರುವ ದೀಪಿಕಾ ಹಿಂದಿ ಗೀತೆಯೊಂದಕ್ಕೆ ಪೋಸ್‌ ಕೊಡುತ್ತಾ ವಿಡಿಯೋ ಮಾಡಿಸಿಕೊಂಡಿದ್ದಾರೆ. ಇದನ್ನು ಶೇರ್‌ ಮಾಡಿಕೊಂಡು ಪ್ರಕೃತಿಯನ್ನು ಹಾಗೂ ಮಳೆಯನ್ನು ಅಪ್ಪಿಕೊಳ್ಳಬೇಕು ಎಂಬ ಶೀರ್ಷಿಕೆ ನೀಡಿದ್ದಾರೆ.
ಅಷ್ಟಕ್ಕೂ ಈ ನಟಿಯ ವಿರುದ್ಧ ಇಷ್ಟೇಕೆ ಎಲ್ಲರಿಗೂ ಸಿಟ್ಟು ಎಂದರೆ ಈಕೆ ಫೋಟೋಶೂಟ್‌ ಮಾಡಿಸಿಕೊಂಡಿರುವುದು ತೌಕ್ತೆ ಚಂಡಮಾರುತದಿಂದಾಗಿ ಬಂದಿರುವ ಮಳೆಯಲ್ಲಿ. ಈ ಚಂಡಮಾರುತದಿಂದ ಜನರ ಜೀವನವೆ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಈ ರೀತಿ ಖುಷಿಯಿಂದ ಫೋಟೋಶೂಟ್‌ ಮಾಡಿಸಿಕೊಂಡಿರುವುದು ಅತ್ಯಂತ ವಿಷಾದಕರ ಎನ್ನುವುದು ನೆಟ್ಟಿಗರ ಆಕ್ರೋಶ.


A post shared by Deepika Singh Goyal (@deepikasingh150)

ದೀಪಿಕಾ ಅವರ ಮನೆ ಮುಂದೆ ಮಳೆ ಹಾಗೂ ಗಾಳಿಯಿಂದಾಗಿ ಮರವೊಂದು ನೆಲಕ್ಕೆ ಉರುಳಿದೆ. ನೆಲಕ್ಕೆ ಉರುಳಿರುವ ಮರದಿಂದ ಯಾರಿಗೂ ಅಪಾಯ ಆಗಿಲ್ಲ ಎಂದಿರುವ ನಟಿ, ಅದರ ಮೇಲೆ ಕುಳಿತು ತಾನು ಫೋಟೋಶೂಟ್ ಮಾಡಿಸಿಕೊಂಡಿದ್ದೇನೆ ಎಂದಿದ್ದಾರೆ. ಜತೆಗೆ ಚಂಡಮಾರುತ ನಿಲ್ಲಲಿ ಎಂದು ಕಾಯುವ ಬದಲು ಇರುವ ಪ್ರಕೃತಿಯನ್ನು ಹಾಗೂ ಮಳೆಯನ್ನು ಅಪ್ಪಿಕೊಳ್ಳಿ ಎಂದಿದ್ದಾರೆ.
ಚಂಡಮಾರುದಿಂದ ಸಹಸ್ರಾರು ಜನರ ಜೀವನ ಅಲ್ಲೋಲ ಕಲ್ಲೋಲವಾಗಿರುವಾಗ ಇದೆಲ್ಲಾ ಏತಕ್ಕೆ, ಈ ರೀತಿಯ ಖುಷಿ ಯಾಕಾಗಿ? ಜನರ ಜೀವನದ ಕಷ್ಟದ ಸಂದರ್ಭದಲ್ಲಿ ಖುಷಿ ಅನುಭವಿಸುವುದು ಏಕೆ ಎಂದೆಲ್ಲಾ ದೀಪಿಕಾಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಅದೇನೇ ಇದ್ದರೂ ಈಕೆ ಮಾಡಿರುವ ವಿಡಿಯೋ ಮಾತ್ರ ಸಕತ್‌ ವೈರಲ್‌ ಆಗುತ್ತಿದೆ. ಕಮೆಂಟ್‌ಗಳ ಬಗ್ಗೆ ದೀಪಿಕಾ ತಲೆ ಕೆಡಿಸಿಕೊಂಡಂತೆಯೂ ಇಲ್ಲ.
ಲಸಿಕೆ ಹಾಕಿಸಿಕೊಂಡ ಫೋಟೋ ಶೇರ್‌ ಮಾಡಿ ಪೇಚಿಗೆ ಸಿಲುಕಿದ ಟೀಂ ಇಂಡಿಯಾ ಬೌಲರ್‌- ತನಿಖೆಗೆ ಆದೇಶ!

ಸೋಂಕಿತರ ಜೀವನದ ಜತೆ ಚೆಲ್ಲಾಟ? ಕಾಂಗ್ರೆಸ್‌ನ ರಹಸ್ಯ ಟೂಲ್‌ಕಿಟ್‌ನಲ್ಲಿ ಅಡಗಿದೆ ಬೆಚ್ಚಿ ಬೀಳಿಸೋ ಷಡ್ಯಂತ್ರ!

ಪುರುಷ ಮೃತಪಟ್ಟರೆ ಎರಡನೆಯ ಹೆಂಡತಿ, ಮಕ್ಕಳಿಗೆ ಆಸ್ತಿ ಸಿಗತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
