ನವದೆಹಲಿ:ಸಿಬಿಐ ದಾಳಿಯ ಸುದ್ದಿ ತಿಳಿಯುತ್ತಲೇ ಎಸ್ಕೇಪ್​ ಆಗಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ವಿಜಯ್ ನಾಯರ್‌ ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಸಿಬಿಐ ಬಂಧಿಸಿದೆ. ಇವರು ಆಮ್​ ಆದ್ಮಿ ಪಾರ್ಟಿಯ ಸಂವಹನ ಮುಖ್ಯಸ್ಥರೂ ಆಗಿದ್ದಾರೆ.
ಓನ್ಲಿ ಮಚ್ ಲೌಡರ್ ಎಂಟರ್‌ಟೇನ್​ಮೆಂಟ್​ ಮತ್ತು ಈವೆಂಟ್ ಮೀಡಿಯಾ ಕಂಪೆನಿಯ ಸಿಇಒ ಆಗಿದ್ದ ವಿಜಯ್ ನಾಯರ್​ ಮುಖ್ಯ ಆರೋಪಿಯಾಗಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಅಬಕಾರಿ ನೀತಿ ಪ್ರಕರಣದಲ್ಲಿ ಇದೇ ಮೊದಲ ಬಂಧನವಾಗಿದೆ.
ಕಳೆದ ಆಗಸ್ಟ್ 19ರಂದು ಸಿಬಿಐ ದಾಳಿ ನಡೆಸುತ್ತಿದೆ ಎಂದು ತಿಳಿಯುತ್ತಲೇ ವಿಜಯ್ ನಾಪತ್ತೆಯಾಗಿದ್ದರು. ಇದೇ ಪ್ರಕರಣದಲ್ಲಿ ಕೊರ್ಟ್​ ವಿಜಯ್​ ಸೇರಿದಂತೆ ಎಂಟು ಆರೋಪಿಗಳಿಗೆ ಆಗಸ್ಟ್ 21ರಂದು ಲುಕ್‌ಔಟ್ ನೋಟಿಸ್ ನೀಡಿತ್ತು. ಇದೀಗ ಕೊನೆಗೂ ಅವರು ಸಿಕ್ಕಿಬಿದ್ದಿದ್ದಾರೆ.
ಸಿಬಿಐ ದಾಳಿ ಸಂದರ್ಭದಲ್ಲಿ ನಾನು ಪಲಾಯನ ಮಾಡಿರಲಿಲ್ಲ ಎಂದು ವಿಜಯ್​ ನಾಯರ್​ ಸ್ಪಷ್ಟನೆ ನೀಡಿದ್ದಾರೆ. ವೈಯಕ್ತಿಕ ಕೆಲಸದ ಕಾರಣಗಳಿಂದ ವಿಶ್ರಾಂತಿಯಲ್ಲಿದ್ದೆ, ಸಿಬಿಐನೊಂದಿಗೆ ಸಂಪರ್ಕದಲ್ಲಿದ್ದು ಎಲ್ಲ ರೀತಿಯಲ್ಲೂ ತನಿಖೆಗೆ ಸಹಕರಿಸುತ್ತೇನೆ ಎಂದಿದ್ದಾರೆ.(ಏಜೆನ್ಸೀಸ್​)
VIDEO: ಚೀನಾದಲ್ಲಿ ಕ್ಷಿಪ್ರಕ್ರಾಂತಿ, ಅಧ್ಯಕ್ಷನ ಗೃಹಬಂಧನ? ಎಲ್ಲರ ಬಾಯಿ ಮುಚ್ಚಿಸಿತು ಈ ವಿಡಿಯೋ…
ಪಿಎಫ್​ಐ ಜತೆ ಎಂಟು ಉಗ್ರ ಸಂಘಟನೆ ಬ್ಯಾನ್​: ಕಾಂಗ್ರೆಸ್​ ಸಂಸದನ ಪ್ರತಿಕ್ರಿಯೆ ಹೀಗಿದೆ ನೋಡಿ….
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twenty + 13 =
Remember me
