ನವದೆಹಲಿ:ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿ ಪರಿಗಣಿಸ ಬೇಕೇ ಬೇಡವೆ ಎಂಬ ಬಗ್ಗೆ ದೆಹಲಿ ಹೈಕೋರ್ಟ್​ನ ಇಬ್ಬರು ನ್ಯಾಯಮೂರ್ತಿಗಳು ಎರಡು ರೀತಿಯ ತೀರ್ಪನ್ನು ನೀಡಿದ್ದು, ಈ ಕುರಿತು ಒಮ್ಮತಕ್ಕೆ ಬರಲಿಲ್ಲ.
ವೈವಾಹಿಕ ಜೀವನದಲ್ಲಿ ಗಂಡನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸದಂತೆ ವಿನಾಯಿತಿ ನೀಡಲಾಗಿದ್ದ ಕಾನೂನನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ರಾಜೀವ್ ಶಕಧೇರ್ ಒಂದು ರೀತಿಯ ತೀರ್ಪು ನೀಡಿದ್ದರೆ, ನ್ಯಾ. ಹರಿಶಂಕರ್ ಅವರು ಮತ್ತೊಂದು ರೀತಿಯ ತೀರ್ಪು ನೀಡಿದ್ದಾರೆ.
ನ್ಯಾಯಮೂರ್ತಿಗಳು ಹೇಳಿದ್ದೇನು?
ವೈವಾಹಿಕ ಅತ್ಯಾಚಾರ ಅಪರಾಧ ಅಲ್ಲ ಎನ್ನುವುದು ನ್ಯಾ. ರಾಜೀವ್ ಶಕದೇರ್ ಅಭಿಪ್ರಾಯ. ವೈವಾಹಿಕ ಜೀವನದಲ್ಲಿ ವಯಸ್ಕ ಹೆಂಡತಿಯೊಂದಿಗೆ ಗಂಡ ಯಾವುದೇ ರೀತಿಯಲ್ಲಾದರೂ ಲೈಂಗಿಕ ಸಂಪರ್ಕ ಸಾಧಿಸಿದರೆ ಅದು ಅಪರಾಧ ಎನಿಸುವುದಿಲ್ಲ. ಈ ಕುರಿತು ಐಪಿಸಿ ಸೆಕ್ಷನ್ 375ರಲ್ಲಿ ತಿಳಿಸಲಾದೆ ಎಂದು ಅಭಿಪ್ರಾಯ ಪಟ್ಟರು. ಆದರೆ ನ್ಯಾಯಮೂರ್ತಿ ಹರಿಶಂಕರ್ ಇದಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ.
ವೈವಾಹಿಕ ಅತ್ಯಾಚಾರವನ್ನು ಅಪರಾಧದಿಂದ ಹೊರಗಿಟ್ಟಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಹಲವು ವೈವಾಹಿಕ ಜೀವನದಲ್ಲಿ ವಿವಾಹಿತ ಮಹಿಳೆಯರು ತಮ್ಮ ಗಂಡನಿಂದ ಲೈಂಗಿಕ ಹಲ್ಲೆಗೊಳಗಾಗುತ್ತಿರುವುದುಂಟು. ಈ ಮಹಿಳೆಯರಿಗೆ ಕಾನೂನಿನ ನೆರವು ಇಲ್ಲವಾಗಿದೆ. ಆದ್ದರಿಂದ ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಬೇಕು ಎಂದು ಕೋರಿಕೆ ಇಟ್ಟಿರುವ ಅರ್ಜಿದಾರರ ವಾದ ಸರಿಯಾಗಿದೆ ಎನ್ನುವುದು ಈ ನ್ಯಾಯಮೂರ್ತಿಗಳ ನಿಲುವು.
ಯಾವುದೇ ಸಂಬಂಧವನ್ನು ಬೇರೆ ರೀತಿಯಲ್ಲಿ ನೋಡಲಾಗುವುದಿಲ್ಲ. ಏನೇ ಇದ್ದರೂ ಆಕೆ ಮಹಿಳೆಯೇ. ಒಬ್ಬ ಸ್ನೇಹಿತೆ ಅಥವಾ ಲಿವ್ ಇನ್ ರಿಲೇಷನ್​ನಲ್ಲಿ ಇರುವ ಮಹಿಳೆ ಲೈಂಗಿಕ ಕ್ರಿಯೆಗೆ ಅಸಮ್ಮತಿ ಸೂಚಿಸಿದರೂ ಗಂಡಸು ಬಲಾತ್ಕಾರ ಮಾಡಿದರೆ ಅದು ಅಪರಾಧ ಆಗುತ್ತದೆ. ಇದು ವೈವಾಹಿಕ ಜೀವನಕ್ಕೂ ಅನ್ವಯ ಆಗುತ್ತದೆ ಎಂದು ನ್ಯಾಯಮೂರ್ತಿ ಹರಿಶಂಕರ್ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ವೈವಾಹಿಕ ಅತ್ಯಾಚಾರವನ್ನು ಅಪರಾಧಗೊಳಿಸಬೇಕೆಂದು ನಾಲ್ಕೈದು ವರ್ಷಗಳ ಹಿಂದೆಯೇ ಸ್ವಯಂ ಸೇವಾ ಸಂಸ್ಥೆಗಳಾದ ಆರ್‌ಐಟಿ ಫೌಂಡೇಶನ್ ಮತ್ತು ಅಖಿಲ ಭಾರತ ಪ್ರಜಾತಂತ್ರೀಯ ಮಹಿಳಾ ಸಂಸ್ಥೆ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು.
ಸಾಮಾನ್ಯವಾಗಿ ವಿಭಾಗೀಯ ಪೀಠದ ಇಬ್ಬರು ನ್ಯಾಯಮೂರ್ತಿಗಳಲ್ಲಿ ವಿಭಿನ್ನ ನಿಲುವು ವ್ಯಕ್ತವಾದಾಗ ಅದೇ ಹೈಕೋರ್ಟ್​ನ ಮೂರನೆಯ ಪೀಠಕ್ಕೆ (ಅಂದರೆ ಏಕ ನ್ಯಾಯಮೂರ್ತಿ ಇರುವ ಪೀಠಕ್ಕೆ) ವಿಚಾರಣೆ ವರ್ಗಾಯಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ನ್ಯಾಯಪೀಠವು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಮಾಡುವುದು ಉತ್ತಮ ಎಂದು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಇದು ಸುಪ್ರೀಂ ಮೆಟ್ಟಿಲೇರುವ ಸಾಧ್ಯತೆ ಇದೆ.
ಈ ಬಗ್ಗೆ ಕಳೆದ ಫೆಬ್ರುವರಿಯಲ್ಲಿಯೇ ಕೋರ್ಟ್​ ಕೇಂದ್ರದ ನಿಲುವನ್ನು ಕೇಳಿತ್ತು. ಆದರೆ ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡಿತ್ತು. ಆದರೆ ಕೋರ್ಟ್​ ಅದಕ್ಕೆ ಒಪ್ಪಲಿಲ್ಲ. ಈ ವಿಷಯದ ಬಗ್ಗೆ ಪ್ರತಿಕ್ರಿಯೆಗಳನ್ನು ಕೋರಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಲಾಗಿದೆ ಎಂದು ಕೇಂದ್ರವು ಕೋರ್ಟ್​ಗೆ ಮಾಹಿತಿ ನೀಡಿದೆ.
ಐಷಾರಾಮಿ ಜೀವನಕ್ಕಾಗಿ ವಂಚಕನ ಲವ್​ ಮಾಡಿ ಎಲ್ಲಾ ಕಳಕೊಂಡ ನಟಿ ಜಾಕ್ವೆಲಿನ್​ ಮತ್ತೆ ಕೋರ್ಟ್​ಗೆ!

ನಾನು ಸಂಸದ, ಸದಾ ಬಿಜಿ… ಜನರ ಯೋಗಕ್ಷೇಮ ವಿಚಾರಿಸಬೇಕು ಎಂದು ಕೋರ್ಟ್​ಗೆ ಹೇಳಿದ ರಾಹುಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + four =
Remember me
