ನವದೆಹಲಿ:ಭಾರತೀಯ ಸಂಪ್ರದಾಯ ಎಂದಾಕ್ಷಣ ಕಣ್ಣಮುಂದೆ ಬರುವುದು ಸೀರೆ. ವಿದೇಶಿಗರು ಕೂಡ ಸೀರೆಯ ಮೋಡಿಗೆ ಒಳಗಾಗಿದ್ದಾರೆ. ಎಷ್ಟೋ ವಿದೇಶಿ ಮಹಿಳೆಯರು ಅರ್ಧಂಬರ್ಧ ದೇಹ ಕಾಣುವ ತಮ್ಮ ದೇಶದ ದಿರಿಸನ್ನು ಬಿಟ್ಟು ಸೀರೆಯ ಮೊರೆ ಹೋಗಿದ್ದಾರೆ. ಪ್ರತಿದಿನವೂ ಸ್ಕರ್ಟ್‌, ಮಿನಿ, ಷಾರ್ಟ್‌ ಅಂತೆಲ್ಲಾ ಧರಿಸುವ ನಮ್ಮ ಭಾರತೀಯ ಯುವತಿಯರು ಕೂಡ ಸಭೆ ಸಮಾರಂಭ, ಹಬ್ಬ- ಹರಿದಿನಗಳಲ್ಲಿ ಸೀರೆಯಲ್ಲಿ ಮಿಂಚುವುದುಂಟು.
ಆದರೆ ದೆಹಲಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಅದೇನೆಂದರೆ ಇಲ್ಲಿ ಸೀರೆಯುಟ್ಟವರಿಗೆ ಪ್ರವೇಶವಿಲ್ಲ! ಮಹಿಳೆಯೊಬ್ಬರು ಸೀರೆಯುಟ್ಟು ಬಂದ ಕಾರಣ ಅವರಿಗೆ ಹೋಟೆಲ್‌ನ ಒಳಗೆ ಪ್ರವೇಶ ನಿರಾಕರಿಸಿರುವ ಘಟನೆ ನಡೆದಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿರುವುದು ಮಾತ್ರವಲ್ಲದೇ ಹಲವರ ಆಕ್ರೋಶಕ್ಕೂ ಕಾರಣವಾಗಿದೆ.
ಸೀರೆ ಎಂಬುದು ಭಾರತೀಯ ಸಂಪ್ರದಾಯದ ಪ್ರತೀಕವಾಗಿದೆ. ಇಂತಹ ಸೀರೆ ಉಟ್ಟವರಿಗೆ ರೆಸ್ಟೋರೆಂಟ್‍ಗೆ ಪ್ರವೇಶ ಇಲ್ಲ ಎಂದು ಮಹಿಳೆಯನ್ನು ಸಿಬ್ಬಂದಿ ಹೊರಗೆ ಕಳುಹಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.ಈ ಹೋಟೆಲ್‌ನಲ್ಲಿ ಸೀರೆಯುಟ್ಟವರಿಗೆ ಪ್ರವೇಶವಿಲ್ಲ ಎನ್ನುವುದು ಅರಿವಾಗುತ್ತಿದ್ದಂತೆಯೇ ಪತ್ರಕರ್ತೆ ಅನಿತಾ ಚೌಧರಿ ಉದ್ದೇಶಪೂರ್ವಕವಾಗಿ ಸೀರೆಯುಟ್ಟು ಹೋಟೆಲ್‌ಗೆ ತೆರಳಿದ್ದಾರೆ. ಹೋಟೆಲ್‌ನ ಈ ವಿಚಿತ್ರ ರೂಲ್ಸ್‌ ಜಗಜ್ಜಾಹೀರ ಮಾಡುವ ಸಲುವಾಗಿ ಹಿಡನ್‌ ಕ್ಯಾಮೆರಾ ತೆಗೆದುಕೊಂಡು ಹೋಗಿದ್ದಾರೆ. ಅವರು ಹೋಗುತ್ತಿದ್ದಂತೆಯೇ ಹೋಟೆಲ್‌ನ ಮಹಿಳಾ ಸಿಬ್ಬಂದಿ ಸೀರೆಯುಟ್ಟ ಇವರ ಮೇಲೆ ಗರಂ ಆಗಿದ್ದಾರೆ. ಸೀರೆಯನ್ನು ಸಾಮಾನ್ಯ ಉಡುಪು ಎಂದು ನಾವು ಪರಿಗಣಿಸುವುದಿಲ್ಲ. ಇಲ್ಲಿ ಏನಿದ್ದರೂ ಸ್ಮಾರ್ಟ್ ಕ್ಯಾಶುಯಲ್ ಉಡುಪಿಗೆ ಮಾತ್ರ ಅನುಮತಿ ನೀಡಲಾಗುವುದು. ನಿಮಗೆ ಇಲ್ಲಿ ಪ್ರವೇಶವಿಲ್ಲ ಎಂದು ಹೊರಗೆ ಕಳುಹಿಸಿದ್ದಾರೆ.ಇದನ್ನು ಅನಿತಾ ಚೌಧರಿ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದು, ಭಾರತೀಯ ಸೀರೆ ಸ್ಮಾರ್ಟ್ ಉಡುಗೆ ಅಲ್ಲ ಎಂಬ ಮಾತ್ರಕ್ಕೆ ತಮಗೆ ರೆಸ್ಟೋರೆಂಟ್‍ಗೆ ಅವಕಾಶ ನೀಡಲಿಲ್ಲ. ಈ ಸ್ಮಾರ್ಟ್ ಉಡುಗೆ ಎಂದರೆ ಏನು ತಿಳಿಸಿ. ಹಾಗಿದ್ದರೆ ನಾನು ಇನ್ನು ಸೀರೆ ಧರಿಸುವುದನ್ನೇ ನಿಲ್ಲಿಸುತ್ತೇನೆ ಎಂದಿದ್ದಾರೆ. ಜತೆಗೆ, ನಾನು ವಿವಾಹಿತೆ. ಭಾರತೀಯಳು. ಸೀರೆ ಉಟ್ಟುಕೊಂಡೇ ನಾನು ಮದುವೆಯಾಗಿದ್ದೇನೆ. ಇಬ್ಬರು ಮಕ್ಕಳು ಇದ್ದಾರೆ. ಸೀರೆ ಸರ್ವಕಾಲಿಕಕ್ಕೂ ಒಪ್ಪುವ ಸರಳ ಸುಂದರ ಉಡುಪು ಎಂಬುದನ್ನು ನಾನು ನಂಬುತ್ತೇನೆ ಎಂದಿದ್ದಾರೆ.
ಸ್ಮಾರ್ಟ್ ಉಡುಪಿನ ಬಗ್ಗೆ ನನಗೆ ಪ್ರಧಾನ ಮಂತ್ರಿ, ಗೃಹ ಸಚಿವ, ದೆಹಲಿ ಸಿಎಂ, ದೆಹಲಿ ಪೊಲೀಸ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ವ್ಯಾಖ್ಯಾನ ನೀಡಿದರೆ, ನಾನು ಈ ಸೀರೆ ಉಡುವುದನ್ನು ನಿಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಹೋಟೆಲ್‌ ಸಿಬ್ಬಂದಿ ಧಮ್ಕಿ ಹಾಕಿರುವ ವಿಡಿಯೋ ಇಲ್ಲಿದೆ ನೋಡಿ:
Saree is not allowed in Aquila restaurant as Indian Saree is now not an smart outfit.What is the concrete definition of Smart outfit plz tell me@AmitShah@HardeepSPuri@CPDelhi@NCWIndiaPlease define smart outfit so I will stop wearing saree@PMishra_Journo#lovesareepic.twitter.com/c9nsXNJOAO
— anita choudhary (@anitachoudhary)September 20, 2021

ಈ ಕುರಿತು ಆಕ್ರೋಶ ವ್ಯಕ್ತಪಡಿಸಿ ಪತ್ರಕರ್ತೆ ಹೇಳಿರುವ ಮಾತು:

ಸುಂದರಿಗೆ ಮರುಳಾಗಿ ಆಕೆ ಜತೆ ರಾತ್ರಿ ಕಳೆದ ಸೇನಾಧಿಕಾರಿ- ಕಾಮದ ನಶೆಯಲ್ಲಿ ಸಹಿ ಹಾಕಿ ಪೇಚಿಗೆ!

ಪುರುಷರು ಸ್ತ್ರೀಯರ ಬಳಿ, ಸ್ತ್ರೀಯರು ಪುರುಷರ ಬಳಿ ಮಸಾಜ್‌ ಮಾಡಿಸಿಕೊಳ್ಳುವಂತಿಲ್ಲ- ಹೊಸ ರೂಲ್ಸ್‌ ತಂದ ಕೇಜ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
