ನವದೆಹಲಿ:ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ತಪ್ಪು ದಾರಿಗೆ ಎಳೆದು ದೆಹಲಿಯಲ್ಲಿ ಗಣರಾಜ್ಯೋತ್ಸವದ ದಿನ ಹಿಂಸಾಚಾರ ನಡೆಸಿರುವ ಕೆಲವು ದಂಗೆಕೋರರ ಚಿತ್ರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.ಟ್ರ್ಯಾಕ್ಟರ್​ ರ‍್ಯಾಲಿಯ ಹೆಸರಿನಲ್ಲಿ ನಡೆಸಿದ ಹಿಂಸಾಚಾರ, ಕೆಂಪು ಕೋಟೆ ಮೇಲೆ ಸಿಖ್​ ಧ್ವಜ ಹಾರಿಸಿರುವುದೂ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಧ್ವಂಸಕ ಕೃತ್ಯದಲ್ಲಿ ತೊಡಗಿಸಿಕೊಂಡಿರುವವರ ಚಿತ್ರಗಳು ಇದಾಗಿವೆ.
ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಹಾಗೂ ವಾಟ್ಸ್​ಆ್ಯಪ್​ ವಿಡಿಯೋಗಳನ್ನು ಆಧರಿಸಿ ಈ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.ಸದ್ಯ 42 ಜನರನ್ನು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್(ಸಿಐಎಸ್‍ಎಫ್) ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇನ್ನು 20 ಜನರನ್ನು ವಾಟ್ಸ್​ಆ್ಯಪ್​ ವಿಡಿಯೋಗಳ ಮೂಲಕ ಪತ್ತೆ ಹಚ್ಚಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ಇಬ್ಬರ ಪೈಕಿ ಒಬ್ಬನನ್ನು ಧರ್ಮೇಂದ್ರ ಸಿಂಗ್ ಹರ್ಮಾನ್ ಎಂದು ಗುರುತಿಸಲಾಗಿದೆ. ಹಿಂಸಾಚಾರದ ವಿಡಿಯೋ ಆಧರಿಸಿ ಈ ಇಬ್ಬರನ್ನು ಬಂಧಿಸಲಾಗಿದೆ. ಅಲ್ಲದೆ ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ್ದರಲ್ಲಿ ಧರ್ಮೇಂದ್ರ ಸಿಂಗ್ ಹರ್ಮಾನ್ ಪಾತ್ರ ಸಹ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಂಕಿತರ ಪತ್ತೆಗೆ ಈಗಾಗಲೇ ತಂಡ ರಚಿಸಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಲ ಶಂಕಿತರು ದೆಹಲಿ ಬಿಟ್ಟು ಪರಾರಿಯಾಗಿದ್ದು, ಇನ್ನೂ ಹಲವರು ತಲೆ ಮರೆಸಿಕೊಂಡಿದ್ದಾರೆ. ಅವರಿಗಾಗಿ ಜಾಲ ಬೀಸಲಾಗಿದೆ.ಪೊಲೀಸರು ಈ ವರೆಗೆ 124 ಜನರನ್ನು ಬಂಧಿಸಿದ್ದು, 44 ಎಫ್‍ಐಆರ್​ ದಾಖಲಿಸಿದ್ದಾರೆ. ಅಲ್ಲದೆ ವಿವಿಧ ಸಾಮಾಜಿಕ ಜಾಲತಾಣಗಳ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ‘ಯದುವೀರ್​ ಒಡೆಯರ್’​ ಟ್ವೀಟ್​- ಆದರೆ ಅಸಲಿಯತ್ತೇ ಬೇರೆ!

ಒಂದೇ ಗಂಟೆಯಲ್ಲಿ ₹365 ಕೋಟಿ ದುಡಿಯುವ ಆಸೆಯೆ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಚಾಲೆಂಜ್​!

ಇಲ್ಲೊಬ್ಬ ಆಂಟಿಗೆ ಬಾಯ್​ಫ್ರೆಂಡ್​ ಕಾಟ ಕೊಡ್ತಿದ್ದಾನಂತೆ; ಅವ್ರು ನನ್ನನ್ನು ಹೆಗೇಗೋ ಪೀಡಿಸ್ತಿದ್ದಾರೆ- ಏನು ಮಾಡಲಿ?

ಮದುವೆಯಾಗುವೆ ಎಂದು ಹಲವು ಬಾರಿ ರೇಪ್​​ ಮಾಡಿದ ಎಂದ ಯುವತಿ: ಶಾಸಕನ ವಿರುದ್ಧ ಎಫ್​ಐಆರ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 4 =
Remember me
