ನವದೆಹಲಿ:ಭಾರತದ ವಿರುದ್ಧ ಷಡ್ಯಂತ್ರ ರಚಿಸಿರುವ ಟೂಲ್​ಕಿಟ್​ ಹಗರಣ ಬಯಲಾಗುತ್ತಿದ್ದಂತೆಯೇ, ಮಾಧ್ಯಮಗಳಲ್ಲಿ ಅವರ ವರದಿ ಯಾವಾಗ ಬಿತ್ತರಗೊಳ್ಳಲು ಶುರುವಾಯ್ತೋ, ಈ ಆರೋಪದಲ್ಲಿ ಬಂಧಿಯಾಗಿರುವ ಸಾಮಾಜಿಕ ಕಾರ್ಯಕರ್ತೆ ದಿಶಾ ರವಿ ದೆಹಲಿ ಹೈಕೋರ್ಟ್​ ಮೊರೆ ಹೋಗಿದ್ದಳು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಮಾಧ್ಯಮಗಳಿಗೆ ನೀಡದಂತೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಈಕೆ ಕೋರಿದ್ದಳು.
ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಯಾವುದೇ ತನಿಖಾ ದಾಖಲೆಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ಪೊಲೀಸರಿಗೆ ಆದೇಶ ನೀಡಬೇಕು ಹಾಗೂ ಟೂಲ್‌ಕಿಟ್‌ಗೆ ಸಂಬಂಧಿಸಿದಂತೆ ಮೂರನೆಯ ವ್ಯಕ್ತಿಯ ಜತೆ ತಾನು ನಡೆಸಿರುವ ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಮಾಧ್ಯಮಗಳಿಗೆ ನೀಡದಂತೆ ಅವರಿಗೆ ನಿರ್ದೇಶಿಸಬೇಕು ಎಂದು ಆಕೆ ಕೋರಿಕೊಂಡಿದ್ದಳು.
ದಿಶಾ ರವಿಯ ಮನವಿಯನ್ನು ಕೋರ್ಟ್​ ಮಾನ್ಯ ಮಾಡಿದೆ. ಈ ಹಗರಣದ ಕುರಿತ ತನಿಖಾ ವರದಿಯನ್ನು ಮಾಧ್ಯಮಗಳಿಗೆ ನೀಡದಂತೆ ಕೋರ್ಟ್​ ಪೊಲೀಸರಿಗೆ ಆದೇಶಿಸಿದೆ. ಈ ಕುರಿತು ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆಗಳನ್ನು ನೀಡದಂತೆಯೂ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ಒಂದು ವೇಳೆ ಎಲ್ಲಾ ಸಾಕ್ಷ್ಯಾಧಾರಗಳು ಸಿಕ್ಕರೂ, ಸಿಕ್ಕಿರುವ ಸಾಕ್ಷ್ಯಾಧಾರಗಳು ಈ ಹಗರಣದ ಕುರಿತು ಇದ್ದರೂ ಅಂಥ ಸಂದರ್ಭದಲ್ಲಿಯೂ ಯಾವುದೇ ಮಾಹಿತಿಗಳನ್ನು ಮಾಧ್ಯಮಗಳಿಗೆ ನೀಡಬಾರದು ಎಂದು ಕೋರ್ಟ್​ ಹೇಳಿದೆ.
ಆರೋಪಿಯ ಹಕ್ಕನ್ನು ಕಾಪಾಡುವುದು ಮಾಧ್ಯಮಗಳ ಕರ್ತವ್ಯವಾಗಿದೆ. ಈ ಕುರಿತು ಮಾಧ್ಯಮಗಳೂ ಆಲೋಚನೆ ಮಾಡಬೇಕಿದೆ ಎಂದಿದೆ ಕೋರ್ಟ್​.

ಟೂಲ್‌ಕಿಟ್‌ ಷಡ್ಯಂತ್ರ ಬಯಲಾಗುತ್ತಿದ್ದಂತೆಯೇ ಕೋರ್ಟ್‌ಗೆ ದಿಶಾ ದೌಡು: ದಾಖಲೆ ಬಹಿರಂಗ ಬೇಡ ಎಂದು ಕೋರಿಕೆ!

15ನೇ ವಯಸ್ಸಲ್ಲಿ ಸೀಟಿ ನುಂಗಿದ್ದಳು, 40ನೇ ವಯಸ್ಸಲ್ಲಿ ಹೊರ ಬಂತು- ವೈದ್ಯರೇ ಕಂಗಾಲು!

ಸಮೀಪಿಸುತ್ತಿದೆ ಈ ಕೊಲೆಪಾತಕಿಯ ಸಾವು… ನೇಣಿಗೆ ಕೊರಳೊಡ್ಡುವ ಮುನ್ನ ಇದೋ ಕೊನೆಯ ಪ್ರಯತ್ನ…

ಮಗನ ಈ ಗುಣ ನಿಖಾ ಮಾಡಿದ್ರೆ ಸರಿಹೋಗತ್ತೆ ಅಂದ್ಕೊಂಡೆ: ಆದ್ರೆ ಸೊಸೆಯನ್ನು ನೋಡೋಕಾಗ್ತಿಲ್ಲ… ಏನು ಮಾಡಲಿ?

ಮದುವೆಯಾಗಲು ಇಷ್ಟವಿಲ್ಲವೆಂದರೂ ಒತ್ತಾಯ ಮಾಡುತ್ತಿದ್ದೀರಿ… ನನಗೆ ಬೇರೆ ಇಲ್ಲ… ಗುಡ್​ಬೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + five =
Remember me
