ನವದೆಹಲಿ:ದೆಹಲಿಯ ಛತ್ತರ್​ಪುರನಲ್ಲಿ 2018ರಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಚಿವ ಶಹನ್​ವಾಜ್​ ಹುಸೇನ್​ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ದೆಹಲಿ ಹೈಕೋರ್ಟ್​ ಆದೇಶಿಸಿದೆ. ಈ ಪ್ರಕರಣದಲ್ಲಿ, ಇದುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್​, ಮೂರು ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸಿ ಕೋರ್ಟ್​ಗೆ ವರದಿ ನೀಡುವಂತೆ ಹೇಳಿದೆ.
ಘಟನೆ ನಡೆದು ಇಷ್ಟು ವರ್ಷವಾದರೂ ಇವರ ವಿರುದ್ಧ ಎಫ್​ಐಆರ್ ದಾಖಲಿಸಲು ದೆಹಲಿ ಪೊಲೀಸರು ಸಂಪೂರ್ಣ ಹಿಂಜರಿಯುತ್ತಿರುವುದು ಏಕೆ ಎಂದು ಕೋರ್ಟ್​ ಕಿಡಿ ಕಾರಿದೆ. ಇವರ ವಿರುದ್ಧ ಎಫ್​ಆರ್​ಐ ದಾಖಲು ಮಾಡುವಂತೆ ಅದೇ ಸಾಲಿನಲ್ಲಿಯೇ ಸೆಷನ್ಸ್​ ಕೋರ್ಟ್​ ಆದೇಶಿಸಿದ್ದರೂ ಇದುವರೆಗೆ ಹಾಗೆ ಮಾಡದ ಕ್ರಮದ ವಿರುದ್ಧ ನ್ಯಾಯಮೂರ್ತಿ ಆಶಾ ಮೆನನ್​ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಎಫ್​ಐಆರ್​ ದಾಖಲಿಸುವಂತೆ ನಿರ್ದೇಶಿಸಿದರು.
2018ರ ಏಪ್ರಿಲ್ 12ರಂದು ಹುಸೇನ್ ಛತ್ತರ್​ಪುರದಲ್ಲಿ ಇರುವ ತಮ್ಮ ಫಾರ್ಮ್​ಹೌಸ್​ನಲ್ಲಿ ಮಾದಕವಸ್ತು ಸೇವಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ದೆಹಲಿ ಮೂಲದ ಮಹಿಳೆಯೊಬ್ಬರು ಆರೋಪಿಸಿದ್ದರು. ದೂರು ದಾಖಲು ಮಾಡಿದರೂ ದೆಹಲಿ ಪೊಲೀಸರು ಎಫ್​ಐಆರ್​ ದಾಖಲು ಮಾಡಿರಲಿಲ್ಲ. ಬದಲಿಗೆ ಆರೋಪದಲ್ಲಿ ಹುರುಳು ಇಲ್ಲ ಎಂದು ಕ್ಲೀನ್​ಚಿಟ್​ ನೀಡಿದ್ದರು. ಇದರ ವಿರುದ್ಧ ಮಹಿಳೆ ಕೋರ್ಟ್​ ಮೊರೆ ಹೋಗಿದ್ದರು.
ಸೆಷನ್ಸ್​ ಕೋರ್ಟ್​ ಎಫ್​ಐಆರ್​ ದಾಖಲಿಸುವಂತೆ ಹೇಳಿತ್ತು. ಆದರೆ ಇದುವರೆಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಇದು ಹೈಕೋರ್ಟ್​ ಕೆಂಗಣ್ಣಿಗೆ ಗುರಿಯಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಸಂಪೂರ್ಣ ನಿರಾಸಕ್ತಿ ತೋರಿರುವುದು ಎಲ್ಲ ಸಂಗತಿಗಳನ್ನು ಅವಲೋಕಿಸಿದಾಗ ಸ್ಪಷ್ಟವಾಗುತ್ತದೆ ಎಂದಿದ್ದಾರೆ ನ್ಯಾಯಮೂರ್ತಿಗಳು.(ಏಜೆನ್ಸೀಸ್​)
ಸೌದಿಗೆ ಹಾರಿದ 3 ಮಕ್ಕಳ ತಾಯಿ: ನೊಂದ ಪತಿಯಿಂದ ಘೋರ ಕೃತ್ಯ, ಕಂದಮ್ಮಗಳಿಗೆ ಇದೆಂಥ ಅನ್ಯಾಯ!

ಎರಡು ಸಾವಿರ ರೂ.ಗೆ ಯುವತಿಯ ಜತೆ ಮಂಚಕ್ಕೆ ಹೋದ ಇನ್ಸ್​ಪೆಕ್ಟರ್​: ಪೊಲೀಸರ ಬಲೆಗೆ ಗಂಡ-ಹೆಂಡ್ತಿ, ಅಪ್ಪ!

VIDEO: ಮಣ್ಣಿನೊಳಗೆ ಕೈಹಾಕಿ ವಿಗ್ರಹ ತೆಗೆದ ಕಳ್ಳ ಸ್ವಾಮೀಜಿ- ನಿಧಿ ಆಸೆ ತೋರಿಸಿ ಹಾಸನದ ದಂಪತಿಗೆ ಪಂಗನಾಮ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + 12 =
Remember me
