ಬೆಂಗಳೂರು:ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ದಿಕ್ಕಾರದ ಘೋಷಣೆ ಮೊಳಗಿಸಿದ ಘಟನೆ ನಡೆದಿದೆ.
ಚಾಮರಾಜಪೇಟೆ ಅಂಬರೀಶ್‌ ಚಿತ್ರಮಂದಿರದಲ್ಲಿ ಮಧ್ಯಾಹ್ನ ಕೊಡವ ಭಾಷೆಯ ದೇವರ ಕಾಡು (Devada Kaad) ಪ್ರದರ್ಶನ ಮುಗಿದಾಗ, ಇದು ಕೊಡವ ಸಂಸ್ಕೃತಿಗೆ ಅಪಚಾರ ಮಾಡುವ ಸಿನಿಮಾ ಎಂದು ಪ್ರಕಾಶ್ ಕಾರ್ಯಪ್ಪ ಆಕ್ರೋಶ ವ್ಯಕ್ತಪಡಿಸಿ, ದಿಕ್ಕಾರದ ಘೋಷಣೆ ಕೂಗಿದರು.
ಸಿನೆಮಾ ಶೀರ್ಷಿಕೆಗೂ ಇದಕ್ಕೂ ಸಂಬಂಧವೇ ಇಲ್ಲ. ಕೊಡಗಿನ ಆಚಾರ ವಿಚಾರಗಳು ಉತ್ಕೃಷ್ಟವಾಗಿದ್ದು, ಅದನ್ನು ತಳಮಟ್ಟಕ್ಕೆ ಇಳಿಸಿ ಚಿತ್ರೀಕರಣ ಮಾಡಿರುವುದು ಕೊಡವರಿಗೆ ಮಾಡಿದ ಅಪಮಾನ. ಈ ಸಿನೆಮಾ ಅಂತಾರಾಷ್ಟ್ರೀಯ ಚಿತ್ರೋತ್ಸವ ತನಕ ಹೇಗೆ ಬಂತು? ಯಾರು ಆಯ್ಕೆ ಮಾಡಿದರು ಎಂದು ನಿರ್ದೇಕರು, ಕಲಾವಿದರ ಸಮ್ಮುಖದಲ್ಲಿ ಪ್ರಶ್ನಿಸಿದರು.
ಇದೊಂದು ಆರ್ಟ್ ಸಿನಿಮಾ. ಆ ದೃಷ್ಟಿಯಿಂದ ನೋಡಿ ಎಂದು ನಿರ್ದೇಶಕರು ಮನವಿ ಮಾಡಿದರೂ, ಅವರ ಆಕ್ರೋಶ ತಣಿಯಲಿಲ್ಲ. ಕೊಡವರಿಗೆ ಮತ್ತು ಕೊಡವ ಸಂಸ್ಕೃತಿಗೆ ತದ್ವಿರುದ್ಧವಾಗಿರುವ ಸಿನಿಮಾ ತೆಗೆದು ಕೊಡವರ ಗೌರವ ಕಳೆಯಬೇಡಿ ಎಂದು ಮನವಿ ಮಾಡಿದರು.
ವಿಚಾರ ವಾಗ್ವಾದ ರೂಪ ಪಡೆದ ಹಿನ್ನೆಲೆಯಲ್ಲಿ ಸಂವಾದಕ್ಕೆ ತೆರೆ ಎಳೆಯಲಾಯಿತು. ಚಿತ್ರೋತ್ಸವದಲ್ಲಿ ದಿಕ್ಕಾರ ಕೂಗಿದ್ದು ಬೇಸರವಾಗಿದೆ ಎಂದು ಚಿತ್ರದ ಹಿರಿಯ ಕಲಾವಿದೆ ಅಸಮಾಧಾನ ವ್ಯಕ್ತಪಡಿಸಿದರು.
ತೃತೀಯ ಲಿಂಗಿ ಮಗಳಿಗೆ ‘ಮುಟ್ಟಿನ ಸಂಭ್ರಮ’ ಮಾಡಿದ ಅಮ್ಮ: ಕಣ್ತುಂಬಿ ಬರುವ ಘಟನೆಯಿದು… ಶ್ಲಾಘನೆಗಳ ಮಹಾಪೂರ

ಬಂಧನ ಭೀತಿಯಲ್ಲಿ ನಟಿ ಸೋನಾಕ್ಷಿ ಸಿಂಗ್‌! ವಂಚನೆ ಕೇಸ್‌ನಲ್ಲಿ ಕೋರ್ಟ್‌ನಿಂದ ಜಾಮೀನು ರಹಿತ ವಾರೆಂಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + seventeen =
Remember me
