ಬೆಂಗಳೂರು:ಬಿಜೆಪಿಯ ಭೀಷ್ಮ ಎಂದೇ ಕರೆಸಿಕೊಳ್ಳುವ, ಪಕ್ಷದ ಸಂಸ್ಥಾಪಕ ಸದಸ್ಯ ಎಲ್.ಕೆ. ಆಡ್ವಾಣಿ ಅವರು ನಿನ್ನೆ ಭಾನುವಾರ ಹುಟ್ಟುಹುಬ್ಬ ಆಚರಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಕೇಕ್ ಕಟ್ ಮಾಡಿ ತಿನ್ನಿಸಿ ಶುಭಾಶಯವನ್ನೂ ಕೋರಿದ್ದರು. ಇದರ ಬೆನ್ನಲ್ಲೇ ಇದೀಗ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರು ಮೋದಿಯವರಿಗೆ ಪತ್ರ ಬರೆಯುವ ಮೂಲಕ ವಿಶೇಷ ಬೇಡಿಕೆಯೊಂದನ್ನು ಸಲ್ಲಿಸಿದ್ದಾರೆ.
ಅದೇನೆಂದರೆ, ಎಲ್.ಕೆ. ಅಡ್ವಾಣಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ “ಭಾರತ ರತ್ನ” ನೀಡಬೇಕು ಎಂದು ಅವರು ಕೋರಿಕೊಂಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಅಪಾರ ಸೇವೆ ಸಲ್ಲಿಸಿರುವ ಅಡ್ವಾಣಿ ಭಾರತ ರತ್ನಕ್ಕೆ ಅರ್ಹರಾಗಿದ್ದು, ಭಾರತ ರತ್ನ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಆದ್ದರಿಂದ ಅವರ ಹೆಸರನ್ನು ಪರಿಗಣಿಸಬೇಕು ಪತ್ರದಲ್ಲಿ ಕೋರಿದ್ದಾರೆ.
ನಿಮಗೆ ತಿಳಿದಿರುವಂತೆ, ಅಡ್ವಾಣಿ 7 ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ. ಆರ್‌ಎಸ್‌ಎಸ್, ಭಾರತೀಯ ಜನಸಂಘಮತ್ತು ಬಿಜೆಪಿ ಮೂಲಕ ದೇಶಕ್ಕೆ ಅವರ ಸೇವೆ, ತ್ಯಾಗ ಮತ್ತು ಕೊಡುಗೆ ಅದ್ಭುತವಾಗಿದೆ. ಅವರ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಸ್ವಚ್ಛ, ಪ್ರಾಮಾಣಿಕ ಹಾಗೂ ಅತ್ಯಂತ ವಿಶ್ವಾಸಾರ್ಹತೆ ಹೊಂದಿರುವ ನಾಯಕರಾಗಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಎಲ್ಲಾ ಅಂಶಗಳ ಬಗ್ಗೆ ಹೇರಳವಾದ ಜ್ಞಾನ ಮತ್ತು ಅನುಭವ ಹೊಂದಿರುವ ವ್ಯಕ್ತಿಯಾಗಿರುವ ಅಡ್ವಾಣಿ ಬಗ್ಗೆ ಪ್ರತಿಯೊಬ್ಬರೂ ಹೆಮ್ಮೆ ಪಡುತ್ತಾರೆ ಆದ್ದರಿಂದ ಈ ಪ್ರಶಸ್ತಿಗೆ ಅವರನ್ನು ಪರಿಗಣಿಸಿ ಎಂದು ಕೋರಿದ್ದಾರೆ.
ಇದನ್ನೂ ಓದಿ:ಚಿಕನ್​ ಫಿಲ್ಲೆಟ್ಸ್​ ಹೆಸರು ಕೇಳುತ್ತಿದ್ದಂತೆಯೇ​ ಕೋಮಾದಿಂದ ಎದ್ದುಕುಳಿತ ಯುವಕ!
ವಾಸ್ತವವಾಗಿ ಲಕ್ಷಾಂತರ ಜನರಂತೆ ನಾನು ಕೂಡ ಅಡ್ವಾಣಿಯವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇ‌ನೆ. ಅವರೊಂದಿಗೆ ಪ್ರವಾಸ ಮಾಡಿದ್ದೇನೆ. ಐದು ದಶಕದಿಂದ ಅವರನ್ನು ಹತ್ತಿರದಿಂದ ತಿಳಿದುಕೊಂಡಿದ್ದೇನೆ. ಅವರ ಸಾರ್ವಜನಿಕ ಭಾಷಣವನ್ನು ಅನುವಾದಿಸಿದ್ದೇನೆ. ಅವರಿಗೆ ಈ ಪ್ರಶಸ್ತಿ ಸಿಗಬೇಕು ಎನ್ನುವುದು ನನ್ನಂತೆಯೇ ದೇಶದ ಹಲವರ ಆಶಯ ಎಂದು ಹೇಳಿದ್ದಾರೆ.
ಬಾಯ್​ಫ್ರೆಂಡ್​ ಜತೆ ಮದ್ವೆ ಮಾಡ್ಸಿ ಅಂತ ಬ್ಯಾನರ್​ ಏರಿಕುಳಿತ ಬಾಲಕಿ!

ಆ್ಯಪ್​ ಇನ್​ಸ್ಟಾಲ್​ ಮಾಡುತ್ತಿದ್ದಂತೆಯೇ ₹9 ಲಕ್ಷ ಮಂಗಮಾಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − three =
Remember me
