ರಾಂಚಿ:ಮಕ್ಕಳೆಂದರೆ ಅಪ್ಪ ಅಮ್ಮನಿಗಿಂತಲೂ ಹೆಚ್ಚಾಗಿ ಅಜ್ಜ ಅಜ್ಜಿಯಂದಿರಿಗೇ ಪ್ರೀತಿ. ಆದರೆ ಇಲ್ಲೊಬ್ಬ ಮೊಮ್ಮಗಳು ತನ್ನ ಪ್ರಿಯಕರನ ಜತೆ ಸೇರಿ ಕನ್ನ ಹಾಕಿದ ಮೊಮ್ಮಗಳೊಬ್ಬಳು ಇದೀಗ ಅರೆಸ್ಟ್​ ಆಗಿದ್ದಾಳೆ.
ಇದು ನಡೆದಿರುವುದು ಜಾರ್ಖಂಡ್ ರಾಜ್ಯದ ಧನ್‍ಬಾದ್ ಎಂಬಲ್ಲಿ. ಪ್ರಿಯಕರನ ಜತೆಗೂಡಿ ಅಜ್ಜ ಧನ್‍ಬಾದ್ ಜಿಲ್ಲೆಯ ಭೂಲಿ ನಿವಾಸಿ ರಾಕೇಶ್ ಕುಮಾರ್ ಅವರ 11.80 ಲಕ್ಷ ರೂಪಾಯಿ ಹಣ ಲಪಟಾಯಿಸಿದ್ದಾಳೆ ಈ ಮೊಮ್ಮಗಳು.
ತಮ್ಮ ಹಣ ಕಳುವಾಗಿದೆ ಎಂದು ರಾಕೇಶ್ ಕುಮಾರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಕ್ರಮವಾಗಿ 11 ಲಕ್ಷ 80 ಸಾವಿರ ರೂಪಾಯಿ ವರ್ಗವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಇದರ ಬೆನ್ನತ್ತಿ ಹೋದಾಗ ಇವೆಲ್ಲಾವೂ ಮೊಮ್ಮಗಳ ಕೃತ್ಯ ಎಂದು ಪೊಲೀಸರಿಗೆ ತಿಳಿದಿದೆ.
ಯುವತಿ ಬಿಸಿಸಿಎಲ್ ಸಹಾಯದಿಂದ ಹಣವನ್ನ ತನ್ನ ಖಾತೆಗೆ ವರ್ಗಾಯಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಹಣವನ್ನು ಕದ್ದು ಪ್ರಿಯಕರನ ಜತೆಗೂಡಿ ಈ ಮೊಮ್ಮಗಳು ಕೋಲ್ಕತ್ತಾಗೆ ಪ್ರಯಾಣ ಬೆಳೆಸಿದ್ದಳು. ಕೊನೆಗೂ ಅವರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋಲ್ಕತ್ತಾದಲ್ಲಿ ಇಬ್ಬರನ್ನೂ ಬಂಧಿಸಿ ಧನ್‍ಬಾದ್​ಗೆ ಕರೆ ತಂದಿದ್ದಾರೆ.
11.80 ಲಕ್ಷ ರೂಪಾಯಿಗಳಲ್ಲಿ ಈಗ 8.25 ಲಕ್ಷ ರೂಪಾಯಿ ಮಾತ್ರವಿದ್ದು, ಉಳಿದವುಗಳನ್ನು ಖರ್ಚು ಮಾಡಿದ್ದಾರೆ ಎಂದಿರುವ ಪೊಲೀಸರು ಹಣವನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಕ್ಲಾಸ್​ರೂಂ ಒಳಗೇ ಗೆಳತಿಯ ಮದ್ವೆಯಾದ ಹೈಸ್ಕೂಲ್​​ ವಿದ್ಯಾರ್ಥಿ! ಮುಂದೇನಾಯ್ತು ನೋಡಿ…

70 ಲಕ್ಷ ಭಾರತೀಯರ ಡೆಬಿಟ್-ಕ್ರೆಡಿಟ್​ ಕಾರ್ಡ್​ ಸೇರಿದಂತೆ ಹಣಕಾಸಿನ ಪಿನ್​ ಟು ಪಿನ್​ ಮಾಹಿತಿ ಸೋರಿಕೆ!

ಏಲಿಯನ್ ಜತೆ ಅಮೆರಿಕ ಒಪ್ಪಂದ​: ವಿಶ್ವಖ್ಯಾತಿ ಇಸ್ರೇಲ್​ ವಿಜ್ಞಾನಿಯಿಂದ ಅಚ್ಚರಿಯ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 16 =
Remember me
