ಚಿಕ್ಕಮಗಳೂರು:ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಉಪಸಭಾಪತಿ ಧರ್ಮೇಗೌಡ ಅವರ ಡೆತ್​ನೋಟ್​ನಲ್ಲಿ ಸಾವಿನ ರಹಸ್ಯ ಇದೆಯಾದರೂ ಸದ್ಯ, ಅವರ ಬಗ್ಗೆ ಕುತೂಹಲದ ವಿಷಯಗಳು ಬೆಳಕಿಗೆ ಬರುತ್ತಿವೆ.
ಚಿಕ್ಕಮಗಳೂರಿನ ಫಾರ್ಮ್​ ಹೌಸ್​ನಲ್ಲಿ ಹೊಸ ಮನೆಯನ್ನು ನಿರ್ಮಿಸಲು ಸಕಲ ಸಿದ್ಧತೆ ನಡೆಸಿದ್ದ ಧರ್ಮೇಗೌಡ ಅವರು ನಿನ್ನೆಯಷ್ಟೇ ಅದರ ಗುದ್ದಲಿಪೂಜೆಯನ್ನು ನೆರವೇರಿಸಿದ್ದಾರೆ. ತುಂಬಾ ಲವಲವಿಕೆಯಿಂದ, ಖುಷಿಯಿಂದಲೇ ಈ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು ಎನ್ನಲಾಗಿದೆ.
ಮಧ್ಯಾಹ್ನದವರೆಗೂ ಗುದ್ದಲಿಪೂಜೆ ಕಾರ್ಯದಲ್ಲಿ ಪಾಲ್ಗೊಂಡು ಹೊಸ ಮನೆ ನಿರ್ಮಾಣದ ಕನಸು ಹೊತ್ತು, ಸಂಜೆಯ ವೇಳೆಗೆ ಆತ್ಮಹತ್ಯೆಯ ಹಾದಿ ತುಳಿದಿರುವ ಹಿಂದೆ ಇದೀಗ ಇನ್ನಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಗುದ್ದಲಿಪೂಜೆ ನೆರವೇರಿಸಿರುವ ಗುದ್ದಲಿ ಇನ್ನೂ ಅದೇ ಜಾಗದಲ್ಲಿ ಇದೆ ಎನ್ನುತ್ತಾರೆ ಸ್ಥಳೀಯರು.
ಗುದ್ದಲಿಪೂಜೆಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಇಲ್ಲೇ ಧರ್ಮೇಗೌಡರು ಇದ್ದರು. ಉತ್ಸಾಹದಿಂದಲೇ ಇದ್ದರು. ತೋಟದ ತುಂಬಾ ವಾಕಿಂಗ್​ ಮಾಡುತ್ತಾ ಗುದ್ದಲಿಪೂಜೆಯ ಸಿದ್ಧತೆ ನಡೆಸಿದ್ದರು. ಪೂಜೆ ನೆರವೇರಿಸುವಾಗಲೂ ಯಾವುದೇ ನೋವು ಅವರ ಮುಖದಲ್ಲಿ ಇರಲಿಲ್ಲ. ಲವಲವಿಕೆಯಿಂದಲೇ ಇದ್ದರು. ಸಂಜೆಯ ವೇಳೆಗೆ ಹೀಗಾಗಿದೆ. ಇದನ್ನು ನಂಬಲು ಆಗುತ್ತಲೇ ಇಲ್ಲ ಎನ್ನುತ್ತಾರೆ ತೋಟದ ಕಾರ್ಮಿಕರು.
ಇದನ್ನೂ ಓದಿ:ಶಾಕಿಂಗ್ ನ್ಯೂಸ್ ! ವಿಧಾನಪರಿಷತ್ ಉಪಸಭಾಪತಿ ಎಸ್​.ಎಲ್​.ಧರ್ಮೇಗೌಡ ಆತ್ಮಹತ್ಯೆ..
ಇಲ್ಲಿಂದ ಸಂಜೆ 4 ಗಂಟೆ ಸುಮಾರಿಗೆ ಕಾರಿನಲ್ಲಿ ಗುಣಸಾಗರಕ್ಕೆ ಬಂದು ರೈಲು ಸಂಚಾರದ ಮಾಹಿತಿ ಪಡೆದುಕೊಂಡಿದ್ದರು. ಅಲ್ಲಿ ನೀರು ತರುವುದಕ್ಕೆಂದು ಕಾರಿನಿಂದ ಇಳಿದು ಹೋದ ಅವರು, ನಂತರ ಬಂದು ಚಾಲಕನಿಗೆ ಕಾರಿನಲ್ಲೇ ಇರುವಂತೆ ಹೇಳಿ ತೆರಳಿದ್ದರು.
ಹಾಗೆ ಹೋದವರು ಮತ್ತೆ ಬಹಳ ಹೊತ್ತಾದರೂ ಬಾರದೇ ಇದ್ದಾಗ, ಚಾಲಕ ಫೋನ್ ಕರೆ ಮಾಡಿದ್ದ. ಪ್ರತಿಕ್ರಿಯೆ ಸಿಗದ ಕಾರಣ ಧರ್ಮೇಗೌಡರ ಪುತ್ರನಿಗೆ ಕರೆ ಮಾಡಿದ ಚಾಲಕ, ಧರ್ಮೇಗೌಡರು ಫೋನ್ ಪಿಕ್ ಮಾಡದೇ ಇರುವ ವಿಚಾರ ತಿಳಿಸಿದ್ದ. ಇದಾಗಿ ಕಡೂರು ಪೊಲೀಸರಿಗೂ ಮಾಹಿತಿ ಹೋಗಿದ್ದು ಎಲ್ಲರೂ ಹುಡುಕಾಟ ಆರಂಭಿಸಿದ್ದಾರೆ. ಕೊನೆಗೆ ಗುಣಸಾಗರದಲ್ಲಿ ಮೊಬೈಲ್ ಲೊಕೇಶನ್ ಪತ್ತೆಯಾಗಿದೆ. ತೀವ್ರ ಹುಡುಕಾಟ ನಡೆಸಿದಾಗ ರೈಲ್ವೆ ಹಳಿ ಸಮೀಪ ಎರಡು ಭಾಗವಾಗಿರುವ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.
ಧರ್ಮೇಗೌಡರ ಡೆತ್​ನೋಟ್​ ಸಿಕ್ಕಿದೆ- ಅದರಲ್ಲಿ ಅನೇಕ ರಹಸ್ಯಗಳಿವೆ: ಸಿಎಂ ಯಡಿಯೂರಪ್ಪ

ಟಿಆರ್​ಪಿ ತಿರುಚಲು ಲಕ್ಷ ಲಕ್ಷ ಲಂಚ- ವಸ್ತುಗಳು ಗಿಫ್ಟ್​: ಕೋರ್ಟ್​ಗೆ​ ಮಾಹಿತಿ ನೀಡಿದ ಪೊಲೀಸರು

ಮದುವೆಗೆ ಕೆಲವೇ ದಿನವಿದ್ದು, ಈಗ ಅಕ್ರಮ ಸಂಬಂಧದ ಬಗ್ಗೆ ಹೇಳುತ್ತಿದ್ದಾಳೆ- ತಲೆ ಕೆಟ್ಟುಹೋಗಿದೆ…

ಮಕ್ಕಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು ವಿಡಿಯೋ ಮಾರಾಟ- ಜಾಲದ ಹಿಂದೆ ಇಂಜಿನಿಯರ್​ ಪತ್ನಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − 4 =
Remember me
