ನವದೆಹಲಿ:ಕರೊನಾ, ರೂಪಾಂತರಿ ಕರೊನಾದ ನಡುವೆ ಇದೀಗ ಹಕ್ಕಿಜ್ವರ ಎಲ್ಲೆಡೆ ಭೀತಿ ಸೃಷ್ಟಿಸಿದೆ. ಇದಾಗಲೇ ದೇಶದ ವಿವಿಧ ಭಾಗಗಳ ಲಕ್ಷಾಂತರ ಕೋಳಿಗಳು ಪ್ರಾಣ ಕಳೆದುಕೊಂಡಿವೆ.
ಇದರ ನಡುವೆಯೇ ಏಷ್ಯಾದ ಅತಿದೊಡ್ಡ ಮಾರುಕಟ್ಟೆಯಾದ ದೆಹಲಿಯ ಗಾಜಿಪುರದಲ್ಲಿ ನೂರು ಕೋಳಿಗಳ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ಹಕ್ಕಿ ಜ್ವರದ ಅಂಶ ಕಂಡುಬಂದಿಲ್ಲ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಸದ್ಯ ದೆಹಲಿಯ ಮಂದಿ ನಿರಾಳರಾಗಿದ್ದಾರೆ.
ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರ ಮಾರುಕಟ್ಟೆ, ಕೋಳಿ, ಬಾತುಕೋಳಿ, ಮೊಟ್ಟೆ ಗಳ ಪೂರೈಕೆ ಮಾಡುವ ಪ್ರಮುಖ ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆಯುಂದ 104 ಮಾದರಿ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 100 ಕೋಳಿಗಳ ಮಾದರಿಯನ್ನು ಸಂಗ್ರಹಿಸಲಾಗಿತ್ತು ಎಂದು ಪಶುಸಂಗೋಪನಾ ಅಧಿಕಾರಿ ರಾಕೇಶ್​ ಸಿಂಗ್​ ತಿಳಿಸಿದ್ದಾರೆ.
ಈ ವರದಿಯು ದೆಹಲಿಯ ಚಿಕನ್‌ ಪ್ರಿಯರಲ್ಲಿ ಬಹು ಉತ್ಸಾಹ ತಂದಿದೆ. ಇದರ ಆಧಾರದ ಮೇಲೆ ಕೋಳಿ ಮಾಂಸ ಮಾರಾಟದ ಮೇಲೆ ಹೇರಲಾಗಿದ್ದ ತಾತ್ಕಲಿಕ ನಿಷೇಧವನ್ನು ದೆಹಲಿ ಸರ್ಕಾರ ಹಿಂದಕ್ಕೆ ಪಡೆದಿದೆ.
Samples taken from poultry markets have tested negative with respect to Bird Flu.
Have directed to open the poultry market & withdraw the orders to restrict trade & import of chicken stocks.
— Arvind Kejriwal (@ArvindKejriwal)January 14, 2021

ಸತ್ತ ಕಾಗೆ ಹಾಗೂ ಬಾತುಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಯ ಕೆಲವು ಪ್ರದೇಶಗಳಲ್ಲಿ ಕೋಳಿ ಮಾಂಸ ಮಾರಾಟ, ಸಾಗಾಟಕ್ಕೆ ನಿಷೇಧ ಹೇರಲಾಗಿತ್ತು. ಅಲ್ಲದೇ ಹೋಟೆಲ್​, ರೆಸ್ಟೋರೆಂಟ್​ಗಳಲ್ಲಿಯೂ ಕೋಳಿ ಮತ್ತು ಮೊಟ್ಟೆ ಆಹಾರವನ್ನು ಸರಬರಾಜು ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು.
ನಂತರ ವರದಿಗೆ ಇದನ್ನು ಕಳಹಿಸಲಾಗಿತ್ತು. ಇದೀಗ ನೆಗೆಟಿವ್‌ ಬಂದಿರುವ ಹಿನ್ನೆಲೆಯಲ್ಲಿ ಮಾಂಸ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ದೆಹಲಿಯಲ್ಲಿ ಕೋಳಿಗಳಲ್ಲಿ ಹಕ್ಕಿ ಜ್ವರ ಹರಡುತ್ತಿಲ್ಲ ಎಂಬುದು ಇದರಿಂದ ಅರ್ಥವಾಗಿದೆ. ಆದಾಗ್ಯೂ, ನಾಲ್ಕು ಮಾದರಿಗಳಲ್ಲಿ ಶಂಕೆ ವ್ಯಕ್ತವಾಗಿದ್ದು, ಸ್ಪಷ್ಟತೆಗಾಗಿ ಭೂಪಾಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಖುದ್ದಾಗಿ ದೆಹಲಿ ಸಿಎಂ ಅರವಿಂದ್​​ ಕೇಜ್ರಿವಾಲ್ ಟ್ವೀಟ್‌ ಮಾಡಿದ್ದಾರೆ. ಸಂಸ್ಕರಿಸಿದ ಕೋಳಿಗಳ ಮಾರಾಟದ ಮೇಲೆ ವಿಧಿಸಲಾಗಿದ್ದ ನಿರ್ಬಂಧ ತೆಗೆದು ಹಾಕುವಂತೆ ಸೂಚನೆ ನೀಡಲಾಗಿದೆ ಎಂದರು.
ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ, ಗುಜರಾತ್​, ಹರ್ಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಈಗಾಗಲೇ ಹಕ್ಕಿ ಜ್ವರದ ಪ್ರಕರಣಗಳು ದಾಖಲಾಗಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಎಚ್ಚರವಹಿಸಿದೆ.
ಕೃಷಿ ಕಾಯ್ದೆ ಮಾತುಕತೆಯ ಸಮಿತಿಯಿಂದ ಹೊರನಡೆದ ರೈತ ನಾಯಕ!

ಮದ್ವೆಯಾಗುತ್ತಾನೆಂದು ನಂಬಿ ಎಲ್ಲವನ್ನೂ ಅರ್ಪಿಸಿಬಿಟ್ಟೆ- ಈಗ ಬೇರೆಯವಳನ್ನು ಕಟ್ಟಿಕೊಂಡಿದ್ದಾನೆ: ನಾನೇನು ಮಾಡಲಿ?

ನಾನು ಕೆಲಸ ಕಳೆದುಕೊಂಡ ಮೇಲೆ ಪತ್ನಿ ವಿಚಿತ್ರವಾಗಿ ವರ್ತಿಸತೊಡಗಿದ್ದಾಳೆ: ಏನು ಮಾಡಲಿ?

ಅಯ್ಯೋ ನೆನಪಾಗ್ತಲೇ ಇಲ್ಲ ಪಾಸ್‌ವರ್ಡ್‌: ಇನ್ನೆರಡು ಸಲ ತಪ್ಪು ಟೈಪಿಸಿದರೆ ಸಾವಿರಾರು ಕೋಟಿ ಗೋವಿಂದ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − thirteen =
Remember me
