ವಾಷಿಂಗ್ಟನ್‌:ದಂಪತಿ ನಡುವೆ ವಿಚ್ಛೇದನವಾದಾಗ ಪರಿಹಾರ, ಜೀವನಾಂಶದ ವಿಷಯ ಬಂದಾಗ ಪತಿಯಂದಿರಿಗೆ ದೊಡ್ಡ ತಲೆನೋವಾಗುವುದು ಉಂಟು. ಏಕೆಂದರೆ ಆತ ಎಷ್ಟೇ ದುಡಿಯುತ್ತಿರಲಿ, ಅದರ ಒಂದಿಷ್ಟು ಪಾಲನ್ನು ವಿಚ್ಛೇದಿತ ಪತ್ನಿಗೆ ನೀಡುವುದು ಅನಿವಾರ್ಯ. ಆದರೆ ಕೆಲವೊಂದು ಅಪರೂಪದಲ್ಲಿ ಅಪರೂಪ ಎನ್ನುವಂತೆ ಇಂಥದ್ದೊಂದು ಕುತೂಹಲದ ಘಟನೆಗಳೂ ನಡೆಯುತ್ತವೆ ನೋಡಿ.
ಇದು ಹಾಲಿವುಡ್‌ನ ಸುಪ್ರಸಿದ್ಧ ಗಾಯಕಿ ಆಡೆಲೆ (32) ಹಾಗೂ ಆಕೆಯ ಪತಿ ಸೈಮೆನ್‌ ಕನ್ಕಿ ಸ್ಟೋರಿ ಇದು. ಆಡೆಲ್‌ ಗ್ರ್ಯಾಮಿ ಮತ್ತು ಆಸ್ಕರ್‌ ಪ್ರಶಸ್ತಿ ಪುರಸ್ಕೃತೆ, ಜಗತ್ಪ್ರಸಿದ್ಧ ಗಾಯಕಿ. ಸೈಮೆನ್‌ ದೊಡ್ಡ ಉದ್ಯಮಿ.
ಇವರಿಬ್ಬರೂ 2011ರಲ್ಲಿ ಡೇಟಿಂಗ್‌ ಆರಂಭಿಸಿದ್ದರು. ಇದರ ಫಲವಾಗಿ ಮರುವರ್ಷ ಆದರೆ 2012ರಲ್ಲಿ ಮಗ ಜನಿಸಿದ. ಅವನ ಹೆಸರು ಏಂಜೆಲೊ. ಈ ಜೋಡಿ 2016ರಲ್ಲಿ ಮದುವೆಯಾದರು. ಆದರೆ ಮದುವೆ ನಂತರ ಇಬ್ಬರ ನಡುವೆ ಒಡಕು ಶುರುವಾಯಿತು. ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತು.
ಇದರಿಂದಾಗಿ ಇಬ್ಬರೂ ವಿಚ್ಛೇದನ ಪಡೆಯಲು ಮುಂದಾದರು. ಈ ಬಗ್ಗೆ 2019ರ ಏಪ್ರಿಲ್‌ನಲ್ಲಿ ದಂಪತಿ ಘೋಷಿಸಿದ್ದರು. ಲಾಸ್‌ ಏಂಜಲಿಸ್‌ನಲ್ಲಿ ಇವರು ವಿಚ್ಛೇದನ ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಆಡೆಲೆ ತನ್ನ ಗಂಡನಿಗೆ ಪರಿಹಾರದ ರೂಪದಲ್ಲಿ 171 ಮಿಲಿಯನ್‌ ಡಾಲರ್‌ (ಸುಮಾರು 1248 ಕೋಟಿ ರೂ.) ನೀಡಿದ್ದಾರೆ! ಮಗನನ್ನು ಇಬ್ಬರೂ ನೋಡಿಕೊಳ್ಳುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಮಗನನ್ನು ಪ್ರೀತಿಯಿಂದ ಬೆಳೆಸುವುದರಲ್ಲಿ ತಾವಿಬ್ಬರೂ ಬದ್ಧರಾಗಿದ್ದೇವೆ ಎಂದು ಈ ದಂಪತಿ ಕೋರ್ಟ್‌ಗೆ ತಿಳಿಸಿದ್ದಾರೆ.
ಪತಿಗಿಂತ ತಾವು ಅತಿಹೆಚ್ಚು ದುಡಿಯುತ್ತಿರುವ ಕಾರಣದಿಂದ ಈ ಬೃಹತ್‌ ಪರಿಹಾರದ ಮೊತ್ತವನ್ನು ಕೊಡಲು ಗಾಯಕಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಸುಂದರಿಯಿಂದ ಮಸಾಜ್‌ ಮಾಡಿಸಿಕೊಳ್ಳೋ ಕನಸು ಕಾಣ್ತಾ ಹೋದ್ರೆ ನಿಮಗೂ ಹೀಗೇ ಆಗ್ಬೋದು ಜೋಕೆ!

ನಿಮಗೆ ನಿಮ್ಮವರಿಂದಲೇ ತೊಂದರೆಯಾದೀತು; ನಿತ್ಯ ಭವಿಷ್ಯ

ಅವ್ರು ರೇಪ್‌ ಮಾಡಿದ್ದಾರೆ ಎಂದ ಗಾಯಕಿ: ನಾವು ನಿತ್ಯ ಸಂಪರ್ಕದಲ್ಲಿದ್ದೆವು ಎಂದ ಸಚಿವ- ಒಟ್ನಲ್ಲಿ ಕೇಸ್‌ ಆಯ್ತು ಸುಖಾಂತ್ಯ

ಬಿಗಡಾಯಿಸಿದ ಲಾಲೂ ಪ್ರಸಾದ್‌ ಆರೋಗ್ಯ ಸ್ಥಿತಿ: ನಾಯಕನ ಚೇತರಿಕೆಗೆ ಹೋಮ-ಹವನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 + thirteen =
Remember me
