ನನ್ನ ಹೆಂಡತಿ ಮೂರು ವರ್ಷಗಳ ಹಿಂದೆ ಅವಳ ಪ್ರಿಯಕರನಿಗೆ ವಾಟ್ಸ್​ಆ್ಯಪ್​ನಲ್ಲಿ ಕಳಿಸಿದ ಸಂದೇಶಗಳ ಮೂಲಕ ಅವಳಿಗೆ ಇರುವ ಅನೈತಿಕ ಸಂಬಂಧ ನನಗೆ ತಿಳಿದಿದೆ. ಆದರೆ ಅವಳು ನನಗೆ ಸಂಬಂಧಿ ಆದುದರಿಂದ ಈ ವಿಷಯವನ್ನು ಎತ್ತದೇ ಹಾಗೇ ಸುಮ್ಮನಿದ್ದೇನೆ. ಆಮೇಲೆ ನಮಗೆ ಎರಡು ಮಕ್ಕಳೂ ಆಗಿದ್ದಾರೆ. ಮೊದಲು ತನ್ನ ತಪ್ಪು ಎಂದು ಒಪ್ಪಿಕೊಂಡು ಕ್ಷಮೆ ಕೇಳುವ ಮನೋಭಾವ ಇತ್ತು. ಈಗ ತನ್ನ ತಪ್ಪೇ ಇಲ್ಲ. ನನಗೇ ಅನುಮಾನ ಜಾಸ್ತಿ ಎನ್ನುವಂತೆ ಆಡುತ್ತಿದ್ದಾಳೆ. ನನ್ನ ಹತ್ತಿರ ಯಾವ ಪುರಾವೆಯೂ ಇಲ್ಲ.ನನಗೆ ಈಗ ಜೀವನ ಜುಗುಪ್ಸೆ ಆಗಿದೆ. ಸಾಯಬೇಕು ಎನ್ನಿಸುತ್ತಿದೆ. ಈಗ ಅವಳ ಅನೈತಿಕ ಸಂಬಂಧವನ್ನು ಹೇಗೆ ಸಾಬೀತು ಪಡಿಸಿ ನಾನು ಅವಳಿಂದ ವಿಚ್ಛೇದನ ಪಡೆಯಬಹುದು ಎಂದು ತಿಳಿಸಿ.ಉತ್ತರ:ನಿಮ್ಮ ಹೆಂಡತಿಯ ಮೇಲೆ ಅನುಮಾನದ ಆಧಾರದ ಮೇಲೆ , ವಾಟ್ಸ್​ಆ್ಯಪ್‌ ಸಂದೇಶಗಳ ಮೇಲಿನ ಆಧಾರದಿಂದ ನೀವು ವಿಚ್ಛೇದನ ಪಡೆಯಲು ಆಗುವುದಿಲ್ಲ. ಬೇರೆ ವ್ಯಕ್ತಿಗಳ ಜತೆ ಪತಿಗೆ, ಅಥವಾ ಪತ್ನಿಗೆ ವಿವಾಹೇತರ ಸಂಬಂಧ ಇದ್ದು , ಅದರ ಬಗ್ಗೆ ಪುರಾವೆ ಇದ್ದರೆ ಅದು ಬೇರೆಯ ವಿಷಯ. ಆಗ ಆ ಅಂಶ ಕ್ರೂರತೆಯ ಅಂಶವಾಗಿ ವಿಚ್ಛೇದನ ಪಡೆಯಲು ಸಹಾಯಕಾರಿ ಆಗುತ್ತದೆ. ನಿಮ್ಮ ವಿಷಯದಲ್ಲಿ ನಿಮ್ಮ ಹತ್ತಿರ ಪುರಾವೆಯೂ ಇಲ್ಲ. ಅನೈತಿಕ ಸಂಬಂಧವನ್ನು ಸಾಬೀತು ಪಡಿಸುವುದು ಬಹಳ ಕಷ್ಟ. ಮೇಲಾಗಿ ನಿಮಗೆ ವಿಷಯ ತಿಳಿದ ಮೇಲೆ ಮತ್ತೆ ಮಕ್ಕಳೂ ಆಗಿದ್ದಾರೆ. ಕ್ರೂರತೆಯ ಅಂಶವನ್ನು ಒಂದು ಸಲ ಮನ್ನಿಸಿದ ಮೇಲೆ ಮತ್ತೆ ಮೇಲೆ ತೆಗೆಯುವಂತಿಲ್ಲ.
ಆಗಿರುವುದನ್ನು ಮರೆತು ನೀವಿಬ್ಬರೂ ಯಾರಾದರೂ ವಿವಾಹ ಸಂಧಾನಕಾರರ ಹತ್ತಿರ ಹೋಗಿ ಸಲಹೆ ಪಡೆಯಿರಿ. ಸಂಧಾನಕಾರರು ನಿಮ್ಮ ಪತ್ನಿಗೂ ಸೂಕ್ತ ಸಲಹೆ ಕೊಡುತ್ತಾರೆ. ಮುಂದಿನ ಜೀವನವನ್ನು ಚೆನ್ನಾಗಿ ನಡೆಸಿ. ಒಂದು ವೇಳೆ ವಿಚ್ಛೇದನ ಪಡೆದು ಮುಂದೆ ಯಾರನ್ನಾದರೂ ಮದುವೆ ಆದರೆ, ಆಕೆಯೂ ವಿಚ್ಛೇದಿತಳೇ ಆದರೆ, ಆಗ ಅಕೆ ಮತ್ತೊಬ್ಬ ವ್ಯಕ್ತಿಯ ಜೊತೆ ಇದ್ದವಳು ಎನ್ನುವುದನ್ನು ತಿಳಿದೂ ನೀವು ಮದುವೆ ಆಗುವುದಿಲ್ಲವೇ. ಹಾಗೇ ಈ ವಿಷಯದಲ್ಲೂ ಮನಸ್ಸಿಗೆ ಸಮಾಧಾನ ತಂದುಕೊಳ್ಳಿ. ಈ ರೀತಿಯ ವಿಷಯಗಳಿಗೆ ಜುಗುಪ್ಸೆ ಪಟ್ಟುಕೊಂಡು ಸಾಯುವ ಬಗ್ಗೆ ಯೋಚಿಸುವುದು ಹುಚ್ಚುತನ.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ:
https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/
ತಂದೆ ಸಾಯುವ ಮೊದಲೇ ಮದುವೆಯಾದ ಮಗಳಿಗೂ ಆಸ್ತಿಯಲ್ಲಿ ಪಾಲು ಇದೆಯಾ? ಕಾನೂನು ಹೀಗೆ ಹೇಳಿದೆ ನೋಡಿ…

ಅಗ್ನಿಪಥ್ ಯೋಜನೆ: ಸುಳ್ಳು ಸುದ್ದಿ ಹರಡಿ ಹಿಂಸೆಗೆ ಪ್ರಚೋದನೆ- ವಾಟ್ಸ್​ಆ್ಯಪ್​ ಬ್ಯಾನ್​, 10 ಮಂದಿ ಬಂಧನ


ಮಕ್ಕಳ ಮೇಲೆ ಅಸಹ್ಯ ಹುಟ್ಟಿದೆ; ನನ್ನ ಪಾಲಿನ ಪಿತ್ರಾರ್ಜಿತ ಆಸ್ತಿಯನ್ನು ಯಾರಿಗೂ ಕೊಡದೇ ಮಾರಬಹುದೆ?

ಪತ್ನಿಗೆ ಮಕ್ಕಳಾಗುವುದಿಲ್ಲ, ಇನ್ನೊಂದು ಮದ್ವೆಯಾಗಲು ಬಿಡ್ತಿಲ್ಲ- ಕಾನೂನಿನಡಿ ನಾನು ಏನು ಮಾಡಬಹುದು?

ಅಮ್ಮನಿಗೆ ಅವರ ತವರಿನಿಂದ ಬಂದ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಮಾತ್ರ ಪಾಲು ಸಿಗುತ್ತದೆಯೆ?

ಫ್ಯಾಮಿಲಿ ಕೋರ್ಟ್‌ ಡಿವೋರ್ಸ್‌ ನೀಡಿದೆ- ಪತಿ ಮೇಲ್ಮನವಿ ಸಲ್ಲಿಸಲ್ಲ- ಕೂಡಲೇ ಮರುಮದುವೆಯಾಬಹುದೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − five =
Remember me
