ಶಂಭಾಲ್‌ (ಉತ್ತರ ಪ್ರದೇಶ):ಈ ಹೆಡ್ಡಿಂಗ್‌ ಓದಿ ಎಲ್ಲೋ ತಪ್ಪು ಆಗಿರಬೇಕು ಅಂದುಕೊಂಡ್ರಾ? ಇಲ್ಲಪ್ಪ ಇಲ್ಲ… ನಿಜಕ್ಕೂ ಇದು ಸರಿಯಾಗಿಯೇ ಇದೆ.ಹೌದು. ಇಲ್ಲೊಬ್ಬ ಯುವತಿ ವಿಚ್ಛೇದನಕ್ಕೆ ಕೋರಿ ಕೋರ್ಟ್‌ ಮೊರೆ ಹೋಗಿದ್ದು, ಅದರಲ್ಲಿ ಇದನ್ನೇ ನಮೂದು ಮಾಡಿದ್ದಾಳೆ. ಗಂಡ ಅಡುಗೆ ಮಾಡುತ್ತಾನೆ, ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾನೆ. ತುಂಬಾ ಪ್ರೀತಿಸುತ್ತಾನೆ, ಸಿಟ್ಟಾಗಲ್ಲ, ಬೈಯಲ್ಲ… ಲೈಫ್‌ ಬೋರ್‌ ಆಗಿ ಹೋಗಿದೆ ಎಂದು ಮದುವೆಯಾದ 18 ತಿಂಗಳಿಗೇ ಈ ಯುವತಿ ವಿಚ್ಛೇದನಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದಾಳೆ!
ಉತ್ತರ ಪ್ರದೇಶದ ಶಂಭಾಲ್ ಜಿಲ್ಲೆಯ ಯುವತಿಯೊಬ್ಬಳು ಇಂಥದ್ದೊಂದು ವಿಚಿತ್ರ ಅರ್ಜಿಯನ್ನು ಕೋರ್ಟ್‌ ಮುಂದಿಟ್ಟಿದ್ದಾಳೆ. ಮೊದಲು ಶರಿಯಾ ಕೌಟುಂಬಿಕ ನ್ಯಾಯಾಲಯದಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಅರ್ಜಿಯನ್ನು ಗಮನಿಸಿದ ನ್ಯಾಯಾಧೀಶರು ಅಚ್ಚರಿಗೊಂಡದ್ದು ಮಾತ್ರವಲ್ಲದೇ ತಮ್ಮ ಲೈಫ್‌ನಲ್ಲಿಯೇ ಇಂಥದ್ದೊಂದು ಅರ್ಜಿ ನೋಡಿಲ್ಲ ಎಂದು ಹೇಳಿದ್ದಾರೆ. ಈ ಕಾರಣಗಳನ್ನು ಹೊರತುಪಡಿಸಿ ವಿಚ್ಛೇದನ ಪಡೆಯಲು ಬೇರೆ ಯಾವುದಾದರೂ ಕಾರಣಗಳಿವೆಯೇ ಎಂದು ಪ್ರಶ್ನಿಸಿದ್ದು, ಬೇರೆ ಯಾವುದೇ ಕಾರಣವಿಲ್ಲ ಎಂದು ಯುವತಿ ತಿಳಿಸಿದ್ದಾಳೆ.
ಆದ್ದರಿಂದ ವಿಚ್ಛೇದನಕ್ಕೆ ಇದು ಸಮರ್ಪಕ ಕಾರಣವಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಪರಸ್ಪರ ಇಬ್ಬರೂ ಕುಳಿತು ಸಮಸ್ಯೆ ಪರಿಹರಿಸಿಕೊಳ್ಳಿ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಇದನ್ನೂ ಓದಿ:ಗುಡಿಸಲಲ್ಲಿ ನಾಲ್ವರಿಗೆ ಜನ್ಮ ನೀಡಿದ ‘ಅಮ್ಮ’- ವಿಡಿಯೋ ವೈರಲ್‌
ಆದರೆ ಅರ್ಜಿ ವಜಾಗೊಂಡಿದ್ದರಿಂದ ಬೇಸರಗೊಂಡಿರುವ ಯುವತಿ, ಸ್ಥಳೀಯ ಪಂಚಾಯಿತಿಯಲ್ಲಿ ಚರ್ಚಿಸಿದ್ದಾಳೆ. ಆದರೆ ಊರಿನ ಮುಖಂಡರು ಸಹ ಅಸಮರ್ಥತೆಯನ್ನು ಹೊರ ಹಾಕಿದ್ದಾರೆ.
ನಾನು ಯಾವಾಗಲೂ, ಯಾವುದೇ ತಪ್ಪು ಮಾಡಿದರೂ, ಏನೂ ಅನ್ನುವುದಿಲ್ಲ, ಕ್ಷಮಿಸಿಬಿಡುತ್ತಾನೆ. ನಾನು ಅವನೊಂದಿಗೆ ವಾದ ಮಾಡಿದರೆ ಸುಮ್ಮನಿರುತ್ತಾನೆ. ಎಲ್ಲದಕ್ಕೂ ಪತಿ ಒಪ್ಪಿಗೆ ಸೂಚಿಸುವ, ಸಹಿಸಿಕೊಳ್ಳುವ ಪತಿಯೊಂದಿಗೆ ಸಂಸಾರ ನಡೆಸುವ ಅಗತ್ಯ ನನಗಿಲ್ಲ ಎಂದು ಈಕೆ ಹೇಳಿದ್ದಾಳೆ.
ಪತಿಯ ಪ್ರೀತಿಯನ್ನು ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಪತಿ ಎಂದೂ ನನ್ನ ಮೇಲೆ ಕೂಗಾಡಲಿಲ್ಲ. ಯವುದೇ ವಿಷಯದ ಬಗ್ಗೆ ನನಗೆ ನಿರಾಸೆ ಮಾಡಿಲ್ಲ. ಇಂತಹ ವಾತಾವರಣದಿಂದಾಗಿ ನನಗೆ ಉಸಿರುಗಟ್ಟಿದಂತಗುತ್ತಿದೆ. ಕೆಲವೊಮ್ಮೆ ಅವನೇ ಅಡುಗೆ ಮಾಡಿ ನನಗೆ ಬಡಿಸುತ್ತಾನೆ. ಮನೆ ಕೆಲಸ ಮಾಡಲು ಸಹ ಸಹಾಯ ಮಾಡುತ್ತಾನೆ. ವಿವಾಹವಾಗಿ 18 ತಿಂಗಳು ಕಳೆದರೂ, ಈ ವರೆಗೆ ಪತಿಯೊಂದಿಗೆ ಒಂದು ಬಾರಿಯೂ ಜಗಳವಾಡಿಲ್ಲ ಎಂದು ವರದಿಯಲ್ಲಿ ಯುವತಿ ಉಲ್ಲೇಖಿಸಿದ್ದಾಳೆ.
ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಇದನ್ನೇ ಮುಂದಿಟ್ಟು, ಇದೀಗ ಉನ್ನತ ಕೋರ್ಟ್‌ಗೆ ಹೋಗಲು ಯುವತಿ ತಯಾರಿ ನಡೆಸಿದ್ದಾಳೆ.
ಸೆಪ್ಟೆಂಬರ್‌ನಲ್ಲಿ ಶಾಲೆ ಶುರುವಾಗತ್ತಾ? ಸಚಿವ ಸುರೇಶ್‌ಕುಮಾರ್‌ ಏನು ಹೇಳಿದ್ದಾರೆ ಕೇಳಿ…

ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!

ನಾಯಿಗಳು ಕಚ್ಚಿ ತಿಂದ ಕರೊನಾ ಸೋಂಕಿತನ ಶವ!

ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!

ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ

ಹೋಟೆಲ್‌ನಲ್ಲಿ ರಾತ್ರಿ ಕಳೆದ ಪ್ರೇಮಿಗಳು ಮಾರನೆಯ ದಿನ ಶವವಾದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
