ಮುಂಬೈ:ಪತಿಯಿಂದ ಸಹಿಸಬಾರದ ನೋವನ್ನೆಲ್ಲಾ ಸಹಿಸಿ ಅನಾರೋಗ್ಯಪೀಡಿತರಾಗಿ ಕೊನೆಗೆ ಕರೊನಾ ಸೋಂಕಿಗೆ ಬಲಿಯಾದವರು ಹಿಂದಿಯ ಕಿರುತೆರೆ ನಟಿ ದಿವ್ಯಾ ಭಟ್ನಾಗರ್​. ಪತಿಯ ಹಿಂಸೆ ತಾಳದೇ ಆತನಿಂದ ಬೇರ್ಪಟ್ಟು ಮಗಳೊಂದಿಗೆ ವಾಸವಿದ್ದ 34 ವರ್ಷದ ಈ ನಟಿಯ ಸಾವಿನ ಬಳಿಕ ಈಗ ಅವರು ಅನುಭವಿಸಿರುವ ಕರಾಳ ಬದುಕು ಒಂದೊಂದೇ ಹೊರಬರುತ್ತಿದೆ.
ಕೆಲ ದಿನಗಳ ಹಿಂದಷ್ಟೇ ದಿವ್ಯಾ ಅವರ ಸ್ನೇಹಿತೆ ದೆವೊಲೀನಾ ಕೂಡ ಗಂಡನಿಂದ ದಿವ್ಯಾ ಅನುಭವಿಸಿದ್ದ ನೋವನ್ನು ತೆರೆದಿಟ್ಟಿದ್ದರು. ಇದೀಗ ದಿವ್ಯಾ ಅವರ ಸಹೋದರ ದೇವಾಶಿಶ್ ತಮ್ಮ ತಂಗಿಯ ಬದುಕಿನ ಬಗ್ಗೆ ಹೇಳಿಕೆ ನೀಡಿದ್ದಾರೆ.
ದಿವ್ಯಾ ಅವರು ತಮ್ಮೊಂದಿಗೆ ಹಂಚಿಕೊಂಡು ಕೆಲವೊಂದು ಮೆಸೇಜ್​ಗಳನ್ನು ಅವರು ಇದೀಗ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಬಹಿರಂಗಗೊಳಿಸಿದ್ದಾರೆ. ತಮ್ಮ ತಂಗಿ ಪತಿ ಗಗನ್ ಗಬ್ರು ಅವರ ಕೈಯಲ್ಲಿ ಹೇಗೆ ದಿವ್ಯಾ ಹಿಂಸೆ ಅನುಭವಿಸಿದ್ದಾರೆ ಎನ್ನುವುದನ್ನು ಅವರು ಹೇಳಿದ್ದಾರೆ.
ಗಗನ್​ ನನಗೆ ಬೆಲ್ಟ್‌ನಿಂದ ಹೊಡೆದು ಹಿಂಸಿಸುತ್ತಿದ್ದರು. ಅವರು ನನ್ನನ್ನು ಬೆದರಿಸಿ ಮದುವೆಯಾಗಿದ್ದಾರೆ. ಮದುವೆಯಾದಂದಿನಿಂದಲೂ ತುಂಬಾ ಕಿರುಕುಳ ಕೊಡುತ್ತಿದ್ದಾರೆ. ಅನೇಕ ಬಾರಿ ನನ್ನ ಬೆರಳನ್ನು ಮುರಿದಿದ್ದಾರೆ. ಗಗನ್​ ಮಾತ್ರವಲ್ಲದೇ ಅವರ ತಾಯಿ ಕೂಡ ನನಗೆ ಕೊಡಬಾರದ ಚಿತ್ರಹಿಂಸೆ ಕೊಡುತ್ತಿದ್ದಾರೆ ಎಂದು ದಿವ್ಯಾ ಬರೆದಿದ್ದಾರೆ.
ಇದನ್ನೂ ಓದಿ:ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ
ಈ ಬಗ್ಗೆ ಸ್ನೇಹಿತೆ ಕೂಡ ಇದೇ ಮಾತನ್ನು ಹೇಳಿದ್ದರು. ಆತನ ವಿರುದ್ಧ ಶಿಮ್ಲಾ ಪೊಲೀಸ್​ ಠಾಣೆಯಲ್ಲಿ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿದೆ. ಆತ 6 ತಿಂಗಳ ಕಾಲ ಜೈಲುವಾಸದಲ್ಲಿದ್ದು ಇದೀಗ ಜಾಮೀನಿನ ಮೇಲೆ ಹೊರಗಿದ್ದಾನೆ. ಆತ ದಿವ್ಯಾಗೆ ಪ್ರತಿದಿನ ಹೊಡೆಯುತ್ತಿದ್ದ. ಅವಳ ಬಳಿ ಇದ್ದ ಚಿನ್ನಾಭರಣವನ್ನೆಲ್ಲವನ್ನೂ ದೋಚಿದ್ದ.
ಅವನಿಂದಲೇ ಆಕೆಗೆ ಡಯಾಬಿಟಿಸ್​ ಬಂತು. ಅವನಿಂದ ಸಂಪೂರ್ಣವಾಗಿ ಕುಗ್ಗಿದ್ದ ಅವಳು ಕರೊನಾವನ್ನು ತಡೆಯಲಿಲ್ಲ ಎಂದು ದೆವೊಲೀನಾ ಆರೋಪಿಸಿದ್ದರು.
ಆದರೆ ದಿವ್ಯಾ ಇಷ್ಟೆಲ್ಲಾ ಸಹಿಸಿಕೊಂಡು ಇರುವುದೇಕೆ ಎಂದು ನಾನು ಪ್ರಶ್ನಿಸಿದ್ದೆ ಎಂದು ಸಹೋದರ ಹೇಳಿದ್ದಾರೆ. ಗಗನ್​ ಮುಂದೊಂದು ದಿನ ಸರಿಯಾಗಬಹುದು. ಒಮ್ಮೆ ಜೈಲಿಗೆ ಹೋಗಿ ಬಂದಿದ್ದರಿಂದ ಕಿರಿಕಿರಿಯಿಂದ ಆ ರೀತಿ ಮಾಡಿರಬಹುದು ಎಂದು ನಾನು ಅಂದುಕೊಂಡಿದ್ದೆ. ಆದರೆ ಅವರು ಸರಿಯಾಗುವ ಯಾವುದೇ ಸೂಚನೆ ಇರಲಿಲ್ಲ ಎಂದು ದಿವ್ಯಾ ಹೇಳಿರುವುದಾಗಿ ಸಹೋದರ ದೇವಾಶಿಶ್​ ತಿಳಿಸಿದ್ದಾರೆ.
ಅರ್ಚಕರು ಅರೆಬೆತ್ತಲೇಕೆ ಎಂದು ಪ್ರಶ್ನಿಸಿ ಗಲಾಟೆಗೆ ಹೊರಟ ಹೋರಾಟಗಾರ್ತಿ ಅರೆಸ್ಟ್​

ಲಕ್ಷಾಂತರ ರೂ. ಖರ್ಚು ಮಾಡಿ ಮದ್ವೆಯಾದೆ- ಹೆಂಡ್ತಿ ಮುಟ್ಟಲು ಬಿಡುತ್ತಿಲ್ಲ: ದುಡ್ಡೂ ಇಲ್ಲ, ಪತ್ನಿಯೂ ಸಿಗದ ನನಗೇನು ಪರಿಹಾರ?

ಜಗತ್ತಿನ ನಾಲ್ಕನೇ ಸಿರಿವಂತನೀಗ ಅಜ್ಜ: ಗಂಡುಮಗುವಿನ ತಾತನಾದ ಮುಕೇಶ್​ ಅಂಬಾನಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + 15 =
Remember me
