ಮುಂಬೈ:ಬಾಲಿವುಡ್ ನಟಿ 39 ವರ್ಷದ ದಿಯಾ ಮಿರ್ಜಾ ಅವರಿಗೆ ಗಂಡು ಮಗುವಾಗಿದೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಮಾಹಿತಿ ನೀಡಿದ್ದಾರೆ.
ಇದೇ ವರ್ಷ ಫೆಬ್ರವರಿ 15ರಂದು ದಿಯಾ ಮಿರ್ಜಾ ವೈಭವ್ ರೇಖಿಯನ್ನು ಮದುವೆಯಾಗಿದ್ದರು. ಮುಂಬೈ ಮೂಲದ ವೈಭವ್‌ ಅವರು ದ್ಯಮಿ, ಹಣಕಾಸು ಹೂಡಿಕೆದಾರ ಹಾಗೂ ಪಿರಮಲ್ ಫಂಡ್ ಮ್ಯಾನೇಜ್‍ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ. ಆಪ್ತರು ಹಾಗೂ ಕುಟುಂಬದ ಸದಸ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮದುವೆ ಮುಗಿಸುತ್ತಿದ್ದಂತೆಯೇ ದಿಯಾ ಮಿರ್ಜಾ ತಮ್ಮ ಪತಿ ಜೊತೆ ಮಾಲ್ಡೀವ್ಸ್ ಗೆ ಹನಿಮೂನ್‍ಗೆ ತೆರಳಿದ್ದರು. ನಂತರ ತಾವು ಗರ್ಭಿಣಿ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.
ಇದೀಗ ಮಗುವಿನ ಸಂಪೂರ್ಣ ಫೋಟೋ ಬದಲು ಮಗುವೊಂದರ ಕೈ ಹಿಡಿದುಕೊಂಡಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ‘ಇದು ನಮ್ಮ ಹೃದಯದ ಬಡಿತ.. ನಮ್ಮ ಪುತ್ರ ಅವ್ಯಾನ್ ಆಜಾದ್ ರೇಖಿ ಹುಟ್ಟಿದ್ದು ಮೇ 14ರಂದು. ಅವಧಿಗೂ ಮುನ್ನವೇ ಮಗು ಜನಿಸಿದೆ. ಅದನ್ನು ನಿಯೋನೇಟಲ್ ಐಸಿಯುನಲ್ಲಿ ನರ್ಸ್‍ಗಳು ಹಾಗೂ ವೈದ್ಯರು ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದಾರೆ. ಗರ್ಭಾವಸ್ಥೆಯಲ್ಲಿ ತೀವ್ರ ಬ್ಯಾಕ್ಟೀರಿಯಲ್ ಇನ್ಫೆಕ್ಷನ್‌ ಆಗಿದ್ದರಿಂದ ಮಗುವಿನ ಜೀವಕ್ಕೆ ಅಪಾಯವಿತ್ತು. ಆದ್ದರಿಂದ ಕೂಡಲೇ ಎಮರ್ಜೆನ್ಸಿ ಸಿ-ಸೆಕ್ಷನ್ ಮುಖಾಂತರ ನನಗೆ ಹೆರಿಗೆ ಮಾಡಲಾಯಿತು. ಮಗು ಬದುಕುಳಿದಿರುವುದೇ ಪವಾಡ ಎಂದು ತಿಳಿಸಿದ್ದಾರೆ.
ಅಂದಹಾಗೆ ದಿಯಾ ಅವರಿಗೆ ಇದು ಎರಡನೇ ಮದುವೆ. 2014ರಲ್ಲಿ ಉದ್ಯಮಿ ಸಾಹುಲ್ ಸಂಘ ಅವರನ್ನು ಮದುವೆಯಾಗಿದ್ದರು. 2019ರಲ್ಲಿ ವಿಚ್ಛೇದನವಾಗಿತ್ತು. ನಂತರ ಕಳೆದ ಫೆಬ್ರುವರಿಯಲ್ಲಿ ವೈಭವ್‌ ಜತೆ ಮದುವೆಯಾಗಿದ್ದಾರೆ. ವೈಭವ್‌ ಅವರಿಗೂ ಇದು ಎರಡನೆಯ ಮದುವೆ. ಮೊದಲ ಮದುವೆಯಿಂದ ಒಬ್ಬಳು ಮಗಳಿದ್ದಾಳೆ.


A post shared by Dia Mirza (@diamirzaofficial)

ಸಾವಿನ ಬಳಿಕವೂ ಹೀರೋ ಆಗಿಯೇ ಉಳಿದ ಸಂಚಾರಿ ವಿಜಯ್‌- 20 ದಿನಗಳಲ್ಲಿ 230 ಅಂಗಾಂಗ ದಾನ!

ಆರ್ಮಿ ಮೇಜರ್‌ ಜತೆ ನ್ಯಾಯಾಧೀಶೆ ಮದುವೆ: ಜಾಲತಾಣದ ತುಂಬ ಇದರದ್ದೇ ಚರ್ಚೆ- ಯಾಕೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + eight =
Remember me
