ಮುಂಬೈ:ಎರಡು ದಿನಗಳ ಹಿಂದಷ್ಟೇ ಬಾಲಿವುಡ್​ ನಟಿ ದಿಯಾಮಿರ್ಜಾ ತಾವು ಗರ್ಭಿಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಕಳೆದ ತಿಂಗಳಷ್ಟೇ ದಿಯಾ ಅವರು ವೈಭವ್ ರೇಖಿ ಎನ್ನುವವರನ್ನು ಮದುವೆಯಾಗಿದ್ದರು. ಆದರೆ ಮದುವೆಗೆ ಮುಂಚೆಯೇ ಇವರು ಒಟ್ಟಿಗೇ ನೆಲೆಸಿದ್ದರಿಂದ ಮೊದಲೇ ಗರ್ಭಿಣಿಯಾಗಿದ್ದರು.
ಈ ಬಗ್ಗೆ ಅನೇಕ ಮಂದಿ ಕೇಳಿದ ಪ್ರಶ್ನೆಗೆ ದಿಟ್ಟ ಉತ್ತರ ನೀಡಿದ್ದ ದಿಯಾ, ನಾವು ಮಗು ಮಾಡಿಕೊಳ್ಳಲಿದ್ದೆವು. ಹೀಗಾಗಿ ಮೊದಲು ನಾವು ಮದುವೆಯಾಗಲಿಲ್ಲ. ನಮ್ಮ ಜೀವನವನ್ನು ಒಟ್ಟಾಗಿ ಕಳೆಯಬೇಕು ಎಂದು ನಾವು ಮದುವೆಯಾದೆವು. ಮದುವೆ ಯೋಜನೆ ಮಾಡಿಕೊಳ್ಳುತ್ತಿರುವಾಗ ಗರ್ಭಿಣಿಯಾಗಿದ್ದು ತಿಳಿಯಿತು, ಮದುವೆಗೆ ಮೊದಲು ಗರ್ಭಿಣಿಯಾಗಿದ್ದರೆ ತಪ್ಪೇನು ಎಂದು ಪ್ರಶ್ನಿಸಿದ್ದರು.


A post shared by YOGA| WELLNESS| PSYCHOTHERAPY (@sunaina_rekhi)

ಇದೀಗ ದಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅದೇನೆಂದರೆ ಪತಿ ವೈಭವ್ ರೇಖಿ ಅವರ ಮೊದಲ ಪತ್ನಿಯಿಂದ ಹುಟ್ಟಿದ ಮಗಳ ಮದುವೆಯನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಪತಿಯ ಮೊದಲ ಪತ್ನಿಯ ಜತೆ ಬರ್ತಡೇ ಪಾರ್ಟಿಯನ್ನೂ ಸಂಭ್ರಮದಿಂದ ಆಚರಿಸಿಕೊಂಡು ಅದನ್ನು ಜಾಲತಾಣದಲ್ಲಿ ಶೇರ್​ ಮಾಡಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ.
ವೈಭವ್ ರೇಖಿಗೆ ಮೊದಲ ಪತ್ನಿಯಿಂದ ಸಮೈರಾ ಎಂಬ ಪುತ್ರಿ ಇದ್ದು, ದಿಯಾ ದಂಪತಿ ಈಕೆಯನ್ನು ಹನಿಮೂನ್‌ಗಾಗಿ ಮಾಲ್ವೀವ್ಸ್‌ಗೆ ಕೂಡ ಕರೆದುಕೊಂಡು ಹೋಗಿ ಸುದ್ದಿಯಾಗಿದ್ದರು.
ಸಮೈರಾ 12ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಳೆ. ಇದರ ವಿಡಿಯೋದಲ್ಲಿ ಸಮೈರಾ ಬರ್ತಡೇ ಕೇಕ್ ಕಟ್ ಮಾಡುತ್ತಿರುವುದು, ತಾಯಿ ಸುನೈನಾ ರೇಖಿ ಹಾಗೂ ತಂದೆ ವೈಭವಿ ರೇಖಿ ಜೊತೆಗಿರುವುದು, ಸಮೈರಾ ಫ್ರೆಂಡ್ಸ್ ನೆರೆದಿರುವ ದೃಶ್ಯ ಕಾಣಬಹುದಾಗಿದೆ.
ಚೆಕ್​ಬೌನ್ಸ್​ ಪ್ರಕರಣ: ಖ್ಯಾತ ನಟಿ ರಾಧಿಕಾ ದಂಪತಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ

ಮದುವೆಯಾಗಿ ಪರಿತಪಿಸುತ್ತಿದ್ದೇನೆ- ಏನು ಮಾಡಲಿ ನಾನು?

ಹಣ ಕೊಡಿದಿದ್ರೆ ‘ಆ’ ವಿಡಿಯೋ ರಿಲೀಸ್​: ಯುವತಿಯ ಫೇಸ್​ಬುಕ್​ನಿಂದ ಬೆದರಿಕೆ- ಎಂಬಿಎ ಪದವೀಧರ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 2 =
Remember me
