​ನವದೆಹಲಿ:ನ್ಯಾಷನಲ್ ಹೆರಾಲ್ಡ್​ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲವು (ಇಡಿ) ಕಾಂಗ್ರೆಸ್​ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿಯವರಿಗೆ ನೋಟಿಸ್​ ನೀಡಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್​ ನಾಯಕರಿಗೆ ಭಾರಿ ಮುಜುಗರ ಆಗುವಂಥ ಘಟನೆ ಇಂದು ನಡೆದಿದೆ.
ಸೋನಿಯಾ ಗಾಂಧಿ ಕರೊನಾ ಸೋಂಕು ತಗುಲಿದೆ ಎಂದು ಹೇಳುವ ಮೂಲಕ ಆಸ್ಪತ್ರೆಗೆ ದಾಖಲಾಗಿದ್ದರೆ, ರಾಹುಲ್​ ಗಾಂಧಿಯವರನ್ನು ಇಡಿ ನಿನ್ನೆ ಸುಮಾರು 10 ಗಂಟೆ ವಿಚಾರಣೆ ನಡೆಸಿತ್ತು. ಇವತ್ತೂ ವಿಚಾರಣೆ ಮುಂದುವರೆದಿದೆ. ಈ ನಡುವೆಯೇ ಕಾಂಗ್ರೆಸ್​ ದೇಶಾದ್ಯಂತ ಭಾರಿ ಪ್ರತಿಭಟನೆ ನಡೆಸುತ್ತಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ದಿನೇಶ್ ಗುಂಡೂರಾವ್, ಡಿಕೆ ಸುರೇಶ್ ಭಾಗಿಯಾಗಿದ್ದು, ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಐಸಿಸಿ ಕಚೇರಿಯಿಂದ ಇಡಿ ಕಚೇರಿವರೆಗೆ ಪ್ರತಿಭಟನೆ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಭಾರಿ ತಳ್ಳಾಟ ನಡೆದಿದೆ. ಡಿ.ಕೆ.ಸುರೇಶ್​ ಅವರು ತಳ್ಳಾಟ ನಡೆಸಿದ ವೇಳೆ, ಅವರನ್ನು ಪೊಲೀಸರು ಹಿಡಿದುಕೊಂಡು ವ್ಯಾನಿನಲ್ಲಿ ಕುಳ್ಳರಿಸಿದರು. ಪೊಲೀಸರು ತಡೆಯಲು ಬಂದಾಗ ಅವರ ಜತೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಈ ರೀತಿ ಮಾಡಬೇಕಾಗಿ ಬಂತು. ನಿಮ್ಮ ಹಿರಿಯ ಅಧಿಕಾರಿಯನ್ನು ಸ್ಥಳಕ್ಕೆ ಬರಲು ಹೇಳಿ, ನಮ್ಮನ್ನು ಅರೆಸ್ಟ್ ಮಾಡುವುದಕ್ಕೆ ನೀವ್ಯಾರು ಎಂದು ಡಿ.ಕೆ.ಸುರೇಶ್​ ಪ್ರಶ್ನಿಸಿದಾಗ, ತಾವು ಯಾರು ಎನ್ನುವುದನ್ನು ಪೊಲೀಸರು ಕೃತ್ಯದ ಮೂಲಕ ತೋರಿಸಿದರು.
ವ್ಯಾನ್​ನೊಳಕ್ಕೆ ಅವರನ್ನು ತಳ್ಳುತ್ತಿದ್ದಂತೆಯೇ ಸುರೇಶ್​ ಬಿಜೆಪಿ ವಿರುದ್ಧ ಆಕ್ರೋಶಗೊಂಡರು. ಕೂಡಲೇ ಬಿಜೆಪಿಗೆ ಜಿಂದಾಬಾದ್​ ಎಂದರು. ತಕ್ಷಣ ತಾವು ಹೇಳಿದ್ದು ತಪ್ಪಾಯಿತು ಎಂದು ಗೊತ್ತಾಗಿ, ಬಿಜೆಪಿಗೆ ಮುರ್ದಾಬಾದ್​ ಎಂದರು! ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.
VIDEO: ಜಿಂದಾಬಾದ್​ ಜಿಂದಾಬಾದ್ ಹಾಡು ಕೇಳುತ್ತಾ ಇ.ಡಿಗೆ ಹೋದ ರಾಹುಲ್​- ದೇಶಾದ್ಯಂತ ಕೈ ಕಿಚ್ಚು!

ಗ್ಯಾಂಗ್​ರೇಪ್​ ಆರೋಪಿಗಳಿಗೆ ಫೈವ್​ಸ್ಟಾರ್​ ಬಿರಿಯಾನಿ? ಕಾಂಡೋಮ್​ ಬಳಸಿದ್ದವರಿಗೆ ವಿಐಪಿ ಟ್ರೀಟ್​ಮೆಂಟ್​!

Sign in to your account
Please enter an answer in digits:eighteen − seven =
Remember me
